Ladies figer Side effects : ಬೆಂಡೆಕಾಯಿ ತಿನ್ನಲು ಅತ್ಯಂತ ರುಚಿಕರ ತರಕಾರಿ.ಅನೇಕ ಜನರು ಅದರ ರುಚಿಯನ್ನು ಇಷ್ಟಪಡುತ್ತಾರೆ.ಇದು ತೂಕ ನಷ್ಟಕ್ಕೆ ಆರೋಗ್ಯಕರ ಆಹಾರವಾಗಿದೆ.ಅದರ ನೀರನ್ನು ಕುಡಿಯುವ ಮೂಲಕ ಮಧುಮೇಹ,ಅಧಿಕ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.ಇದು ಉತ್ತಮ ಫೈಬರ್ ಜೊತೆಗೆ ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿದೆ. ಅದನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ.ಈ ಗುಣಗಳ ಹೊರತಾಗಿಯೂ,ಕೆಲವರು ಬೆಂಡೆಕಾಯಿ ಸೇವಿಸುವಂತಿಲ್ಲ.


COMMERCIAL BREAK
SCROLL TO CONTINUE READING

ಯಾರು ಬೆಂಡೆಕಾಯಿ ತಿನ್ನುವಂತಿಲ್ಲ : 
ಮೂತ್ರಪಿಂಡದ ಕಲ್ಲು : 

ಬೆಂಡೆಕಾಯಿ ತರಕಾರಿಯಲ್ಲಿ ಹೆಚ್ಚಿನ ಮಟ್ಟದ ಆಕ್ಸಲೇಟ್‌ಗಳಿವೆ.ಆದ್ದರಿಂದ ಹೆಚ್ಚು ಲೇಡಿಫಿಂಗರ್ ಅನ್ನು ಸೇವಿಸಿದಾಗ,ಅದು ಮೂತ್ರಪಿಂಡದ ಕಲ್ಲಿನ ಸಮಸ್ಯೆಗಳನ್ನು ಉಂಟುಮಾಡಬಹುದು.ಮೂತ್ರಪಿಂಡದ ಹೊರತಾಗಿ, ಪಿತ್ತಕೋಶದಲ್ಲಿ ಕಲ್ಲುಗಳ ರಚನೆಯ ಅಪಾಯ ಕೂಡಾ ಕಂಡು ಬರುತ್ತದೆ. 


ಇದನ್ನೂ ಓದಿ : ಪೇರಲ ಎಲೆಗೆ ಫುಲ್ ಡಿಮ್ಯಾಂಡ್..! ಒಂದು ಟನ್ ಬೆಲೆ ತಿಳಿದರೆ ಶಾಕ್ ಆಗ್ತೀರಾ..


ದುರ್ಬಲ ಜೀರ್ಣಕ್ರಿಯೆ ಹೊಂದಿರುವವರು :
ಅತಿಯಾಗಿ ಬೆಂಡೆಕಾಯಿ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚುತ್ತದೆ. ಇದು ಹೊಟ್ಟೆಯ ಗ್ಯಾಸ್,ಜಠರಗರುಳಿನ ಸಮಸ್ಯೆಗಳು, ಹೊಟ್ಟೆ ಉಬ್ಬರ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.


ಅಧಿಕ ಕೊಲೆಸ್ಟ್ರಾಲ್ :
ಸೀಮಿತ ಪ್ರಮಾಣದಲ್ಲಿ ಬೆಂಡೆಕಾಯಿ ಸೇವಿಸುವುದರಿಂದ ಹೈ ಕೊಲೆಸ್ಟ್ರಾಲ್  ಸಮಸ್ಯೆ ಕಾಡಬಹುದು. ಬೆಂಡೆಕಾಯಿ ಬೇಯಿಸುವ ವೇಳೆ ಎಣ್ಣೆಯ ಬಳಕೆ ಹೆಚ್ಚು ಇರುವುದರಿಂದ ಕೊಲೆಸ್ಟ್ರಾಲ್ ಸಮಸ್ಯೆ ಕೂಡಾ ಹೆಚ್ಚುತ್ತದೆ. 


ಇದನ್ನೂ ಓದಿ : ಕಿಡ್ನಿ ಸ್ಟೋನ್ ಅನ್ನು ಪುಡಿ ಮಾಡಿ ಮೂತ್ರದ ಮೂಲಕವೇ ಹೊರ ಹಾಕುತ್ತದೆ ಈ ವಸ್ತು! ಅಸಹನೀಯ ನೋವಿನಿಂದಲೂ ಸಿಗುವುದು ಪರಿಹಾರ


ಸೈನಸ್ :
ಸೈನಸ್ ಮತ್ತು ಕೆಮ್ಮಿನಂತಹ ಸಮಸ್ಯೆಗಳ ಸಂದರ್ಭದಲ್ಲಿ,ಬೆಂಡೆಕಾಯಿ ಸೇವನೆಯನ್ನು ಕಡಿಮೆ ಮಾಡಬೇಕು. ಇಲ್ಲವಾದರೆ ಅದು ಅನೇಕ ಸಮಸ್ಯೆಯನ್ನು ಹೆಚ್ಚಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.