ನಿಷ್ಪ್ರಯೋಜಕ ಎಂದು ಎಸೆಯುವ ಈ ಬೀಜಗಳು ಐದು ರೋಗಗಳನ್ನು ಬುಡದಿಂದಲೇ ಗುಣಪಡಿಸುತ್ತವೆ!
Papaya Seed Benefits : ನಾವು ಪಪ್ಪಾಯ ಹಣ್ನು ತಿನ್ನುತ್ತೇವೆ. ಆದರೆ ಅದರ ಬೀಜಗಳನ್ನು ಎಸೆದು ಬಿಡುತ್ತೇವೆ. ಮತ್ತೆ ಆ ಬೀಜಗಳನ್ನು ಅಂಗಡಿಯಿಂದ ಖರೀದಿಸಬೇಕಾದರೆ ದುಬಾರಿ ಬೆಲೆಯನ್ನು ತೆರೆಬೇಕಾಗುತ್ತದೆ.
ಬೆಂಗಳೂರು : Papaya Seed Benefits : ಕೆಲವೊಂದು ಪದಾರ್ಥಗಳು ಎಷ್ಟು ಪ್ರಯೋಜನಕಾರಿ ಎನ್ನುವ ಅರಿವು ನಮಗೆ ಇರುವುದೇ ಇಲ್ಲ. ಹಾಗಾಗಿ ಅವುಗಳನ್ನು ನಿಷ್ಪ್ರಯೋಜನಕ ಎಂದು ಭಾವಿಸಿ ನಾವು ಎಸೆದು ಬಿಡುತ್ತೇವೆ. ಆದರೆ ನೈಸರ್ಗಿಕವಾಗಿ ಸಿಗುವ ಆ ವಸ್ತುಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಬುಡದಿಂದಲೇ ವಾಸಿ ಮಾಡುವಲ್ಲಿ ಬಹಳ ಸಹಾಕಾರಿಯಾಗಿರುತ್ತವೆ. ಇನ್ನು ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತುಗಳ ಪ್ರಯೋಜನ ಏನು ಎನ್ನುವ ಅರಿವಿಲ್ಲದೆ ಎಸೆಯುವ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಮತ್ತೆ ದುಬಾರಿ ಬೆಲೆ ಕೊಟ್ಟು ಖರೀದಿಸಬೇಕಾಗುತ್ತದೆ. ಅಂಥಹ ವಸ್ತುಗಳಲ್ಲಿ ಒಂದು ಪಪ್ಪಾಯ ಬೀಜ. ನಾವು ಪಪ್ಪಾಯ ಹಣ್ನು ತಿನ್ನುತ್ತೇವೆ. ಆದರೆ ಅದರ ಬೀಜಗಳನ್ನು ಎಸೆದು ಬಿಡುತ್ತೇವೆ. ಮತ್ತೆ ಆ ಬೀಜಗಳನ್ನು ಅಂಗಡಿಯಿಂದ ಖರೀದಿಸಬೇಕಾದರೆ ದುಬಾರಿ ಬೆಲೆಯನ್ನು ತೆರೆಬೇಕಾಗುತ್ತದೆ.
ಪಪ್ಪಾಯ ಬೀಜದ ಪ್ರಯೋಜನಗಳು :
1.ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ :
ಪಪ್ಪಾಯ ಬೀಜಗಳಲ್ಲಿ ಅನೇಕ ಉತ್ಕರ್ಷಣ ನಿರೋಧಕಗಳು ಸೇರಿದಂತೆ ಅನೇಕ ವಿಶೇಷ ಗುಣ ಲಕ್ಷಣಗಳು ಕಂಡು ಬರುತ್ತವೆ. ಇವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ. ಪಪ್ಪಾಯ ಬೀಜಗಳನ್ನು ಸೇವಿಸುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ : ಬೇವಿನ ಎಲೆಗಳನ್ನು ಈ ಸಮಯದಲ್ಲಿ ಜಗಿದು ತಿನ್ನಿ: ಈ 4 ರೋಗಗಳು ಶಾಶ್ವತವಾಗಿ ಗುಣವಾಗುತ್ತವೆ
2.ಮಧುಮೇಹ ನಿಯಂತ್ರಣಕ್ಕೆ :
ಪಪ್ಪಾಯ ಬೀಜಗಳು ಅಧಿಕ ರಕ್ತದ ಸಕ್ಕರೆ ರೋಗಿಗಳಿಗೆ ಪರಿಣಾಮಕಾರಿ ಮನೆಮದ್ದು. ಏಕೆಂದರೆ ಪಪ್ಪಾಯಿ ಬೀಜಗಳಲ್ಲಿ ಫೈಬರ್ ಹೇರಳವಾಗಿ ಕಂಡು ಬರುತ್ತದೆ. ಇದು ರಕ್ತದ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
3.ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ :
ಅಧಿಕ ಕೊಲೆಸ್ಟ್ರಾಲ್ ಇರುವ ರೋಗಿಗಳು ಪಪ್ಪಾಯ ಹಣ್ಣನ್ನು ಮಾತ್ರವಲ್ಲದೆ ಅದರ ಬೀಜಗಳನ್ನೂ ಸೇವಿಸಬಹುದು. ಇದು ಅವರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದಿಲ್ಲ. ಅಪಧಮನಿಗಳಲ್ಲಿ ಎಲ್‌ಡಿಎಲ್ ಸಂಗ್ರಹವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಈ ಎರಡು ತರಕಾರಿಯ ಜ್ಯೂಸ್ ಸೇವಿಸಿದರೆ ಸಾಕು, ನಾರ್ಮಲ್ ಆಗುವುದು ಕೊಲೆಸ್ಟ್ರಾಲ್ !
4.ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :
ವಿವಿಧ ರೋಗಗಳು, ಅಲರ್ಜಿಗಳು ಮತ್ತು ಸೋಂಕುಗಳನ್ನು ತಪ್ಪಿಸಲು ಬಲವಾದ ಪ್ರತಿರಕ್ಷೆಯನ್ನು ಹೊಂದಿರುವುದು ಬಹಳ ಮುಖ್ಯ. ಪಪ್ಪಾಯ ಬೀಜಗಳನ್ನು ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
5.ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ :
ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಪಪ್ಪಾಯ ಬೀಜಗಳನ್ನು ಸೇವಿಸುವುದು ಉತ್ತಮ ಆಯ್ಕೆಯಾಗಿದೆ. ಮಲಬದ್ಧತೆ, ಅಜೀರ್ಣ, ಅತಿಸಾರ, ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಇತರ ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳಂತಹ ಜೀರ್ಣಕಾರಿ ಸಮಸ್ಯೆಗಳಿರುವ ಜನರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.