ನವದೆಹಲಿ: ರಾತ್ರಿ ವೇಳೆಯಲ್ಲಿ ನಿದ್ದೆ ಬಾರದೆ ಒದ್ದಾಡುತ್ತೀರಾ? ಹಾಗಿದ್ರೆ ಇನ್ಮುಂದೆ ಆ ಸಮಸ್ಯೆಗೆ ಹೇಳಿ ಗುಡ್ ಬೈ! ನಿಮ್ಮ ನಿದ್ರಾಹೀನತೆ ಸಮಸ್ಯೆ ನಿವಾರಣೆಗೆ ಬಾಳೆಹಣ್ಣು ಸಹಾಯ ಮಾಡಲಿದೆ. 


COMMERCIAL BREAK
SCROLL TO CONTINUE READING

ಬಾಳೆಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಊಟದ ನಂತರ ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಾಳೆಹಣ್ಣಿನಲ್ಲಿ ಭಾರೀ ಪ್ರಮಾಣದ ಪೊಟ್ಯಾಷಿಯಂ ಜೊತೆ ವಿಟಮಿನ್ ಸಿ ಹಾಗೂ ಮೆಗ್ನೀಶಿಯಂ ಕೂಡಾ ಇದೆ. ವಿಟಮಿನ್ ಬಿ ಮತ್ತು ಅಯೋಡಿನ್, ಕಬ್ಬಿಣ, ಸೆಲೆನಿಯಂ ಹಾಗೂ ಸತು ಅಂಶ ಕೂಡಾ ಬಾಳೆಹಣ್ಣಿನಲ್ಲಿದ್ದು, ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಜತೆಗೆ ಎಲುಬುಗಳನ್ನೂ ಗಟ್ಟಿಗೊಳಿಸುತ್ತದೆ. 


ಬಾಳೆಹಣ್ಣು ನಿದ್ರಾಹೀನತೆಗೆ ರಾಮಬಾಣ
ರಾತ್ರಿ ವೇಳೆ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬಾಳೆಹಣ್ಣು ರಾಮಬಾಣ. ರಾತ್ರಿ ಹೊತ್ತು ಮಲಗುವ ಮುನ್ನ ಬಾಳೆಹಣ್ಣಿನ ಸಿಪ್ಪೆ ಸಹಿತ ಚಹಾ ತಯಾರಿಸಿ ಕುಡಿಯಿರಿ. ಒಂದು ವಾರದವರೆಗೆ ಹೀಗೆ ಕುಡಿಯುವುದರಿಂದ ನಿಮಗೆ ಒಳ್ಳೆಯ ನಿದ್ದೆ ಬರುತ್ತದೆ. ಅಷ್ಟೇ ಅಲ್ಲದೆ, ಹಿಂದೆಂದಿಗಿಂತಲೂ ಬಹಳ ಉಲಾಸಕರ ಭಾವನೆ ಹೊಂದಿವಿರಿ.


ಬಾಳೆಹಣ್ಣಿನ ಚಹಾ ಮಾಡುವುದು ಹೇಗೆ?
ಚೆನ್ನಾಗಿ ನಿದ್ದೆ ಬಾರದೆ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಒಂದು ಲೋಟ ನೀರನ್ನು ಒಲೆಯ ಮೇಲಿಟ್ಟು ಕಾಯಿಸಿ. ಇದಕ್ಕೆ ದಾಲ್ಚಿನ್ನಿ ಹಾಕಿ ಕುದಿಯಲು ಬಿಡಿ. ನಂತರ ಬಾಳೆಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಕುದಿಯುವ ನೀರಿನಲ್ಲಿ ಹಾಕಿ ಬೇಯಿಸಿ. ಬೆಂದ ನಂತರ ಅದನ್ನು ಫಿಲ್ಟರ್ ಮಾಡಿ, ತಣ್ಣಗಾದ ನಂತರ ಕುಡಿಯಿರಿ. ಪ್ರತಿನಿತ್ಯ ರಾತ್ರಿ ಈ ಚಹಾ ಸೇವಿಸುವುದರಿಂದ ನಿದ್ರಾಹೀನತೆ ನಿವಾರಣೆಯಾಗುತ್ತದೆ.