Passion Fruit: ಸಕ್ಕರೆ ಕಾಯಿಲೆ ಇಂದು ಅನೇಕರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಇದು ವಯಸ್ಕರಿಗೆ ಮಾತ್ರ ಕಿರುಕುಳ ನೀಡುತ್ತಿತ್ತು. ಆದರೆ ಇದೀಗ ದೊಡ್ಡವರಿರಲಿ, ಚಿಕ್ಕವರಿರಲಿ ಎಲ್ಲರಿಗೂ ಈ ಕಾಯಿಲೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. 


COMMERCIAL BREAK
SCROLL TO CONTINUE READING

ಅಸಮರ್ಪಕ ಜೀವನಶೈಲಿ, ವ್ಯಾಯಾಮದ ಕೊರತೆ ಮತ್ತು ದೈಹಿಕ ವ್ಯಾಯಾಮದ ಕೊರತೆಯು ಚಿಕ್ಕ ವಯಸ್ಸಿನಲ್ಲಿಯೇ ಈ ಕಾಯಿಲೆ ನಮ್ಮ ದೇಹವನ್ನು ಆವರಿಸಿಕೊಳ್ಳಲು ಮುಖ್ಯ ಕಾರಣವಾಗಿದೆ. ಈ ಕಾಯಿಲೆಯನ್ನು ಕಂಟ್ರೋಲ್‌ನಲ್ಲಿ ಇಡದಿದ್ದರೆ, ಇದು ದೇಹದ ಹಲವು ಅಂಗಾಂಗಳ ಮೇಲೆ ಪರಿಣಾಮ ಬೀರುತ್ತದೆ.


ಹೃದಯಾಘಾತ, ಕಿಡ್ನಿ ಸಮಸ್ಯೆಯಂತಹ ಆರೋಗ್ಯ ಸಮಸ್ಯೆಗಳು ಕೂಡ ಎದುರಾಗಬಹುದು. ಅದ್ದರಿಂದ ಮಧುಮೇಹ ಇರುವವರು ಶುಗರ್‌ ಅನ್ನು ಕಂಟ್ರೋಲ್‌ನಲ್ಲಿ ಇಡುವುದು ಬಹಳ ಮುಖ್ಯ. ಎಲ್ಲಾ ಹಣ್ಣುಗಳು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಆದರೆ,ಫ್ಯಾಷನ್ ಫ್ರುಟ್‌ ನಮ್ಮ ದೇಹದಲ್ಲಿನ ಶುಗರ್‌ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ರುಚಿಯಾಗಿ ಇರುವುದಷ್ಟೆ ಅಲ್ಲದೆ, ಮಧುಮೇಹಕ್ಕೆ ಉತ್ತಮ ಔಷಧಿಯಾಗಿಯೂ ಕೆಲಸ ಮಾಡುತ್ತದೆ. 


ಕೇವಲ ಈ ಹಣ್ಣು ಅಷ್ಟೆ ಅಲ್ಲ, ಇದರ ಎಲೆಗಳು ಮತ್ತು ಚಿಗುರುಗಳು ಕೂಡ ನಿಮ್ಮ ಶುಗರ್‌ ಅನ್ನು ಕಂಟ್ರೋಲ್‌ನಲ್ಲಿಡಲು ಸಹಾಯ ಮಾಡುತ್ತದೆ. ಇದರ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಶಾಯ ಮಾಡಿ ಸೇವಿಸುವುದರಿಂದ ನಿಮ್ಮ ಬ್ಲಡ್‌ ಶುಗರ್‌ ಕಂಟ್ರೋಲ್‌ನಲ್ಲಿರುತ್ತದೆ.  ಒಂದು ಲೀಟರ್ ನೀರನ್ನು ತೆಗೆದುಕೊಂಡು ಅದರಲ್ಲಿ ತೊಳೆದ ಎಲೆಗಳನ್ನು ಹಾಕಿ. ಇದನ್ನು ಸಿಮ್‌ನಲ್ಲಿ ಹಾಕಿ ಕುದಿಸಿ. ಈ ನೀರನ್ನು ಮೂರು ಭಾಗ ಮಾಡಿ ಮತ್ತು ಒಂದು ಭಾಗವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಎರಡನೆಯದು ಊಟದ ನಂತರ ಮೂರು ಬಾರಿ ಮತ್ತು ಊಟಕ್ಕೆ ಒಂದು ಗಂಟೆ ಮೊದಲು ತೆಗೆದುಕೊಳ್ಳಬೇಕು.


ಸಕ್ಕರೆ ಕಾಯಿಲೆ ಇರುವವರಿಗೆ ಈ ಎಲೆ ತುಂಬಾ ಒಳ್ಳೆಯದು, ಈ ಹಣ್ಣಿನ ಸೇವನೆಯಿಂದ ಇದು, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೂ ಇದು ದೇಹಕ್ಕೆ ಬೇಕಾದ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾರೊಟಿನಾಯ್ಡ್ಗಳು, ಪಾಲಿಫಿನಾಲ್ಗಳನ್ನು ಒದಗಿಸುತ್ತದೆ. ಈ ಹಣ್ಣು ಸಕ್ಕರೆ ಇರುವವರಿಗೆ ಮಾತ್ರವಲ್ಲ ಕೊಲೆಸ್ಟ್ರಾಲ್ ಇರುವವರಿಗೂ ಕೂಡ ತುಂಬಾ ಒಳ್ಳೆಯದು.  ಇದಕ್ಕೆ ಎಲೆಗಳಿಂದ ಕಷಾಯ ಮಾಡಿ ನಿಂಬೆರಸ ಬೆರೆಸಿ ಸೇವಿಸಿದರೆ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಈ ಹಣ್ಣು ಮತ್ತು ಎಲೆಗಳಿಂದ ಮಾಡಿದ ನೀರನ್ನು ಕುಡಿಯುವುದರಿಂದ ರಕ್ತನಾಳಗಳು ಶುದ್ಧವಾಗುತ್ತವೆ. ವಿಟಮಿನ್ ಎ ಈ ನೀರನ್ನು ಕುಡಿಯುವುದು ಕಣ್ಣು ಮತ್ತು ಚರ್ಮಕ್ಕೆ ತುಂಬಾ ಒಳ್ಳೆಯದು.