Health Tips : ಈ ಆರೋಗ್ಯ ಸಮಸ್ಯೆ ಇದ್ದರೆ ಉದ್ದಿನ ಬೇಳೆ ಹಾಕಿದ ಇಡ್ಲಿ- ದೋಸೆ ತಿನ್ನಲೇ ಬಾರದು!
Urad dal Side Effects : ದಕ್ಷಿಣ ಭಾರತದ ಪ್ರತಿ ಮನೆಯಲ್ಲಿ ಸಾಮಾನ್ಯವಾಗಿ ಮಾಡುವ ತಿಂಡಿ ಇಡ್ಲಿ- ದೋಸೆ. ಅದರಲ್ಲೂ ಕೆಲವರಂತೂ ಪ್ರತಿದಿನ ಇಡ್ಲಿಯನ್ನು ತಿನ್ನತ್ತಾರೆ. ಆದರೆ ಇದು ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಒಳ್ಳೆಯದಲ್ಲ.
Urad dal Side Effects : ದಕ್ಷಿಣ ಭಾರತದ ಪ್ರತಿ ಮನೆಯಲ್ಲಿ ಸಾಮಾನ್ಯವಾಗಿ ಮಾಡುವ ತಿಂಡಿ ಇಡ್ಲಿ- ದೋಸೆ. ಅದರಲ್ಲೂ ಕೆಲವರಂತೂ ಪ್ರತಿದಿನ ಇಡ್ಲಿಯನ್ನು ತಿನ್ನತ್ತಾರೆ. ಆದರೆ ಇದು ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಒಳ್ಳೆಯದಲ್ಲ. ಅದರಲ್ಲೂ ಉದ್ದಿನ ಬೇಳೆ ಹಾಕಿದ ದೋಸೆ ಅಥವಾ ಇಡ್ಲಿಯನ್ನು ಇಂತಹ ಜನರು ತಿನ್ನಬಾರದು. ಇದು ಅವರ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಿಸಬಹುದು.
ಉದ್ದಿನ ಬೇಳೆ ವಿವಿಧ ರೀತಿಯ ಪೌಷ್ಟಿಕಾಂಶದ ಮೌಲ್ಯಗಳನ್ನು ಹೊಂದಿದೆ. ಇವು ದೇಹವನ್ನು ಸದೃಢಗೊಳಿಸುತ್ತವೆ. ಮಾನವ ದೇಹಕ್ಕೆ ಹಲವಾರು ಪ್ರಯೋಜನಗಳಿವೆ, ಆದರೆ ಇದು ಕೆಲವರಿಗೆ ಅಡ್ಡಪರಿಣಾಮ ನೀಡುತ್ತದೆ. ಇದನ್ನು ತಿಂದರೆ ಆಗುವ ದುಷ್ಪರಿಣಾಮ ತಿಳಿಯದ ಅನೇಕರು ಈ ಉದ್ದಿನ ಬೇಳೆಯನ್ನು ಸೇವಿಸುತ್ತಿದ್ದಾರೆ. ಉದ್ದಿನ ಬೇಳೆಯನ್ನು ಅತಿಯಾಗಿ ಸೇವಿಸುವುದರಿಂದ ಯೂರಿಕ್ ಆಸಿಡ್ ಸಮಸ್ಯೆ ಹೆಚ್ಚಾಗುತ್ತದೆ.
ಇದನ್ನೂ ಓದಿ : Health News : ತಿಂಗಳಿಗೆ ಎಷ್ಟು ಬಾರಿ ಸೆಕ್ಸ್ ಮಾಡಿದರೆ ಒಳ್ಳೆಯದು? ಹೀಗಂತಾರೆ ತಜ್ಞರು
ಉದ್ದಿನ ಬೇಳೆಯನ್ನು ಪ್ರತಿನಿತ್ಯ ತಿನ್ನುವವರು ಜಾಗರೂಕರಾಗಿರಬೇಕು. ಏಕೆಂದರೆ ಇದನ್ನು ತಿನ್ನುವುದರಿಂದ ಅನೇಕ ತೊಂದರೆಗಳು ಉಂಟಾಗುತ್ತವೆ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಉದ್ದಿನ ಬೇಳೆ ತಿನ್ನಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಈ ಸಮಸ್ಯೆಗಳಿಂದ ಬಳಲುತ್ತಿರುವವರು ಉದ್ದಿನ ಬೇಳೆ ತಿನ್ನಲೇಬಾರದು:
ಈಗಾಗಲೇ ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರು ಉದ್ದಿನ ಬೇಳೆಯನ್ನು ತಿನ್ನಬಾರದು.
ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ಉದ್ದಿನ ಬೇಳೆಯನ್ನು ತಿನ್ನಬಾರದು.
ಮಲಬದ್ಧತೆ, ಹೊಟ್ಟೆಯಲ್ಲಿ ಗ್ಯಾಸ್, ಹೊಟ್ಟೆ ಉಬ್ಬರ ಮುಂತಾದವುಗಳ ಸಮಸ್ಯೆ ಇದ್ದವರು ಉದ್ದಿನ ಬೇಳೆಯನ್ನು ತಿನ್ನುವುದರಿಂದ ಮತ್ತಷ್ಟು ಅನಾರೋಗ್ಯ ಬಾಧಿಸುತ್ತದೆ.
ಯೂರಿಕ್ ಆಸಿಡ್ ದೇಹದಲ್ಲಿ ಹೆಚ್ಚಾಗಿದ್ದರೆ, ಅಂತಹ ಜನರು ಇದನ್ನು ತಪ್ಪಿಸಬೇಕು. ಇವು ಮೂತ್ರಪಿಂಡದಲ್ಲಿ ಕಲ್ಲುಗಳ ಬೆಳವಣಿಗೆಗೆ ಕಾರಣವಾಗುತ್ತವೆ.
ದೋಸೆ-ಇಡ್ಲಿಗೆ ಉದ್ದಿನಬೇಳೆಯ ಬದಲುಇದನ್ನು ಹಾಕಿ :
ಮೇಲಿನ ಸಮಸ್ಯೆಗಳಿರುವವರು, ಇಡ್ಲಿ ಅಥವಾ ದೋಸೆ ತಯಾರಿಸುವಾ ಉದ್ದಿನ ಬೇಳೆಯನ್ನು ಬಳಸಬೇಡಿ. ಇಡ್ಲಿ ಅಥವಾ ದೋಸೆ ಹಿಟ್ಟು ತಯಾರಿಸುವಾಗ ಉದ್ದಿನ ಬೇಳೆ ಬಿಟ್ಟು ಅಕ್ಕಿ ಮತ್ತು ಮೆಂತ್ಯವನ್ನು ಬಳಸಿ. ಇದರಿಂದ ನಿಮ್ಮ ಆರೋಗ್ಯ ಸದೃಢವಾಗಿರಬಹುದು.
ಇದನ್ನೂ ಓದಿ : Health Tips: ಚಳಿ ಎಂದು ಸಾಕ್ಸ್ ಧರಿಸಿ ಮಲಗುತ್ತೀರಾ? ಈ ತಪ್ಪನ್ನು ಎಂದಿಗೂ ಮಾಡಬೇಡಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.