ಬೆಂಗಳೂರು:ವಿಕಾಸಸೌಧದಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೋವಿಡ್‌ನಿಂದ ಇದೇ ರೀತಿಯಲ್ಲಿ ಕೇರಳದಲ್ಲಿ ಐದು ಜನರ ಸಾವು ಆಗಿದೆ.‌ ಅವರಿಗೂ ಹೃದಯ ಸಂಬಂಧಿ, ಕ್ಯಾನ್ಸರ್ ಸಮಸ್ಯೆ ಜೊತೆಗೆ ಕೋವಿಡ್ ಬಂದ ಹಿನ್ನಲೆಯಲ್ಲಿ ಮೃತ ಪಟ್ಟಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಒಂದು ಸಾವು ಆಗಿದೆ ಎಂದು ಮಾಹಿತಿಯನ್ನು ನೀಡಿದರು.


COMMERCIAL BREAK
SCROLL TO CONTINUE READING

ಕೋವಿಡ್ ಹಿನ್ನಲೆಯಲ್ಲಿ ಮೃತಪಟ್ಟ ವ್ಯಕ್ತಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಜೊತೆಗೆ ಅಸ್ತಮಾ  ಕಾಯಿಲೆ ಕೂಡಾ ಇತ್ತು. ಇದರೊಂದಿಗೆ ಕೋವಿಡ್ ಬಂದ ಹಿನ್ನಲೆಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಚಾಮರಾಜಪೇಟೆಯ ಈ  ವ್ಯಕ್ತಿ ನಗರದ ಮಲ್ಲಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.


ಇದನ್ನೂ ಓದಿ: ಸಕ್ಕರೆ ಕಾಯಿಲೆ ಇರುವವರು ಬೀಟ್ ರೂಟ್ ಸೇವಿಸಬಹುದೇ? ಹೌದು ಎಂದಾದಲ್ಲಿ ಹೇಗೆ?


ಇನ್ನು ಇದೇ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವರ ಜೊತೆಗಿನ ಸಭೆಯ ಬಗ್ಗೆ ಮಾಹಿತಿಯನ್ನು ನೀಡಿದ ಸಚಿವರು, ಕೇಂದ್ರ ಆರೋಗ್ಯ ಸಚಿವ ಹಾಗೂ ಉನ್ನತ ಅಧಿಕಾರಿಗಳು ಹಾಗೂ ಎಲ್ಲಾ ರಾಜ್ಯದ ಆರೋಗ್ಯ ಅಧಿಕಾರಿಗಳು ಭಾಗಿಯಾಗಿದ್ದರು. ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪರಿಸ್ಥಿತಿ ಮಾಹಿತಿ ನೀಡಿದ್ದಾರೆ ಎಂದು‌ ತಿಳಿಸಿದರು. ಸಭೆಯಲ್ಲಿ ವೆಂಟಿಲೇಟರ್ ನಿರ್ವಹಣೆಗೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಐಸಿಎಂಆರ್ ಫೋರ್ಟಲ್ ಡೇಟಾ ಮಾಹಿತಿ ಸಿಗುತ್ತಿಲ್ಲ. ಪೋರ್ಟಲ್ ಸರಿಪಡಿಸಲು ಮನವಿ ಮಾಡಿದ್ದೇವೆ ಎಂದರು.


ಕೋವಿಡ್ ಹಿನ್ನಲೆಯಲ್ಲಿ ಜೆಎನ್ 1 ರೂಪಾಂತರಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಿದೆ. ಅಮೆರಿಕ ಯೂರೋಪ್ ರಾಷ್ಟ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಬಹಳ ವೇಗವಾಗಿ ಹರಡುವ ವೈರಾಣಾಗಿದೆ. ಆದರೆ ಇದು ಹಾನಿಕಾರಕ ಅಲ್ಲ, ಸಾವು ಕೂಡಾ ವಿರಳ. ಈ ನಿಟ್ಟಿನಲ್ಲಿ ಆತಂಕ ಹಾಗೂ ಭಯ ಸೃಷ್ಟಿ ಅಗತ್ಯ ಇಲ್ಲ  ಎಂದು ತಿಳಿಸಿದರು.


ಇದನ್ನೂ ಓದಿ: ನಿತ್ಯ 6-8 ನೆನೆಸಿದ ಬಾದಾಮಿ ತಿನ್ನಿ ಸಾಕು: ಈ ಕಾಯಿಲೆಗಳು ಮತ್ತೆಂದೂ ಬರದಂತೆ ಶಾಶ್ವತವಾಗಿ ಗುಣವಾಗುತ್ತೆ!


ದೇಶದಲ್ಲಿ ಜೆ ಎನ್ 1  20 ಪ್ರಕರಣ ವರದಿಯಾಗಿದೆ. ಗೋವಾದಲ್ಲಿ 18, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ 1 ಪತ್ತೆಯಾಗಿದೆ. ನಮ್ಮಲ್ಲಿ 24 ಗಂಟೆಯಲ್ಲಿ ದೇಶದಲ್ಲಿ ಹೆಚ್ಚು ಟೆಸ್ಟಿಂಗ್ ಆಗಿದೆ. 24 ಗಂಟೆಯಲ್ಲಿ 1020 ಟೆಸ್ಟಿಂಗ್ ಆಗಿದೆ. ಪ್ರತಿ ದಿನ ಇದನ್ನು ಹೆಚ್ಚಳ ಮಾಡಬೇಕು ಉದ್ದೇಶ ಇದೆ ಎಂದು‌ ತಿಳಿಸಿದರು.


ಸಾರಿ ಕೇಸ್,ಐಎಲ್ಐ ಗಳನ್ನು ಆರ್ ಟಿ ಪಿ ಸಿ ಆರ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಕಡ್ಡಾಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮಾಸ್ಕ್ ಹಾಕಲು ಸೂಚನೆ ನೀಡಲಾಗಿದೆ ಎಂದರು.


ಇದನ್ನೂ ಓದಿ: ಹಾಲಿಗೆ ಈ ವಸ್ತುವನ್ನು ಹಾಕಿ ಕುದಿಸಿ ಕುಡಿದರೆ ಮಂಡಿ ನೋವು ಮಾಯವಾಗಿ ಬಿಡುತ್ತದೆ !


ಅಂತರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ಏನು ಕ್ರಮ ಎಂಬ ಬಗ್ಗೆ ಪ್ರಶ್ನೆ ಮಾಡಿದ್ದೆ,ಆದರೆ ಅದರ ಬಗ್ಗೆ ಯಾವುದೇ ನಿಬಂಧನೆಗಳು ಇಲ್ಲ ಎಂದಿದ್ದಾರೆ.‌ಗಡಿ ಭಾಗದಲ್ಲಿ ನಿಬಂಧನೆಗಳ ಬಗ್ಗೆ ಕೇಂದ್ರ ಸೂಚನೆ ನೀಡಿಲ್ಲ.ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಲಿ. ಆದರೂ,ಹೆಚ್ಚು ಜನಜಂಗುಳಿ ಇರುವ ಪ್ರದೇಶದಲ್ಲಿ ಮಾಸ್ಕ್ ಹಾಕಿದರೆ ಉತ್ತಮ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ