Optical Illusion: ಸಾಕಷ್ಟು ಓಡಾಟದಿಂದ ಕೂಡಿದ ಇಂದಿನ ಜೀವನಶೈಲಿಯಲ್ಲಿ ಜನರು ಸಾಕಷ್ಟು ಒತ್ತಡ, ಆತಂಕ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಕೆಲಸ ಅಥವಾ ವೈಯಕ್ತಿಕ ಜೀವನದಿಂದ, ಬದುಕು ಅನೇಕ ಜನರಿಗೆ ಒತ್ತಡವಾಗಿ ಪರಿಣಮಿಸುತ್ತಿದೆ, ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ರೋಗದ ನಂತರದ ಕಾಲದಲ್ಲಿ. ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ (ದೇಶದ ಫಿಟೆಸ್ಟ್ ನಟರಲ್ಲಿ ಒಬ್ಬರು) ದೈಹಿಕವಾಗಿ ಅಷ್ಟೇ ಅಲ್ಲ ಮಾನಸಿಕ ಆರೋಗ್ಯದಲ್ಲಿಯೂ ಸಾಕಷ್ಟು ನಂಬಿಕೆ ಇಡುತ್ತಾರೆ. ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ಇನ್‌ಸ್ಟಾಗ್ರಾಮ್‌ ನ ತಮ್ಮ ಖಾತೆಯಲ್ಲಿ ಅವರು ಹಂಚಿಕೊಳ್ಳುವ ಫಿಟ್‌ನೆಸ್ ಸಂಬಂಧಿಸಿದ ವಿಷಯಗಳಿಂದ ಇದು ಸ್ಪಷ್ಟವಾಗುತ್ತದೆ.


COMMERCIAL BREAK
SCROLL TO CONTINUE READING

ವಿದ್ಯುತ್ ಜಮ್ವಾಲ್ ಕಳೆದ ವರ್ಷ ತಮ್ಮ Instagram ಖಾತೆಯಲ್ಲಿ ಒತ್ತಡ ಮಟ್ಟವನ್ನು ಅಲೆಯುವ ಒಂದು ಪರೀಕ್ಷೆಯನ್ನು ಹಂಚಿಕೊಂಡಿದ್ದಾರೆ, ಇದು ನಿಮ್ಮ ಒತ್ತಡದ ಮಟ್ಟವನ್ನು ಸ್ಪಷ್ಟವಾಗಿ ನಿರ್ಧರಿಸುತ್ತದೆ. ಚಿತ್ರವನ್ನು ಹಂಚಿಕೊಂಡ ಅವರು, ಒತ್ತಡ ಮಟ್ಟದ ಪರೀಕ್ಷೆಯ ಚಿತ್ರವು ಸ್ಟಿಲ್ ಹಾಗೂ ಶಾಂತವಾಗಿದೆ ಎಂದು ಹೇಳಿದ್ದಾರೆ. ಇದು ನಿಮಗೆ ನಿಧಾನವಾಗಿ ಚಲಿಸಿದಂತೆ ಗೋಚರಿಸಿದರೆ ನಿಮ್ಮ ಒತ್ತಡದ ಮಟ್ಟ ಸೌಮ್ಯ ಅಥವಾ ಮಧ್ಯಮವಾಗಿದೆ ಎಂದರ್ಥ. ಒಂದು ವೇಳೆ ಅದು ವೇಗವಾಗಿ ಚಲಿಸಿದಂತೆ ಗೋಚರಿಸಿದರೆ,  ಹೆಚ್ಚು ಒತ್ತಡ ಎಂದರ್ಥ ಎಂದು ಬರೆದುಕೊಂಡಿದ್ದಾರೆ. ಇದು ಸರಳವಾದ ಪರೀಕ್ಷೆಯಾಗಿದ್ದು, ನಾಲ್ಕು ಸೆಟ್ ಕೇಂದ್ರೀಕೃತ ವೃತ್ತಗಳನ್ನು ಒಳಗೊಂಡ ಆಪ್ಟಿಕಲ್ ಇಲ್ಯೂಶನ್ ಅನ್ನು ಇದು ಒಳಗೊಂಡಿದೆ. ನೀವು ಇದುವರೆಗೆ ನಿಮ್ಮ ಪರೀಕ್ಷೆಯನ್ನು ನೀಡಿಲ್ಲ ಎಂದಾರರೆ, ನೀವು ಅದನ್ನು ಪ್ರಯತ್ನಿಸುವ ಸಮಯ ಇದಾಗಿದೆ ಎಂದರ್ಥ.


ಒತ್ತಡದ ಎಚ್ಚರಿಕೆ ಸಂಕೇತಗಳು
ಕೆಲವೊಮ್ಮೆ ಜನರು ತಾವು ಒತ್ತಡಕ್ಕೆ ಒಳಗಾದಾದ ಅದನ್ನು ಅವರು ಅರಿತುಕೊಳ್ಳಲು ವಿಫಲರಾಗುತ್ತಾರೆ.  ಇದಕ್ಕಾಗಿ ಕೆಲವು ಭೌತಿಕ ಸಂಕೇತಗಳಿವೆ. ಈ ಸಂಕೇತಗಳು ವ್ಯಕ್ತಿಯು ಒತ್ತಡಕ್ಕೊಳಗಾಗಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ನಿಮಗೆ ಸಹಾಯ ಮಾಡುತ್ತವೆ.


ಇದನ್ನೂ ಓದಿ-Chyawanprash: ಈ ಜನರು ಮರೆತೂ ಕೂಡ ಚವನ್ಪ್ರಾಶ್ ಸೇವಿಸಬಾರದು... ಕಾರಣ ಇಲ್ಲಿದೆ


>> ನೋವು ಮತ್ತು ಪೀಡೆಗಳು
>> ಎದೆ ನೋವು ಅಥವಾ ನಿಮ್ಮ ಹೃದಯವು ಬಡಿದುಕೊಳ್ಳುವ ಭಾವನೆ
>> ಅನಿಯಮಿತ ಸ್ಲೀಪ್ ಸೈಕಲ್ ಗಳು
>> ಹಠಾತ್ ತೂಕ ಹೆಚ್ಚಾಗುವುದು ಅಥವಾ ತೂಕ ನಷ್ಟ
>> ದಣಿವು ಅಥವಾ ಆಯಾಸ
>> ದದ್ದುಗಳು ಅಥವಾ ಚರ್ಮ ತುರಿಕೆಗಳು
>> ತಲೆನೋವು, ತಲೆತಿರುಗುವಿಕೆ ಅಥವಾ ನಡುಕ
>> ತೀವ್ರ ರಕ್ತದೊತ್ತಡ
>> ಮಹಿಳೆಯರ ರುತುಚಕ್ರದಲ್ಲಿ ಬದಲಾವಣೆಗಳು
>> ಸ್ನಾಯು ಸೆಳೆತ ಅಥವಾ ದವಡೆಯ ಬಿಗಿತ
>> ಹೊಟ್ಟೆ ಅಥವಾ ಅಜೀರ್ಣ ಸಮಸ್ಯೆಗಳು
>> ಲೈಂಗಿಕ ಕ್ರಿಯೆಯಲ್ಲಿ ತೊಂದರೆ
>> ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ


ಇದನ್ನೂ ಓದಿ-Weight Loss Drink: ರಾತ್ರಿ ಮಲಗುವ ಮುನ್ನ ಈ ಪೇಯ ಸೇವಿಸಿ, ಕೆಲವೇ ದಿನಗಳಲ್ಲಿ ಚಮತ್ಕಾರ ನೋಡಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹ್ತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.