ನವದೆಹಲಿ: ಶೀಘ್ರದಲ್ಲೇ ಭಾರತದಲ್ಲಿ ಜನರು ಆರೋಗ್ಯ ಸಂಬಂಧಿತ ಎಲ್ಲಾ ಸೇವೆಗಳಿಗೆ ಡಿಜಿಟಲ್ ಮಾಧ್ಯಮ ಪಡೆಯಲಿದ್ದಾರೆ, ಪ್ರತಿಯೊಬ್ಬ ವ್ಯಕ್ತಿಯ ಡಿಜಿಟಲ್ ಆರೋಗ್ಯ ಐಡಿ ತಯಾರಿಕೆಯೊಂದಿಗೆ ಈ ಕಾರ್ಯ ಆರಂಭಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಶೀಘ್ರದಲ್ಲೇ ಈ ಕೆಲಸವನ್ನು ಅನಾವರಣಗೊಳಿಸುವ ನಿರೀಕ್ಷೆ ಇದೇ.


COMMERCIAL BREAK
SCROLL TO CONTINUE READING

ಇದಕ್ಕಾಗಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಅಡಿಯಲ್ಲಿ  ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಅರಚಿಸಲಾಗುತ್ತಿದೆ. ಈ ಮಿಶನ್ ಮೂಲಕ, ಜನರ ಆರೋಗ್ಯದ ಎಲ್ಲಾ ಮಾಹಿತಿ ಮತ್ತು ಸೇವೆಗಳಿಗೆ ವೇದಿಕೆಯನ್ನು ಸಿದ್ಧಪಡಿಸಲಾಗುತ್ತದೆ. ಇದೇ ವೇಳೆ ಪ್ರತಿಯೊಬ್ಬರಿಗೂ ಆರೋಗ್ಯ ಐಡಿ ನೀಡಲಾಗುತ್ತಿದೆ. ಈ ಐಡಿಯಲ್ಲಿ ಆ ವ್ಯಕ್ತಿಗೆ ಸಂಬಂಧಿಸಿದ ಎಲ್ಲಾ ಆರೋಗ್ಯ ಮಾಹಿತಿಯನ್ನು ನೇರವಾಗಿ ಸೇರಿಸಬಹುದಾಗಿದೆ. ಅವನ ವಯಸ್ಸಿನಿಂದ ಹಿಡಿದು ರಕ್ತದ ಗುಂಪಿನವರೆಗೆ, ಹೆಲ್ತ್ ಹಿಸ್ಟರಿಯಿಂದ ಔಷಧಿ,  ಅಲರ್ಜಿಗಳವರೆಗೆ ಹಲವು ಮಾಹಿತಿಗಳು ಇದರಲ್ಲಿ ಇರಲಿವೆ. ಇದೇ ವೇಳೆ, ಈ ಮಿಶನ್ ನಲ್ಲಿ ವೈದ್ಯರ ವೇದಿಕೆಗಳು, ಆರೋಗ್ಯ ಸೌಲಭ್ಯಗಳಾದ ಆಸ್ಪತ್ರೆಗಳು, ಕ್ಲಿನಿಕ್ ಲ್ಯಾಬ್‌ಗಳ ಮಾಹಿತಿ ಸಹ ಇರಲಿವೆ.


NDHM ಮೂಲಕ ನಾಲ್ಕು ವಿಷಯಗಳ ಮೇಲೆ ವಿಶೇಷ ಗಮನ ನೀಡಲಾಗುವುದು
1. ಆರೋಗ್ಯ ಐಡಿ ವ್ಯವಸ್ಥೆ, ಇದರಲ್ಲಿ ಜನರ ಆರೋಗ್ಯ ಐಡಿ ರಚಿಸಲಾಗುವುದು.
2. Digi ಡಾಕ್ಟರ್, ಇದರಲ್ಲಿ ಎಲ್ಲ ವೈದ್ಯರ ಯುನಿಕ್ ಐಡಿ ಇರಲಿದೆ ಹಾಗೂ ಅವರ ಎಲ್ಲ ಮಾಹಿತಿ ಇರಲಿದೆ.
3. ಹೆಲ್ತ್ ಫೆಸಿಲಿಟಿ ರಜಿಸ್ಟ್ರಿ, ಇದರಲ್ಲಿ ಎಲ್ಲ ಆಸ್ಪತ್ರೆಗಳು, ಕ್ಲಿನಿಕ್. ಲ್ಯಾಬ್ ಗಳು ಇದಕ್ಕೆ ಶಾಮೀಲಾಗಿ ಯುನಿಕ್ ಐಡಿ ಪಡೆಯಬಹುದು. ಜೊತೆಗೆ ತಮ್ಮ ಮಾಹಿತಿ ಅಪ್ಡೇಟ್ ಮಾಡಬಹುದು.
4. ಪರ್ಸನಲ್ ಹೆಲ್ತ್ ರಿಕಾರ್ಡ್, ಇದರಲ್ಲಿ ಜನರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಪ್ಲೋಡ್ ಮಾಡಬಹುದು, ಸಂಗ್ರಹಿಸಬಹುದು. ಇದರ ಜೊತೆಗೆ ನೇರವಾಗಿ ವೈದ್ಯರು ಹಾಗೂ ಲ್ಯಾಬ್ ಇತ್ಯಾದಿಗಳಿಂದ ಇಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಸಲಹೆಗಳನ್ನು ಪಡೆಯಬಹುದು.


ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಆರೋಗ್ಯ ಐಡಿ ಮತ್ತು ವೈಯಕ್ತಿಕ ಆರೋಗ್ಯ ದಾಖಲೆ ವ್ಯವಸ್ಥೆಯ ಮೂಲಕ ಪಡೆಯಬಹುದು. ಪ್ರತಿಯೊಬ್ಬ ವ್ಯಕ್ತಿಗೆ ವಿಭಿನ್ನ ಐಡಿ ನೀಡಲಾಗುವುದು, ಆದರೆ ಯಾರೊಬ್ಬರ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ವ್ಯಕ್ತಿಯ ಅನುಮತಿಯಿಲ್ಲದೆ ಇದರಲ್ಲಿ ನೋಡಲು ಸಾಧ್ಯವಿಲ್ಲ.


ಇದರ ನಂತರ, ಟೆಲಿಮೆಡಿಸಿನ್ ಮತ್ತು ಇ-ಫಾರ್ಮಸಿ ಯಂತಹ ಸೌಲಭ್ಯವನ್ನು ಪ್ರಾರಂಭಿಸುವ ಯೋಜನೆ ಇರಲಿದೆ. ಆದರೆ ಈ ಸೇವೆ ಪ್ರಾರಂಭಿಸುವ ಮೊದಲು ನಿಯಮಗಳನ್ನು ಸಿದ್ಧಪಡಿಸಲಾಗುತ್ತಿದೆ. ಹೀಗಾಗಿ ಈ ಸೇವೆ ಆರಂಭಗೊಳ್ಳಲು ಸ್ವಲ್ಪ ಹೆಚ್ಚು ಸಮಯಾವಕಾಶ ಬೇಕಾಗಲಿದೆ.


ಈ ಯೋಜನೆ ಸಂಪೂರ್ಣ ಸ್ವಯಂಪ್ರೇರಿತವಾಗಿರಲಿದೆ, ಅಂದರೆ ಯಾವುದೇ ರೀತಿಯ ಒತ್ತಾಯ ಇರುವುದಿಲ್ಲ. ಸಂಪೂರ್ಣವಾಗಿ ಸ್ವಯಂಪ್ರೇರಿತ ಆಧಾರದ ಮೇಲೆ, ಸೇರಲು ಬಯಸುವ ಜನರು ಮಾತ್ರ ಇದರಲ್ಲಿ ತಮ್ಮ ಮಾಹಿತಿ ಸೇರಿಸಬಹುದು. ಈ ಯೋಜನೆಯು ರೋಗಿಗೆ ಉತ್ತಮ ಸೌಲಭ್ಯಗಳು ಸಿಗಲಿವೆ, ವೈದ್ಯರಿಗೆ ಸರಿಯಾದ ಚಿಕಿತ್ಸೆಯನ್ನು ನೀಡಲು ಇದು ಸಹಾಯ ಮಾಡಲಿದೆ ಮತ್ತು ಸಂಪೂರ್ಣ ಡೇಟಾವನ್ನು ಸಂಗ್ರಹವಾಗಲಿದೆ. ಆ ಡೇಟಾ ಬಳಸಿ, ಎಲ್ಲಿ ಮತ್ತು ಯಾವ ರೀತಿಯ ಸೌಲಭ್ಯಗಳು ಬೇಕಾಗಲಿದೆ ಎಂಬುದು ಇದರಿಂದ ಸರ್ಕಾರಕ್ಕೆ ತಿಳಿಯಲಿದೆ. ಅಲ್ಲದೆ, ಅಲ್ಲಿ ಯಾವ ರೀತಿಯ ನೀತಿಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಆರೋಗ್ಯವನ್ನು ಹೇಗೆ ಸುಧಾರಿಸಬೇಕು ಎಂಬುದು ತಿಳಿಯಲಿದೆ.