Cholesterol ರೋಗಿಗಳು ಮೊಟ್ಟೆಯನ್ನು ಮರೆತೂ ಸೇವಿಸಬಾರದು, ಕಾರಣ ಇಲ್ಲಿದೆ
Egg Side Effects: ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಜಾಸ್ತಿ ಇರುವ ಜನರು ಮೊಟ್ಟೆ ಸೇವನೆಯಿಂದ ಅಂತರ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ, ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಅಪಾಯಕಾರಿ ಸ್ವರೂಪ ಪಡೆದುಕೊಳ್ಳಬಹುದು.
Egg Eating In High Cholesterol: ಮೊಟ್ಟೆ ಒಂದು ಪೌಷ್ಟಿಕ ಆಹಾರವಾಗಿದ್ದು ಇದನ್ನು ಮಾಂಸಾಹಾರಿಗಳ ಜೊತೆಗೆ ಶಾಖಾಹಾರಿಗಳೂ ಕೂಡ ಸೇವಿಸುತ್ತಾರೆ. ಬೆಳಗಿನ ಉಪಾಹಾರದಲ್ಲಿ ಹಲವರು ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತಾರೆ. ಏಕೆಂದರೆ ಇದು ತುಂಬಾ ಸುಲಭವಾಗಿ ತಯಾರಾಗುವ ಉಪಹಾರವಾಗಿದ್ದು, ರುಚಿಕರವೂ ಆಗಿರುತ್ತದೆ. ಕೆಲವರು ಮೊಟ್ಟೆಯನ್ನು ಕುದಿಸಿ ಸೇವಿಸಿದರೆ, ಇನ್ನು ಕೆಲವರು ಆಮ್ಲೆಟ್ ಮಾಡಿ ಮೊಟ್ಟೆಯನ್ನು ಸೇವಿಸುತ್ತಾರೆ. ಬೆಳಗಿನ ಉಪಾಹಾರದಲ್ಲಿ ಮೊಟ್ಟೆಯನ್ನು ಸೇವಿಸುವುದರಿಂದ ದೀರ್ಘಕಾಲದವರೆಗೆ ಹಸಿವಿನ ಅನುಭವ ಉಂಟಾಗುವುದಿಲ್ಲ.
ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ದಿನಕ್ಕೆ ಒಂದು ಮೊಟ್ಟೆಯನ್ನು ಸೇವಿಸಿದರೆ ಸಾಕು. ಆದರೆ ಮೊಟ್ಟೆಯ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? AIIMS ನ ಮಾಜಿ ಸಲಹೆಗಾರ ಮತ್ತು Saaol ಹೃದಯ ಕೇಂದ್ರದ ಸಂಸ್ಥಾಪಕ ಮತ್ತು ನಿರ್ದೇಶಕ ಡಾ. ಬಿಮಲ್ ಝಂಜೆರ್ ಪ್ರಕಾರ, ಮೊಟ್ಟೆಗಳ ಸೇವನೆಯು ನಿಮ್ಮ ಆರೋಗ್ಯವನ್ನು ಅವಲಂಬಿಸಿರುತ್ತದೆ. ಒಂದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಸೇವಿಸುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗಬಹುದು.
ಕೆಲವು ದೀರ್ಘಕಾಲದ ಕಾಯಿಲೆಗಳಲ್ಲಿ, ಮೊಟ್ಟೆಯ ಸೇವನೆಯು ಆರೋಗ್ಯವನ್ನು ಹಾನಿಯನ್ನುಂಟು ಮಾಡುತ್ತದೆ. ಒಂದಕ್ಕಿಂತ ಹೆಚ್ಚು ಪೌಷ್ಟಿಕಾಂಶವಿರುವ ಮೊಟ್ಟೆಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಯಾವ ರೋಗಗಳಲ್ಲಿ ಮೊಟ್ಟೆಯ ಸೇವನೆಯು ವಿಷಕ್ಕೆ ಸಮಾನ ಎಂಬುದನ್ನು ತಜ್ಞರಿಂದ ತಿಳಿಯೋಣ.
ಕೊಲೆಸ್ಟ್ರಾಲ್ ರೋಗಿಗಳು ಮೊಟ್ಟೆಗಳನ್ನು ತಪ್ಪಿಸಬೇಕು
ಅಧಿಕ ಕೊಲೆಸ್ಟ್ರಾಲ್ ಇರುವವರು ಮೊಟ್ಟೆಯನ್ನು ಸೇವಿಸುವುದನ್ನು ತಪ್ಪಿಸಬೇಕು. ಮೊಟ್ಟೆಯ ಹಳದಿ ಭಾಗ, ಅಂದರೆ ಹಳದಿ ಲೋಳೆಯು ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ, ಇದು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. 50 ಗ್ರಾಂನ ಮೊಟ್ಟೆಯಲ್ಲಿ 184 ಮಿಲಿಗ್ರಾಂ ಕೊಲೆಸ್ಟ್ರಾಲ್ ಇರುತ್ತದೆ.
ಎರಡು ಮೊಟ್ಟೆಗಳಲ್ಲಿ 155 ಕ್ಯಾಲೋರಿಗಳಿವೆ. ಪ್ರತಿದಿನ ಎರಡು ಮೊಟ್ಟೆಗಳನ್ನು ಸೇವಿಸುವುದರಿಂದ, ದೇಹವು 184 ಮಿಗ್ರಾಂ ಕೊಲೆಸ್ಟ್ರಾಲ್ ಅನ್ನು ಪಡೆಯುತ್ತದೆ, ಇದು 18 ದಿನಗಳವರೆಗೆ ದೇಹದ ಕೊಲೆಸ್ಟ್ರಾಲ್ ಸೇವನೆಯನ್ನು ಪೂರೈಸುತ್ತದೆ. ಅಧಿಕ ಕೊಲೆಸ್ಟ್ರಾಲ್ ಇರುವವರು ಮೊಟ್ಟೆಯನ್ನು ಸೇವಿಸುವುದನ್ನು ನಿಲ್ಲಿಸಬೇಕು. ಎಕೆಂದರೆ ಅವರಿಗೆ ಮೊಟ್ಟೆಯ ಸೇವನೆಯು ವಿಷಕ್ಕೆ ಸಮಾನ ಎಂದು ತಜ್ಞರು ಹೇಳುತ್ತಾರೆ.
ಮೊಟ್ಟೆ ಹೃದಯಾಘಾತಕ್ಕೆ ಕಾರಣವಾಗಬಹುದು
ಹೃದ್ರೋಗಿಗಳಿಗೆ ಮೊಟ್ಟೆ ಸೇವನೆ ವಿಷವಿದ್ದಂತೆ. ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಮತ್ತೊಂದು ಸಂಶೋಧನೆಯು ಪ್ರತಿದಿನ ಎರಡು ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ದೇಹದಲ್ಲಿ ಟ್ರೈಮಿಥೈಲಮೈನ್ ಎನ್-ಆಕ್ಸೈಡ್ (ಟಿಎಂಎಒ) ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಇದು ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ. ಮೊಟ್ಟೆಯ ಸಂಪೂರ್ಣ ಭಾಗವನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ನೀವು ಮೊಟ್ಟೆಯನ್ನು ತಿನ್ನಲು ಬಯಸಿದರೆ, ಅದರ ಬಿಳಿ ಭಾಗವನ್ನು ತಿನ್ನಿರಿ. ಹಳದಿ ಭಾಗವು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹೃದಯ ಸಮಸ್ಯೆ ಇರುವವರು ಮೊಟ್ಟೆಗಳನ್ನು ಸೇವಿಸಬಾರದು, ಇಲ್ಲದಿದ್ದರೆ ಹೃದಯ ಬ್ಲಾಕ್ ಅಪಾಯ ಹೆಚ್ಚಾಗಬಹುದು.
ಇದನ್ನೂ ಓದಿ-ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಬೇಕೆ? ನಿಮ್ಮ ನಿಯಮಿತ ಆಹಾರದಲ್ಲಿರಲಿ ಈ ಸಂಗತಿ
ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಮೊಟ್ಟೆಗಳನ್ನು ಸೇವಿಸಬಾರದು
ಅಧಿಕ ರಕ್ತದೊತ್ತಡ ಇರುವವರು ಮೊಟ್ಟೆಯನ್ನು ಸೇವಿಸುವುದನ್ನು ತಪ್ಪಿಸಬೇಕು. ಮೊಟ್ಟೆಯ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸಬಹುದು. ತಜ್ಞರ ಪ್ರಕಾರ, ಮೊಟ್ಟೆಯ ಹಳದಿ ಲೋಳೆಯಲ್ಲಿ ಕೊಬ್ಬು ಕಂಡುಬರುತ್ತದೆ, ಇದರ ಸೇವನೆಯು ಸ್ಥೂಲಕಾಯತೆಯನ್ನು ಹೆಚ್ಚಿಸುವುದಲ್ಲದೆ ಅಧಿಕ ರಕ್ತದೊತ್ತಡ ರೋಗಿಗಳಿಗೆ ಹಾನಿ ಉಂಟು ಮಾಡುತ್ತದೆ.
ಇದನ್ನೂ ಓದಿ-ನೀರು ಕುಡಿಯುವ ಈ ಆಯುರ್ವೇದದ ನಿಯಮಗಳು ನಿಮಗೆ ತಿಳಿದಿವೆಯೇ?
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.