Onion Peel: ಈರುಳ್ಳಿ ಸಿಪ್ಪೆಯ ಪ್ರಯೋಜನಗಳನ್ನು ತಿಳಿದರೆ ನೀವು ಖಂಡಿತಾ ಅದನ್ನು ಎಸೆಯುವುದಿಲ್ಲ
Onion Peel Skin Benefits: ಈರುಳ್ಳಿ ಆಹಾರದ ರುಚಿ ಹೆಚ್ಚಿಸಿದರೆ ಅದರ ಸಿಪ್ಪೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಲಿದೆ ಎಂದು ನಿಮಗೆ ತಿಳಿದಿದೆಯೇ?
ಬೆಂಗಳೂರು : Onion Peel Skin Benefits: ಈರುಳ್ಳಿಯಿಲ್ಲದೆ ಭಾರತೀಯ ಆಹಾರ ಪೂರ್ಣ ಎಂದೆನಿಸುವುದಿಲ್ಲ. ಉಪಹಾರದಲ್ಲಾಗಲಿ ಅಥವಾ ಊಟದಲ್ಲಾಗಲಿ ಇತರೆ ತರಕಾರಿಗಳೊಂದಿಗೆ ತಪ್ಪದೇ ಈರುಳ್ಳಿ ಬಳಸಲಾಗುತ್ತದೆ. ಈರುಳ್ಳಿ ಇಲ್ಲದೆ ಆಹಾರ ರುಚಿ ಎನಿಸುವುದಿಲ್ಲ. ಆದರೆ ನಾವೆಲ್ಲರೂ ಸಾಮಾನ್ಯವಾಗಿ ಈರುಳ್ಳಿ ಬಳಸುವಾಗ ಅದರ ಸಿಪ್ಪೆಯನ್ನು ಎಸೆದು ಅದರ ಒಳಭಾಗವನ್ನು ಬಳಸುತ್ತೇವೆ. ಆದರೆ ಈರುಳ್ಳಿಯಂತೆ ಅದರ ಸಿಪ್ಪೆಗಳು ಸಹ ನಿಮಗೆ ಉಪಯುಕ್ತವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಈರುಳ್ಳಿ ಸಿಪ್ಪೆಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು. ಹಾಗಾಗಿ ಬನ್ನಿ ಈರುಳ್ಳಿ ಸಿಪ್ಪೆಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ-
ಬ್ಯಾಡ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ - ಈರುಳ್ಳಿ ಸಿಪ್ಪೆಗಳನ್ನು (Onion Peel) ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಸಿಪ್ಪೆಗಳನ್ನು ತೆಗೆದು ಅದರ ನೀರನ್ನು ಕುಡಿಯಿರಿ. ಹೀಗೆ ಮಾಡುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ - ಅಪ್ಪಿತಪ್ಪಿಯೂ ಕೂಡ ಮುಂಚಿತವಾಗಿ ಹೆಚ್ಚಿಟ್ಟ ಈರುಳ್ಳಿ ಸೇವಿಸಬೇಡಿ... ಕಾರಣ ಇಲ್ಲಿದೆ
ಚರ್ಮದ ಅಲರ್ಜಿ ನಿವಾರಣೆ - ಚರ್ಮದ ಅಲರ್ಜಿಯನ್ನು ತಪ್ಪಿಸಲು, ಈರುಳ್ಳಿ ಸಿಪ್ಪೆಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಈ ನೀರಿನಿಂದ ಬಾಯಿ ತೊಳೆಯಿರಿ.
ನಿಮ್ಮ ಕೂದಲನ್ನು ಸುಂದರಗೊಳಿಸಿ- ಕೂದಲನ್ನು (Hair) ಸುಂದರಗೊಳಿಸಲು ನೀವು ಈರುಳ್ಳಿ ಸಿಪ್ಪೆಗಳ ನೀರನ್ನು ಸಹ ಬಳಸಬಹುದು. ಇದು ನಿಮ್ಮ ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ - ಎಚ್ಚರ! ಈಗ ಈರುಳ್ಳಿಯಿಂದ ಹರಡುತ್ತಿದೆಯಂತೆ ಹೊಸ ಸೋಂಕು
ಕಲೆಗಳನ್ನು ತೆಗೆದುಹಾಕಲು - ಮುಖದ ಮೇಲೆ ಇರುವ ಕಲೆಗಳನ್ನು ತೊಡೆದುಹಾಕಲು, ನೀವು ಈರುಳ್ಳಿ ರಸಯುಕ್ತ ಸಿಪ್ಪೆಯನ್ನು ಬಳಸಬೇಕು. ಇದಕ್ಕಾಗಿ, ಈರುಳ್ಳಿ ಸಿಪ್ಪೆಯಲ್ಲಿ ಅರಿಶಿನವನ್ನು ಬೆರೆಸಿ ಕಲೆ ಇರುವ ಜಾಗದಲ್ಲಿ ಹಚ್ಚಿ.
ಗಂಟಲಿಗೆ ಪ್ರಯೋಜನಕಾರಿ- ನಿಮ್ಮ ಗಂಟಲು ನೋಯುತ್ತಿದ್ದರೆ, ನೀವು ಈರುಳ್ಳಿ ಸಿಪ್ಪೆಯನ್ನು ಬಿಸಿ ನೀರಿನಲ್ಲಿ ಕುದಿಸಿ ನಂತರ ಈ ನೀರನ್ನು ಕುಡಿಯಿರಿ. ಈ ಅನನ್ಯ ಈರುಳ್ಳಿ ಚಹಾ ಗಂಟಲು ಸಂಬಂಧಿತ ಸಮಸ್ಯೆಗಳಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.