Oxygen Level In Body - ಕೊರೊನಾ ವೈರಸ್(Coronavirus) ನ ಈ ಹೊಸ ರೂಪಾಂತರಿ ಶರೀರದಲ್ಲಿ ವೇಗವಾಗಿ ಆಮ್ಲಜನಕವನ್ನು ಹೀರುತ್ತಿದೆ. ಕೇವಲ ಮೂರರಿಂದ ನಾಲ್ಕು ದಿನಗಳ ಸೋಂಕಿನಿಂದಲೇ ದೇಹದಲ್ಲಿನ ಆಕ್ಸಿಜನ್ ಅಪಾಯದ ಮಟ್ಟಕ್ಕೆ ತಲುಪುತ್ತಿದೆ. ಹಲವು ಪ್ರಕರಣಗಳಲ್ಲಿ ಇದು ಕೆಲವೇ ಗಂಟೆಗಳಲ್ಲಿ ಅಪಾಯದ ಮಟ್ಟಕ್ಕೆ ತಲುಪುತ್ತಿದೆ. ವೈರಸ್ ನ ಈ ರೂಪ ವೈದ್ಯರನ್ನೂ ಕೂಡ ಬೆಚ್ಚಿಬೀಳಿಸಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಹೇಳಿಕೆ ನೀಡಿರುವ BRD ಮೆಡಿಕಲ್ ಕಾಲೇಜಿನ TB ಹಾಗೂ ಹೃದಯ ವಿಭಾಗದ ಅಧ್ಯಕ್ಷರಾಗಿರುವ ಅಶ್ವನಿ ಮಿಶ್ರಾ, ಸೋಂಕು ತಗುಲಿದ ಬಳಿಕ ವೈರಸ್ ಪುಪ್ಪುಸದ ಒಳಗಡೆ ವೇಗವಾಗಿ ಪದರುಗಳನ್ನು ನಿರ್ಮಿಸುತ್ತಿದೆ. ಇದರಿಂದ ರಕ್ತಕ್ಕೆ ಆಕ್ಸಿಜನ್ ತಲುಪುತ್ತಿಲ್ಲ. ಇದನ್ನು ಆಕ್ಸಿಡೆಶನ್ ಎಂದು ಕರೆಯುತ್ತಾರೆ. ರೋಗಿಗಳ ರಕ್ತದಲ್ಲಿ ಆಕ್ಸಿಜನ್ ಮಟ್ಟವನ್ನು (Oxygel Level In Body) ಹೆಚ್ಚಿಸಲು ಪ್ರತಿ ನಿಮಿಷಕ್ಕೆ 60 ಲೀಟರ್ ಆಕ್ಸಿಜನ್ ನೀಡ ಬೇಕಾಗುತ್ತಿದೆ. ಸಾಮಾನ್ಯವಾಗಿ ಈ ದರ 8 ರಿಂದ 10  ಲೀಟರ್ ಪ್ರತಿ ನಿಮಿಷ ಇರುತ್ತದೆ. ಹೀಗಾಗಿ ಸೋಂಕಿತರ ಚಿಕಿತ್ಸೆಯಲ್ಲಿ ಆಕ್ಸಿಜನ್ ಬಳಕೆ 5 ರಿಂದ 6 ಪಟ್ಟು ಹೆಚ್ಚಾಗಿದೆ. ಕೊವಿಡ್ ವಾರ್ಡ್ ನಲ್ಲಿ ದಾಖಲಾಗಿರುವ ಸುಮಾರು 40 ರಷ್ಟು ರೋಗಿಗಳು ಯುವಕರಾಗಿದ್ದಾರೆ. ಯುವಕರಲ್ಲಿ ಇದರ ಪ್ರಭಾವ ತುಂಬಾ ಗಂಭೀರವಾಗಿದೆ. ಯುವಕರ ಸಿಟಿ ಸ್ಕ್ಯಾನಿಂಗ್ ಥೋರೆಕ್ಸ್ ದರ 15 ಕ್ಕೂ ಅಧಿಕವಾಗಿದ್ದು, ಇದೊಂದು ಗಂಭೀರ ಸೋಂಕಿನ ಲಕ್ಷಣವಾಗಿದೆ. ಕೆಲ ರೋಗಿಗಳು ರೇಟಿಂಗ್ 20 ರಿಂದ 22 ಕ್ಕೆ ತಲುಪಿದ್ದು, ಅವರ ಚಿಕಿತ್ಸೆ ಮುಂದುವರೆದಿದೆ.


ಸಿಟಿ ಸ್ಕ್ಯಾನಿಂಗ್ ಥೋರೆಕ್ಸ್ (CT Scanning Thorax Rate) ಗಂಟಲು ಹಾಗೂ ಎದೆಯ ಚಿತ್ರಣ ನೀಡುತ್ತದೆ
ಕೊರೊನಾ (Covid-19)ಪತ್ತೆ ಹಚ್ಚಲು ಮತ್ತು ಅದರ ಚಿಕಿತ್ಸೆಗಾಗಿ ಸಿಟಿ ಸ್ಕ್ಯಾನ್ ಥೋರೆಕ್ಸ್ ಪಾತ್ರ ತುಂಬಾ ಮಹತ್ವದ್ದಾಗಿದೆ ಎಂದು ಡಾ. ಅಶ್ವನಿ ಹೇಳುತ್ತಾರೆ. ತನ್ಮೂಲಕ ಗಂಟಲು ಹಾಗೂ ಎದೆ ಭಾಗದ ಸಂಪೂರ್ಣ ಚಿತ್ರಣ ಕಂಡುಬರುತ್ತದೆ. ಸೋಂಕಿನ ಕಾರಣ ಅವರ ದೇಹದ ಒಳಗೆ ನಿರ್ಮಾಣಗೊಂಡ ಚಿತ್ರವನ್ನು ಇದು ತೋರಿಸುತ್ತದೆ. ಇದನ್ನು ಸ್ಕೊರಿಂಗ್ ಎಂದು ಕರೆಯುತ್ತಾರೆ. ಗರಿಷ್ಟ ಸ್ಕೊರಿಂಗ್ 25 ರಷ್ಟು ಇರುತ್ತದೆ. ಸೋಂಕು ಹೆಚ್ಚಾದಷ್ಟು ಸ್ಕೊರಿಂಗ್ ಕೂಡ ಬೆಳೆಯುತ್ತದೆ.


ಇದನ್ನೂ ಓದಿ- IIT Scientists Prediction Covid-19 Second Wave: ದೇಶದಲ್ಲಿ ಕೊರೊನಾ ಎರಡನೇ ಅಲೆಯ ಪೀಕ್ ಯಾವಾಗ? ವಿಜ್ಞಾನಿಗಳು ಹೇಳಿದ್ದೇನು?


ಅಲ್ಬುಲಾಯಿನಲ್ಲಿ ಗೋಡೆ ನಿರ್ಮಿಸುತ್ತಿದೆ ವೈರಸ್ (Coronavirus)
ಹೃದ್ರೋಗ ತಜ್ಞ ಡಾ. ರಿಶಬ್ ಗೋಯೆಲ್ ಹೇಳುವ ಹಾಗೆ ವೈರಸ್ ನ ಹೊಸ ರೂಪಾಂತರಿ ಕೇವಲ ನಾಲ್ಕು ತಿನಗಳ ಒಳಗೆ ಪುಪ್ಪುಸದವರೆಗೆ ತಲುಪಿ ಅದನ್ನು ಸಂಪೂರ್ಣ ಸೋಂಕಿಗೆ ಗುರಿಮಾಡುತ್ತಿದೆ. ಪುಪ್ಪುಸದ ಒಳಗಡೆ ಇರುವ ಅಲ್ಬುಲಾಯಿ ಹಾಗೂ ರಕ್ತದ ನಾಳಗಳ ನಡುವೆ ಗೋಡೆ ನಿರ್ಮಿಸುತ್ತಿದೆ. ಇದರಿಂದ ರಕ್ತದಲ್ಲಿ ಆಕ್ಸಿಜನ್ ಕೊರತೆ ಎದುರಾಗುತ್ತಿದೆ. ಈ ಪ್ರಕ್ರಿಯೆ ತುಂಬಾ ವೇಗವಾಗಿ ನಡೆಯುತ್ತಿದೆ. ಹಲವು ಬಾರಿ ಇದು ರೋಗಿಗಳಿಗೆ ತಿಳಿದುಕೊಳ್ಳಲು ಅವಕಾಶವೇ ನೀಡುತ್ತಿಲ್ಲ.


ಇದನ್ನೂ ಓದಿ- ಕೊರೊನಾ ಹೋರಾಟದಲ್ಲಿ ಭಾರತಕ್ಕೆ ಸಿಕ್ಕ ಮತ್ತೊಂದು ಅಸ್ತ್ರ, Virafin ಔಷಧಿಗೆ DCGI ಅನುಮತಿ


ಸಿಟಿ ಸ್ಕ್ಯಾನಿಂಗ್ ಸ್ಕೊರಿಂಗ್
>>ಅತಿ ಕಡಿಮೆ ಸೋಂಕು - 8 ಕ್ಕಿಂತ ಕೆಳಗೆ
>>ಮಧ್ಯಮ ಸೋಂಕು- 8 ರಿಂದ 15 
>>ಗಂಭೀರ ಸೋಂಕು 15 ಕ್ಕಿಂತ ಅಧಿಕ.


ಇದನ್ನೂ ಓದಿ- Big Relief: ಇನ್ಮುಂದೆ ಕೊರೊನಾ ಚಿಕಿತ್ಸೆ ಕ್ಯಾಶ್ ಲೆಸ್, ವಿಮಾ ಕಂಪನಿಗಳಿಗೆ IRDAI ಆದೇಶ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.