Olive Fruit as Diabetes Diet: ನಮ್ಮ ದೇಹವನ್ನು ಕ್ರಮೇಣ ದುರ್ಬಲಗೊಳಿಸುವ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದಾಗಿದೆ, ಇದು ಯಾರಿಗಾದರೂ ಒಮ್ಮೆ ಬಂದರೆ, ಜೀವಿತಾವಧಿಯಲ್ಲಿ ಅವರನ್ನು ಬಿಟ್ಟುಬಿಡದೆ ಕಾಡುತ್ತದೆ ಮತ್ತು ಇತರ ಅನೇಕ ರೋಗಗಳಿಗೆ ಆಹ್ವಾನವನ್ನು ನೀಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮಧುಮೇಹದಿಂದ ಬಳಲುತ್ತಿರುವ ಜನರು ತಮ್ಮ ಜೀವನಶೈಲಿ ಮತ್ತು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ, ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಹೆಚ್ಚಾಗುತ್ತದೆ. ಆಲಿವ್ ಹಣ್ಣನ್ನು ಸೇವಿಸಿದರೆ ಅದು ಮಧುಮೇಹದ ವಿರುದ್ಧ ಚಮತ್ಕಾರಿಕ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಗ್ರೇಟರ್ ನೋಯ್ಡಾದ GIMS ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಿದ್ಧ ಆಹಾರ ತಜ್ಞ ಡಾ. ಆಯುಷಿ ಯಾದವ್ ಹೇಳುತ್ತಾರೆ.


COMMERCIAL BREAK
SCROLL TO CONTINUE READING

ಈ ದೇಶಗಳಲ್ಲಿ ಆಲೀವ್ ಹಣ್ಣುಗಳನ್ನು ಬೆಳೆಯುತ್ತಾರೆ 
ಆಲಿವ್ ಹಣ್ಣು ಒಂದು ವಿಲಕ್ಷಣ ಹಣ್ಣಾಗಿದೆ, ಇದನ್ನು ವಿಶೇಷವಾಗಿ ಮೆಡಿಟರೇನಿಯನ್ ದೇಶಗಳಲ್ಲಿ ಬೆಳೆಯಲಾಗುತ್ತದೆ. ಇದಲ್ಲದೆ, ಇದನ್ನು ಉತ್ತರ ಅಮೆರಿಕಾ, ದಕ್ಷಿಣ ಅಮೇರಿಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.
 
ಮಧುಮೇಹಿಗಳು ಆಲೀವ್ ಹಣ್ಣುಗಳನ್ನು ತಿನ್ನಬೇಕು
ಮಧುಮೇಹದ ಕಾಯಿಲೆಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಆಲೀವ್ ಹಣ್ಣನ್ನು ಒಂದು ಸೂಪರ್‌ಫುಡ್ ಎಂದು ಪರಿಗಣಿಸಲಾಗಿದೆ. ಇದು ನೋಡಲು ಚಿಕ್ಕದಾಗಿದ್ದರೂ, ಆರೋಗ್ಯದ ದೃಷ್ಟಿಯಿಂದ ಇದು ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದರಲ್ಲಿ ವಿಟಮಿನ್ ಇ ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಹೇರಳ ಪ್ರಮಾಣದಲ್ಲಿ ಕಂಡುಬರುವ ಕಾರಣ, ಇದು ಮಧುಮೇಹ ಅಷ್ಟೇ ಅಲ್ಲ, ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಂದಲೂ ನಮ್ಮನ್ನು ರಕ್ಷಿಸುತ್ತದೆ.


ಮಧುಮೇಹದ ವಿರುದ್ಧ ಆಲೀವ್ ಹೇಗೆ ಕಾರ್ಯನಿರ್ವಹಿಸುತ್ತವೆ?
ಆಲೀವ್ ಫೈಬರ್‌ನಂತಹ ಪ್ರಮುಖ ಪೋಷಕಾಂಶಗಳ ಆಗರವಾಗಿದೆ, ನೀವು 100 ಗ್ರಾಂ ಅಲೀವ್‌ ಹಣ್ಣುಗಳನ್ನುಗಳನ್ನು ಸೇವಿಸಿದರೆ, ಇದರಲ್ಲಿ 3.2 ಗ್ರಾಂ ಫೈಬರ್, 116 ಕ್ಯಾಲೋರಿಗಳು, 6.3 ಗ್ರಾಂ ಕಾರ್ಬೋಹೈಡ್ರೇಟ್‌ಗಳು ಮತ್ತು ಶೂನ್ಯ ಸಕ್ಕರೆ ನಮ್ಮ ದೇಹಕ್ಕೆ ಲಭ್ಯವಾಗುತ್ತದೆ. ಈ ಎಲ್ಲಾ ಗುಣಗಳು ಈ ಹಣ್ಣನ್ನು ಮಧುಮೇಹ ರೋಗಿಗಳಿಗೆ ಸೂಕ್ತ ಎಂದು ಸಾಬೀತುಪಡಿಸುತ್ತವೆ ಮತ್ತು ಇದು ಮಧುಮೇಹವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತದೆ.


ಆಲೀವ್ ಹಣ್ಣುಗಳನ್ನು ಹೇಗೆ ಸೇವಿಸುವುದು?
>> ಆಲೀವ ಹಣ್ಣುಗಳನ್ನು  ಸೇವಿಸುವ ಅತ್ಯುತ್ತಮ ಮತ್ತು ಜನಪ್ರಿಯ ವಿಧಾನವೆಂದರೆ ಅದರ ಎಣ್ಣೆಯಿಂದ ಆಹಾರವನ್ನು ತಯಾರಿಸಬೇಕು.

>> ಬೆಳಗಿನ ಉಪಾಹಾರದಲ್ಲಿ ನೀವು ಆಲೀವ್ ಹಣ್ಣನ್ನು ಸೇರಿಸಿದರೆ, ಅದು ನಿಮ್ಮ ದೇಹಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.


ಇದನ್ನೂ ಓದಿ-Diet for Men : 40ರ ಬಳಿಕ ಪುರುಷರು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಬೇಕು... ಇಲ್ದಿದ್ರೆ?

>> ನೀವು ಆಲೀವ್ ಹಣ್ಣುಗಳನ್ನು ಕತ್ತರಿಸಿ ಪಾಸ್ತಾ, ಸಲಾಹ್, ಬ್ರೆಡ್ ಮತ್ತು ಇತರ ಅನೇಕ ಪಾಕವಿಧಾನಗಳಿಗೆ ಸೇರಿಸಿಕೊಳ್ಳಬಹುದು.


ಇದನ್ನೂ ಓದಿ-Monsoon Tips: ಮಳೆಗಾಲದ ಋತುವಿನಲ್ಲಿ ಈ ಹರ್ಬ್ ಗಳನ್ನು ಬಳಸಿ ಸುರಕ್ಷಿತವಾಗಿರಿ

(ಹಕ್ಕುತ್ಯಾಗ- ಈ ಲೆಕಹನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ