Cholesterol Lipid Profile Test: ಬದಲಾದ ಜೀವನಶೈಲಿಯಲ್ಲಿ ತೂಕ ಹೆಚ್ಚಳ ಮತ್ತು ಕೊಲೆಸ್ಟ್ರಾಲ್ ಹೆಚ್ಚಿನ ಜನರನ್ನು ಬಾಧಿಸುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆ. ಆದರೆ, ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳವು ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಇದನ್ನು ತಪ್ಪಿಸಲು ಆಗಾಗ್ಗೆ ಲಿಪಿಡ್ ಪ್ರೊಫೈಲ್ ಟೆಸ್ಟ್ ಮಾಡಿಸುವ ಮೂಲಕ ಕೊಲೆಸ್ಟ್ರಾಲ್ ಮೇಲೆ ನಿಗಾ ಇರಿಸುವುದು ತುಂಬಾ ಅಗತ್ಯವಾಗಿದೆ. 


COMMERCIAL BREAK
SCROLL TO CONTINUE READING

ಆರೋಗ್ಯ ತಜ್ಞರ ಪ್ರಕಾರ, ಕೊಲೆಸ್ಟ್ರಾಲ್ ಮಟ್ಟ ತಿಳಿಯಲು ಲಿಪಿಡ್ ಪ್ರೊಫೈಲ್ ಟೆಸ್ಟ್ ಮಾಡಿಸುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ನಿಗಾ ಇರಿಸಬೇಕಾಗುತ್ತದೆ. ವಾಸ್ತವವಾಗಿ, ಲಿಪಿಡ್ ಪ್ರೊಫೈಲ್  ಟೆಸ್ಟ್ ಮಾಡಿಸುವಾಗ ನಮಗೆ ಗೊತ್ತೋ ಗೊತ್ತಿಲ್ಲದೆಯೋ ಮಾಡುವ ಈ ಕೆಲವು ತಪ್ಪುಗಳಿಂದ ನಿಖರವಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ತಿಳಿಯಲು ಸಾಧ್ಯವಾಗದೆ ಇರಬಹುದು. ಹಾಗಾಗಿ, ನೀವು ಲಿಪಿಡ್ ಪ್ರೊಫೈಲ್ ಟೆಸ್ಟ್ ಮಾಡಿಸುವಾಗ ಈ ಕೆಲವು ತಪ್ಪುಗಳಾಗದಂತೆ ನಿಗಾವಹಿಸಿ... ಅವುಗಳೆಂದರೆ... 


* ಉಪವಾಸ: 
ಲಿಪಿಡ್ ಪ್ರೊಫೈಲ್ ಟೆಸ್ಟ್ ನ ಉತ್ತಮ ಫಲಿತಾಂಶಗಳಿಗಾಗಿ, 10 ರಿಂದ 12 ಗಂಟೆಗಳ ಕಾಲ ಉಪವಾಸ ಮಾಡಲು ಸಲಹೆ ನೀಡಲಾಗುತ್ತದೆ. ಆದರೆ, ಕೆಲವರು ಇದನ್ನು ಅನುಸರಿಸುವುದಿಲ್ಲ. ಈ ಮಧ್ಯೆ ಆಹಾರವನ್ನು ಸೇವಿಸುವುದಿಲ್ಲವಾದರೂ ಟೀ, ಕಾಫಿ, ಗ್ರೀನ್ ಟೀಯಂತಹ ಲಿಕ್ವಿಡ್ ಆಹಾರಗಳನ್ನು ತೆಗೆದುಕೊಳ್ಳುತ್ತಾರೆ. ಇದು ಎಲ್‌ಇಡಿ ಮಟ್ಟವನ್ನು ಹೆಚ್ಚಿಸುವುದರಿಂದ ಕೊಲೆಸ್ಟ್ರಾಲ್ ರೀಡಿಂಗ್ಗಳನ್ನು ವಿರೂಪಗೊಳಿಸುತ್ತದೆ. ಹಾಗಾಗಿ, ನೀವು ಲಿಪಿಡ್ ಪ್ರೊಫೈಲ್ ಟೆಸ್ಟ್ ಮಾಡಿಸುವಾಗ ಉಪವಾಸದ ಬಗ್ಗೆ ಹೆಚ್ಚಿನ ನಿಗಾವಹಿಸುವುದು ಅಗತ್ಯ. 


ಇದನ್ನೂ ಓದಿ- ಪದೇ ಪದೇ ಕಾಡುವ ಸೀನುವ ಸಮಸ್ಯೆಗೆ ಅತ್ಯುತ್ತಮ ಪರಿಹಾರ ನೀಡಬಲ್ಲ ಮನೆಮದ್ದುಗಳಿವು


* ನೀರು: 
ಕೊಲೆಸ್ಟ್ರಾಲ್ ಟೆಸ್ಟ್ ಮಾಡಿಸುವ ಒಂದು ದಿನ ಮೊದಲು ದೇಹವನ್ನು ಹೈಡ್ರೀಕರಿಸುವುದು ತುಂಬಾ ಅವಶ್ಯಕವಾಗಿದೆ. ವಾಸ್ತವವಾಗಿ, ಈ ಸಮಯದಲ್ಲಿ ಕೆಲವರು ಅತಿಯಾಗಿ ನೀರು ಕುಡಿಯುವುದರಿಂದ ಇದು ನಿಮ್ಮ ಟೆಸ್ಟ್ ರಿಪೋರ್ಟ್ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಹಾಗಾಗಿ, ಲಿಪಿಡ್ ಪ್ರೊಫೈಲ್ ಟೆಸ್ಟ್ ಮಾಡಿಸುವ ಒಂದು ದಿನ ಮೊದಲು ಕಡಿಮೆ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. 


* ಕೊಬ್ಬಿನಾಂಶವಿರುವ ಆಹಾರಗಳ ಸೇವನೆ: 
ಕೊಲೆಸ್ಟ್ರಾಲ್ ಟೆಸ್ಟ್ ಮಾಡಿಸುವ ಕನಿಷ್ಠ 48 ಗಂಟೆಗಳ ಮೊದಲು ಕೊಬ್ಬಿನಾಂಶವಿರುವ ಆಹಾರಗಳ ಸೇವನೆಯನ್ನು ತಪ್ಪಿಸುವಂತೆ ಸಲಹೆ ನೀಡಲಾಗುತ್ತದೆ. ತಜ್ಞರ ಪ್ರಕಾರ, ನೀವು ಲಿಪಿಡ್ ಪ್ರೊಫೈಲ್ ಟೆಸ್ಟ್  ಮಾಡಿಸುವಾಗ ಅಥವಾ ಅದರ ಹಿಂದಿನ ದಿನ ಕೊಬ್ಬಿನಾಂಶಯುಕ್ತ ಆಹಾರ ಸೇವಿಸುವುದರಿಂದ ಎಲ್‌ಇಡಿ ಮಟ್ಟ ಹೆಚ್ಚಾಗುತ್ತದೆ. ಹಾಗಾಗಿ, ನೀವು ಕೊಲೆಸ್ಟ್ರಾಲ್ ಟೆಸ್ಟ್ ಮಾಡಿಸುವಾಗ ಕಡಿಮೆ ಕೊಬ್ಬಿನ ಆಹಾರಗಳನ್ನು ಸೇವಿಸುವುದು ಉತ್ತಮ ಆಯ್ಕೆಯಾಗಿದೆ. 


* ಒತ್ತಡ: 
ಕೆಲವರಿಗೆ ಕೊಲೆಸ್ಟ್ರಾಲ್ ಟೆಸ್ಟ್ ಮಾಡಿಸುವ ಮುನ್ನವೇ ಅಯ್ಯೋ ಕೊಲೆಸ್ಟ್ರಾಲ್ ಹೆಚ್ಚಾಗಿರಬಹುದು ಎಂಬ ಭಯ ಕೆಲವರನ್ನು ಕಾಡುತ್ತದೆ. ಆದರೆ, ಯಾವುದೇ ಕಾರಣದಿಂದ ನೀವು ಟೆಸ್ಟ್ ಮಾಡಿಸುವ ವೇಳೆ ಆತಂಕಕ್ಕೊಳಗಾಗಿದ್ದರೆ ಲಿಪಿಡ್ ಪ್ರೊಫೈಲ್ ಪರೀಕ್ಷೆಯ ಫಲಿತಾಂಶವು ಸರಿಯಾಗಿ ಬರುವುದಿಲ್ಲ. 


ಇದನ್ನೂ ಓದಿ- ಸಿಹಿ ಕಡುಬಯಕೆ ನಿವಾರಣೆ, ಬೊಜ್ಜು ಮಧುಮೇಹದ ಅಪಾಯ ಕಡಿಮೆ ಮಾಡಬಲ್ಲ ಸಕ್ಕರೆಯ 5 ಪರ್ಯಾಯಗಳಿವು


* ಆಲ್ಕೋಹಾಲ್ ಸೇವನೆ: 
ನೀವು ಕೊಲೆಸ್ಟ್ರಾಲ್ ಟೆಸ್ಟ್ ಮಾಡಿಸುವ 48 ಗಂಟೆಗಳ ಮೊದಲು ಆಲ್ಕೋಹಾಲ್ ಕುಡಿಯುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಇದು ಲಿಪಿಡ್ ಪ್ರೊಫೈಲ್ ಪರೀಕ್ಷೆಯ ಫಲಿತಾಂಶಗಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. 


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.