ನವದೆಹಲಿ: ಮನುಷ್ಯ ಜೀವನ ಜೀವಿಸಲು ಆಹಾರ, ಬಟ್ಟೆ ಹಾಗೂ ಮನೆಯ ಅವಶ್ಯಕತೆ ಇದೆ ಎಂದು ಹೇಳಲಾಗುತ್ತದೆ. ಆದರೆ ವ್ಯಕ್ತಿ ನೆಮ್ಮದಿಯಿಂದ ನಿದ್ರೆ ಮಾಡದೆ ಹೋದಲ್ಲಿ ಅವನು ತನ್ನ ಜೀವನದಲ್ಲಿ ಚೈತನ್ಯವನ್ನೇ ಕಳೆದುಕೊಳ್ಳುತ್ತಾನೆ. ದಿನನಿತ್ಯದ ಜೀವನ ಸಾಗಿಸಲು ನಿದ್ರೆಯು ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದಿದೆ.  ನಿದ್ರೆಯ ನಂತರವೇ ದೇಹವು ಮರುದಿನ ಕೆಲಸ ಮಾಡುವ ಶಕ್ತಿಯನ್ನು ಪಡೆಯುತ್ತದೆ. ಪೂರ್ಣ ಪ್ರಮಾಣದ ನಿದ್ರೆಯನ್ನು ಪಡೆಯುವುದರಿಂದ ದೇಹದಲ್ಲಿಶಕ್ತಿ ಬರುತ್ತದೆ. ಇದರಿಂದ ನಾವು ಮೆದುಳಿನ ಎಲ್ಲಾ ಕಾಯಿಲೆಗಳನ್ನು ತೊಡೆದುಹಾಕುತ್ತೇವೆ. ಆದ್ದರಿಂದ ಪ್ರತಿಯೊಬ್ಬರೂ ಸಾಕಷ್ಟು ನಿದ್ರೆ ಪಡೆಯುವುದು ಅವಶ್ಯಕವಾಗಿದೆ.


COMMERCIAL BREAK
SCROLL TO CONTINUE READING

ಒಂದು ವೇಳೆ ನೀವು ಪೂರ್ಣ ಪ್ರಮಾಣದ ನಿದ್ರೆ ಮಾಡದೆ ಹೋದರೆ ನಿಮ್ಮ ಮೆದುಳು ತನ್ನ ಕ್ಷಮತೆಯನ್ನು ತಾನೇ ಕಳೆದುಕೊಳ್ಳಲಿದೆ. ಹೀಗಾದರೆ, ವ್ಯಕ್ತಿ ಅಲ್ಜೈಮರಸ್ ನಂತಹ ಕಾಯಿಲೆಗೂ ಕೂಡ ತುತ್ತಾಗುವ ಸಾಧ್ಯತೆ ಇದೆ. ಈ ಕುರಿತು ಸಂಶೋಧನೆ ನಡೆಸಿರುವ ಸಂಶೋಧಕರು, ಆವಷ್ಯಕತೆಗಿಂತ ಕಡಿಮೆ ಪ್ರಮಾಣದ ನಿದ್ರೆ ಮಾನವನ ಶರೀರದಲ್ಲಿ ಅಲ್ಜೈಮರಸ್ ಹಾಗೂ ಮೆದುಳಿಗೆ ಸಂಬಂಧಿಸಿದ ಇತರೆ ವಿಕಾರಗಳಿಗೆ ಕಾರಣವಾಗುತ್ತದೆ.


ವರ್ಷ 2017 ರಲ್ಲಿ ಇಟಲಿಯ Marche Polytechnic University ಸಂಶೋಧಕರು ಎರಡು ವಿಭಿನ್ನ ಸಮೂಹಗಳ ಇಲಿಗಳನ್ನು ವಿಶೇಷ ಪರಿಸ್ಥಿತಿಗೆ ಒಳಪಡಿಸಿ ಅವುಗಳ ಮೆದುಳಿನ ಅಧ್ಯಯನ ನಡೆಸಿದ್ದಾರೆ. ಈ ವೇಳೆ ಇಲಿಗಳ ಒಂದು ಸಮೂಹಕ್ಕೆ ಮನಸೋ ಇಚ್ಛಾ ಮಲಗಲು ಬಿಡಲಾಗಿದೆ. ಅಂದರೆ, ದಿನದಲ್ಲಿ ಅವುಗಳನ್ನು ಕೇವಲ 8 ಗಂಟೆಗಳು ಮಾತ್ರ ಎಚ್ಚರಿಕೆಯಿಂದ ಇರಲು ಅವಕಾಶ ನೀಡಲಾಗಿತ್ತು. ಎರಡನೇ ಸಮೂಹಕ್ಕೆ ಸತತ ಐದು ದಿನಗಳ ಅವಧಿಗೆ ಮಲಗಲು ಬಿಡಲಾಗಿಲ್ಲ.  ಈ ಅಧ್ಯಯನಕ್ಕೆ ಸಂಬಂಧಿಸಿದಂತೆ   'ನ್ಯೂ ಸೈಂಟಿಸ್ಟ್' ಜರ್ನಲ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಸಂಪೂರ್ಣ ನಿದ್ರೆ ಪಡೆದ ಇಲಿಗಳ ಮೆದುಳಿನ ಸಿನಾಪ್ಸಿ  ಶೇ.6ರಷ್ಟು ಆಸ್ಟ್ರೋಸೈಟ್ ಸಕ್ರೀಯವಾಗಿರುವುದು ಕಂಡುಬಂದಿದೆ. ಕಡಿಮೆ ನಿದ್ರೆ ಮಾಡಿರುವ ಇಲಿಗಳಲ್ಲಿ ಆಸ್ಟ್ರೋಸೈಟ್ ಶೇ.8 ರಷ್ಟು ಸಕ್ರೀಯವಾಗಿರುವುದು ಕಂಡುಬಂದಿದೆ. ಇನ್ನೊಂದೆಡೆ ನಿದ್ರೆಯನ್ನೇ ಮಾಡದ ಇಲಿಗಳಲ್ಲಿ ಇದರ ಪ್ರಮಾಣ ಶೇ.13.5ರಷ್ಟು ಇರುವುದು ಕಂಡುಬಂದಿದೆ.


ಮೆದುಳಿನಲ್ಲಿ ಅನಾವಶ್ಯಕ ಅಂತರ್ಗ್ರಂಥಿಗಳನ್ನು ಬೇರ್ಪಡಿಸುವ ಕೆಲಸ ಆಸ್ಟ್ರೋಸೈಟ್ ಮಾಡುತ್ತದೆ. ಈ ಕುರಿತು ಮಾಹಿತಿ ನೀಡಿರುವ ವಿಶ್ವವಿದ್ಯಾಲಯದ ಮಿಷೆಲ್ ಬೆಲೆಸಿ, " ನಾವು ಮೊದಲ ಬಾರಿಗೆ ನಿದ್ರೆ ಕಡಿಮೆಯಾಗುವುದರ ಮೂಲಕ ಆಸ್ಟ್ರೋಸೈಟ್ ವಾಸ್ತವಿಕ ರೂಪದಲ್ಲಿ ಸೈನೋಪ್ಸೆಸ್ ಭಾಗವನ್ನು ಆಕ್ರಮಿಸಲು ಆರಂಭಿಸುತ್ತದೆ ಎಂಬುದನ್ನು ನಾವು ಮೊದಲ ಬಾರಿಗೆ ತೋರಿಸಿದ್ದೇವೆ" ಎಂದು ಹೇಳಿದ್ದಾರೆ.