ಹೊಟ್ಟೆಯ ಈ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಕಿಡ್ನಿ ಸ್ಟೋನ್ ಆಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ !ಬೇರೆ ಲಕ್ಷಣಗಳು ಹೀಗಿರುತ್ತವೆ
Kidney Stone Pain :ಕಿಡ್ನಿ ಸ್ಟೋನ್ ಇದ್ದಾಗ ಹೊಟ್ಟೆಯ ಈ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.ಹೀಗಾದಾಗ ಅದು ಕಿಡ್ನಿ ಸ್ಟೋನ್ ಗೆ ಸಂಬಂಧಿಸಿದ್ದಾಗಬಹುದು.
Kidney Stone Pain : ಇತ್ತೀಚಿನ ಫಾಸ್ಟ್ ಲೈಫ್ ನಲ್ಲಿ ಬೆನ್ನುನೋವಿನ ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡುತ್ತಿರುತ್ತದೆ.ಆದರೆ, ಕೆಲವೊಮ್ಮೆ ನಿಮ್ಮನ್ನು ಕಾಡುವ ಬೆನ್ನುನೋವಿಗೆ ಮೂತ್ರಪಿಂಡದ ಕಲ್ಲುಗಳು ಅಂದರೆ ಕಿಡ್ನಿ ಸ್ಟೋನ್ ಕೂಡಾ ಕಾರಣವಾಗಿರಬಹುದು.ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ಸೊಂಟದ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.ಯಾರಿಗೆ ಆಗಲಿ ಸೊಂಟದ ಬಲಭಾಗದಲ್ಲಿ ನಿರಂತರ ನೋವು ಕಾಣಿಸುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಸೊಂಟದ ಭಾಗದಲ್ಲಿ ನೋವು ಕೆಲವೊಮ್ಮೆ ದೀರ್ಘಕಾಲದವರೆಗೆ ಕುಳಿತುಕೊಳ್ಳುವುದರಿಂದ, ಹೆಚ್ಚು ವ್ಯಾಯಾಮ ಮಾಡುವುದರಿಂದ ಅಥವಾ ಗಾಯವಾದರೂ ಉಂಟಾಗುತ್ತದೆ.ಆದರೆ,ಈ ರೀತಿಯ ಯಾವುದೇ ಸಮಸ್ಯೆ ಇಲ್ಲ ಎಂದಿದ್ದರೆ ಈ ಭಾಗದಲ್ಲಿ ಕಾಣಿಸಿಕೊಳ್ಳುವ ನೋವು ಕಿಡ್ನಿ ಸ್ಟೋನ್ ನಿಂದಲೇ ಆಗಿರುತ್ತದೆ.ಸೊಂಟದ ಭಾಗದಲ್ಲಿ ತೀವ್ರವಾದ ನೋವು, ವಾಂತಿ ಮತ್ತು ತಲೆಸುತ್ತುವುದು ಮೂತ್ರ ವಿಸರ್ಜಿಸುವಾಗ ಉರಿ ಕಾಣಿಸಿಕೊಂಡರೆ ಅದು ಮೂತ್ರಪಿಂಡದ ಕಲ್ಲುಗಳ ಲಕ್ಷಣವಾಗಿರಬಹುದು.ಇನ್ನು ಕಿಬ್ಬೊಟ್ಟೆಯ ಬಲ ಅಥವಾ ಎಡ ಭಾಗದಲ್ಲಿ ಕಾಣಿಸಿಕೊಳ್ಳುವ ನಿರಂತರ ನೋವು ಕೂಡಾ ಕಿಡ್ನಿ ಸ್ಟೋನ್ ನಿಂದ ಬರುತ್ತದೆ.
ಮೂತ್ರಪಿಂಡದ ಕಲ್ಲುಗಳ ಇತರ ಲಕ್ಷಣಗಳೆಂದರೆ ಗುಲಾಬಿ ಅಥವಾ ಕಂದು ಬಣ್ಣದ ಮೂತ್ರ,ಮೂತ್ರದಲ್ಲಿ ಕೆಟ್ಟ ವಾಸನೆ, ಪದೇ ಪದೇ ಮೂತ್ರ ಮಾಡುವ ರೀತಿ ಆಗುವುದು, ನಿರಂತರ ಶೀತ ಮತ್ತು ವಾಂತಿ,ಜ್ವರ ಇತ್ಯಾದಿ ಲಕ್ಷಣಗಳು ಕೂಡಾ ಸೇರಿವೆ.
ಮೂತ್ರಪಿಂಡದ ಕಲ್ಲುಗಳ ಕಾರಣಗಳು:
ಮೂತ್ರಪಿಂಡದಲ್ಲಿ ಕಲ್ಲುಗಳು ಯಾವ ಕಾರಣಕ್ಕೆ ರೂಪುಗೊಳ್ಳುತ್ತವೆ ಎಂದು ಹೇಳುವುದಾದರೆ ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಒಬ್ಬ ವ್ಯಕ್ತಿಯು ತನ್ನ ಮೂತ್ರದಲ್ಲಿ ಕ್ಯಾಲ್ಸಿಯಂ,ಆಕ್ಸಲೇಟ್ ಮತ್ತು ಯೂರಿಕ್ ಆಸಿಡ್ ನಂಥಹ ಸ್ಫಟಿಕ ಅಂಶಗಳ ಅತಿಯಾದ ರಚನೆಯಿದ್ದರೆ ಅವನು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೊಂದಿರಬಹುದು.ಕುಟುಂಬದಲ್ಲಿ ಯಾರಿಗದಾರೂ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದಿದ್ದರೆ ಅದು ಮುಂದಿನ ಜನರೇಶನ್ ನಲ್ಲಿಯೂ ಬಾಧಿಸುವ ಸಾಧ್ಯತೆ ಹೆಚ್ಚು.ಇನ್ನು ನಾವು ಸಾಕಷ್ಟು ಪ್ರಮಾಣದ ನೀರನ್ನು ಕುಡಿಯದಿದ್ದರೆ, ಮೂತ್ರಪಿಂಡದ ಕಲ್ಲಿನ ಸಮಸ್ಯೆಗೆ ಒಳಗಾಗುವ ಸಾಧ್ಯತೆಯೂ ಹೆಚ್ಚು.
ಹೆಚ್ಚು ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯೂ ಉಂಟಾಗುತ್ತದೆ.ಸ್ಥೂಲಕಾಯತೆಯ ಸಮಸ್ಯೆ ಇರುವವರಿಗೆ ಕಿಡ್ನಿ ಸ್ಟೋನ್ ಸಮಸ್ಯೆಯೂ ಹೆಚ್ಚು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.