ಕೊರೊನಾವೈರಸ್ ಹೊಸ ರೂಪಾಂತರ: ಕಳೆದ ಮೂರು ವರ್ಷಗಳಿಂದ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌ನ ಭೀತಿ ಇನ್ನೂ ಕಡಿಮೆ ಆಗಿಲ್ಲ. ಇಲ್ಲಿಯವರೆಗೆ ಅದರ ಹಲವು ರೂಪಾಂತರಗಳು ಬಂದಿವೆ. ಪ್ರತಿಯೊಂದು ರೂಪಾಂತರವು ಹಿಂದಿನದಕ್ಕಿಂತ ಭಿನ್ನವಾಗಿದೆ. ಇತ್ತೀಚಿಗೆ ಕೋವಿಡ್-19 ರ ಹೊಸ ರೂಪಾಂತರವು ಪತ್ತೆಯಾಗಿದೆ. ಇದರ ಹೆಸರು ಓಮಿಕ್ರಾನ್ VA.5. ಈ ರೂಪಾಂತರವು ಹಿಂದಿನ ಎಲ್ಲಾ ರೂಪಾಂತರಗಳಿಗಿಂತ ತುಂಬಾ ಅಪಾಯಕಾರಿ ಎಂದು ಬಣ್ಣಿಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಈ ಕುರಿತಂತೆ ಹಲವು ವಿಷಯಗಳನ್ನು ಬಹಿರಂಗಪಡಿಸಿರುವ  ಅಮೆರಿಕದ ತಜ್ಞರು, ಈ ರೂಪಾಂತರವೂ ಹಿಂದಿನ ಎಲ್ಲಾ ರೂಪಾಂತರಗಳಿಗಿಂತ ಅಪಾಯಕಾರಿ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಈ ಹೊಸ ರೂಪಾಂತರವು ಹಿಂದಿನ ಇತರ ರೂಪಾಂತರಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 


ಇದನ್ನೂ ಓದಿ- ಭಾರತೀಯ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ! ಮತ್ತೆ ವಿದ್ಯಾರ್ಥಿ ವೀಸಾ ನೀಡಲಿದೆ ಚೀನಾ


ಹೊಸ ರೂಪಾಂತರ ಈ ರೀತಿ ದಾಳಿ ಮಾಡುತ್ತದೆ:
Omicron BA.5 ಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ವಿಜ್ಞಾನಿಗಳು, ಈ ಹೊಸ ರೂಪಾಂತರವು ಹಿಂದಿನ ಇತರ ರೂಪಾಂತರಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತದೆ. ಈ ಹಿಂದೆ ಜನರು ಒಮ್ಮೆ ಕರೋನಾ ಪಾಸಿಟಿವ್ ಆದ ನಂತರ ಈ ವೈರಸ್‌ನಿಂದ ವಿನಾಯಿತಿ ಪಡೆಯುತ್ತಿದ್ದರು. ಆದರೆ, ಈ ವೈರಸ್ ಅಷ್ಟು ಸುಲಭವಾಗಿ ಗುಣವಾಗುವುದಿಲ್ಲ ಎಂಬ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಹೊಸ ರೂಪಾಂತರವು ಕೆಲವು ವಾರಗಳಲ್ಲಿ ಬಲಿಪಶುವನ್ನು ಮತ್ತೆ ಮತ್ತೆ ಕಾಡಬಹುದು ಎಂದೂ ಸಹ ಹೇಳಲಾಗಿದೆ. 


ಇದನ್ನೂ ಓದಿ- ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಕರೋನಾ ವೈರಸ್‌ನ ಅಪಾಯ


ಈ ಹೊಸ ರೂಪಾಂತರ ಮಾರಣಾಂತಿಕವಲ್ಲ:
ಈ ಹೊಸ ರೂಪಾಂತರವು ವೇಗವಾಗಿ ಹರಡುವ ಅಪಾಯದ ನಡುವೆ ಇದು ಮಾರಣಾಂತಿಕವಲ್ಲ ಎಂದು ಸಹ ಹೇಳಲಾಗುತ್ತಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಈ ಹಿಂದೆ ಕರೋನಾ ಲಸಿಕೆ ಪಡೆದವರ ಮೇಲೆ ಇದು ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಇದು ಸಂಪೂರ್ಣ ತಪ್ಪು ಕಲ್ಪನೆ ಎಂದು ತಜ್ಞರು ತಿಳಿಸಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.