Guava Side Effects On Health : ಋತುವಿಗನುಗುಣವಾಗಿ  ಹಣ್ಣು ತರಕಾರಿಗಳನ್ನು ಪ್ರಕೃತಿ ನಮಗೆ ನೀಡುತ್ತದೆ. ಹಾಗೆಯೇ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಹೇರಳವಾಗಿ ಕಂಡು ಬರುವ ಹಣ್ಣು ಪೇರಳೆ ಹಣ್ಣು. ಇದನ್ನು ಸೀಬೇಕಾಯಿ, ಚೇಪೆಕಾಯಿ ಎಂದೆಲ್ಲಾ ಕರೆಯುತ್ತಾರೆ. ಈ ಹಣ್ಣು ತಿನ್ನಲು ಬಹಳ ರುಚಿಯಾಗಿರುತ್ತದೆ. ಮಾತ್ರವಲ್ಲ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ. ಈ ಹಣ್ಣಿನಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ.  ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಅನೇಕ ಖನಿಜಗಳು ಈ ಹಣ್ಣಿನಲ್ಲಿ ಇದರಲ್ಲಿ ಕಂಡುಬರುತ್ತವೆ.  ಇಷ್ಟೆ ಲ್ಲಾ ಆರೋಗ್ಯ ಗುಣಗಳಿದ್ದರೂ ಈ ಹಣ್ಣನ್ನು ಎಲ್ಲರೂ ತಿನ್ನುವಂತಿಲ್ಲ. ಕೆಲವೊಂದು ಸಮಸ್ಯೆಯಲ್ಲಿ ಪೇರಳೆ ಹಣ್ಣನ್ನು ತಿಂದರೆ ಸಮಸ್ಯೆ ಉಲ್ಬಣಿಸಿ ಬಿಡುತ್ತದೆ. ಹಾಗಾಗಿ ಈ ಕೆಳಗಿನ ಸಮಸ್ಯೆಗಳಿದ್ದವರು ಯಾವುದೇ ಕಾರಣಕ್ಕೂ ಪೇರಳೆ ಹಣ್ಣನ್ನು ಸೇವಿಸಬಾರದು. 


COMMERCIAL BREAK
SCROLL TO CONTINUE READING

ಶೀತ ಮತ್ತು ಕೆಮ್ಮು :
ಪೇರಳೆ ಹಣ್ಣು ತಂಪಾದ ಗುಣವನ್ನು ಹೊಂದಿದೆ. ಇದನ್ನು ತಿನ್ನುವುದರಿಂದ ನೆಗಡಿ, ಕೆಮ್ಮಿನ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ನೆಗಡಿ, ಕೆಮ್ಮುವಿನ ಸಮಸ್ಯೆಯಿಂದ ಬಳಲುತ್ತಿರುವವರು ಪೇರಳೆ ಹಣ್ಣನ್ನು ತಿನ್ನಬಾರದು. ಅದರಲ್ಲೂ ಕೆಮ್ಮಿನ ಸಮಸ್ಯೆ ಯಿಂದ ಬಳಲುತ್ತಿರುವವರು ಪೇರಳೆ ಹಣ್ಣು ಸೇವಿಸಿದರೆ ಸಮಸ್ಯೆ ಉಲ್ಬಣಿಸಿ  ಆರೋಗ್ಯ ಸಂಪೂರ್ಣ ಹದಗೆಡಬಹುದು. 


ಇದನ್ನೂ ಓದಿ : ಆರೋಗ್ಯಕರವಾಗಿ ತೂಕ ಇಳಿಸಲು ನಿತ್ಯ ಸೇವಿಸಿ ಈ ಮ್ಯಾಜಿಕ್ ಟೀ


ಹಲ್ಲಿನ ಸಮಸ್ಯೆ :
ಪೇರಳೆ ತಿನ್ನಲು ತುಂಬಾ ಗಟ್ಟಿಯಾಗಿದೆ. ಇನ್ನು ಪೇರಳೆ ಸರಿಯಾಗಿ ಹಣ್ಣಾಗದೆ ಇದ್ದಲ್ಲಿ ಅದನ್ನು ಜಗಿಯುವುದೂ ಕಷ್ಟ. ಹಲ್ಲು ಅಥವಾ ಒಸಡುಗಳಲ್ಲಿ ಸಮಸ್ಯೆ ಇದ್ದರೆ, ಪೇರಳೆ ಹಣ್ಣನ್ನು ತಿನ್ನುವುದನ್ನು ತಪ್ಪಿಸಬೇಕು. ಪೇರಳೆ ಹಣ್ಣು ತಿನ್ನುವುದರಿಂದ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಈ ಕಾರಣದಿಂದಾಗಿ, ಹಲ್ಲುಗಳಲ್ಲಿ ಹುಳುಕು ಕಾಣಿಸಿಕೊಳ್ಳುತ್ತದೆ. 


ಅತಿಸಾರ ಮತ್ತು ಗ್ಯಾಸ್ : 
ಪೇರಳೆಯಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ  ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಪೇರಲೇ ಹಣ್ಣಿನಿಂದ ದೂರ ಇರುವುದೇ ಸೂಕ್ತ. ಅತಿಸಾರ ಅಥವಾ  ಗ್ಯಾಸ್ ಸಮಸ್ಯೆಯಿದ್ದರೆ ಪೇರಳೆ ಹಣ್ಣನ್ನು ತಿನ್ನಬಾರದು. ಇದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.  


ಇದನ್ನೂ ಓದಿ : Skipping Breakfast: ಬೆಳಗ್ಗಿನ ಆಹಾರ ತ್ಯಜಿಸಿದರೆ ಈ ಗಂಭೀರ ಕಾಯಿಲೆ ಬಾಧಿಸುವುದು ಖಚಿತ…ಎಚ್ಚರ!


ಹೆಚ್ಚಿನ ಸಕ್ಕರೆ :
ಮಧುಮೇಹದಲ್ಲಿ ಪೇರಲೇ ಹಣ್ಣನ್ನು ತಿನ್ನಬಹುದು. ಆದರೆ ರಕ್ತದಲ್ಲಿ ಸಕ್ಕರೆಯ ಮಟ್ಟವು ತೀರಾ ಅಧಿಕವಾಗಿದ್ದರೆ ಪೇರಳೆ ಹಣ್ಣು ತಿನ್ನದಿರುವುದು ಒಳ್ಳೆಯದು. ಪೇರಳೆ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆಯಿರುವುದರಿಂದ . ಇದು ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಲು ಕಾರಣವಾಗಬಹುದು.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.