ಈ ಆರೋಗ್ಯ ಸಮಸ್ಯೆಯಿದ್ದವರು ಶುಂಠಿ ಟೀ ಕುಡಿಯಲೇಬಾರದು! ರುಚಿಗಿಂತ ಅಪಾಯವೇ ಹೆಚ್ಚು!
Ginger Tea Side Effects: ಶುಂಠಿಯು ಜಿಂಜರಾಲ್ ಎಂಬ ಅಂಶವನ್ನು ಹೊಂದಿರುತ್ತದೆ. ಇದು ಕೀಲು ಮತ್ತು ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ, ಆದರೆ ಅದರ ಅತಿಯಾದ ಪ್ರಮಾಣವು ಹೊಟ್ಟೆಯಲ್ಲಿ ಆಮ್ಲವನ್ನು ಉತ್ಪಾದಿಸುತ್ತದೆ. ಜೊತೆಗೆ ಹೊಟ್ಟೆ ಉರಿ ಸಂವೇದನೆಯನ್ನು ಉಂಟುಮಾಡುತ್ತದೆ.
Ginger Tea Side Effects: ಆಯಾಸವಾಗಲಿ, ಒತ್ತಡವಾಗಲಿ ಅಥವಾ ಶಕ್ತಿಯ ಕೊರತೆಯಾಗಲಿ ಅನೇಕರಿಗೆ ಚಹಾ ಕುಡಿಯುವುದರಿಂದ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಅದರಲ್ಲೂ ಕೆಲವರು ಶುಂಠಿ ಚಹಾವನ್ನು ಇಷ್ಟಪಟ್ಟು ಕುಡಿಯುತ್ತಾರೆ. ಆದರೆ ಶುಂಠಿ ಚಹಾವನ್ನು ಕೆಲವೊಂದು ಸಮಯದಲ್ಲಿ ಸೇವಿಸಿದರೆ, ಅದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಶುಂಠಿಯು ಉಷ್ಣ ಸ್ವಭಾವವನ್ನು ಹೊಂದಿದ್ದು, ಬೇಸಿಗೆಯಲ್ಲಿ ಇದರ ಅತಿಯಾದ ಪ್ರಮಾಣವು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಶುಂಠಿಯು ಜಿಂಜರಾಲ್ ಎಂಬ ಅಂಶವನ್ನು ಹೊಂದಿರುತ್ತದೆ. ಇದು ಕೀಲು ಮತ್ತು ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ, ಆದರೆ ಅದರ ಅತಿಯಾದ ಪ್ರಮಾಣವು ಹೊಟ್ಟೆಯಲ್ಲಿ ಆಮ್ಲವನ್ನು ಉತ್ಪಾದಿಸುತ್ತದೆ. ಜೊತೆಗೆ ಹೊಟ್ಟೆ ಉರಿ ಸಂವೇದನೆಯನ್ನು ಉಂಟುಮಾಡುತ್ತದೆ.
ಇದನ್ನೂ ಓದಿ: ಅಂದು ಕಸ ಹೆಕ್ಕಿ ಜೀವನ ನಡೆಸುತ್ತಿದ್ದಾತ.. ಇಂದು ಕ್ರಿಕೆಟ್ ಲೋಕಕ್ಕೇ ‘ಬಾಸ್’! ಈತ RCBಯ ಸ್ಟಾರ್ ಬ್ಯಾಟ್ಸ್’ಮನ್ ಕೂಡ ಹೌದು
ಕಡಿಮೆ ರಕ್ತದೊತ್ತಡ ಹೊಂದಿರುವ ಜನರು ಶುಂಠಿ ಚಹಾವನ್ನು ಕುಡಿಯಬಾರದು. ಇದು ದೇಹಕ್ಕೆ ಚೈತನ್ಯ ನೀಡುವ ಬದಲು, ತಲೆತಿರುಗುವಿಕೆ ಮತ್ತು ವೀಕ್ನೆಸ್ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ಶುಂಠಿ ಚಹಾ ಅಧಿಕ ರಕ್ತದೊತ್ತಡ ರೋಗಿಗಳಿಗೆ ಪ್ರಯೋಜನಕಾರಿ ಎನ್ನಲಾಗುತ್ತದೆ.
ನಿದ್ರಾಹೀನತೆಯಿಂದ ಬಳಲುತ್ತಿರುವ ಜನರಿಗೆ ಶುಂಠಿ ಚಹಾ ಹಾನಿಕಾರಕ. ಹೆಚ್ಚು ಶುಂಠಿ ಟೀ ಕುಡಿಯುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ನಿದ್ರೆಯ ಕೊರತೆಯು ಜೀರ್ಣಕ್ರಿಯೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಅತಿಯಾಗಿ ಶುಂಠಿ ಚಹಾವನ್ನು ಕುಡಿಯುವುದು ಅತಿಸಾರಕ್ಕೆ ಕಾರಣವಾಗಬಹುದು. ಅತಿಸಾರವು ದೇಹವನ್ನು ದುರ್ಬಲಗೊಳಿಸುತ್ತದೆ ಮತ್ತು ಬೇಸಿಗೆಯಲ್ಲಿ ಅತಿಸಾರದ ಸಮಸ್ಯೆಯು ಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸುತ್ತದೆ.
ರಕ್ತಸ್ರಾವದ ಸಮಸ್ಯೆಯಿರುವ ಜನರು ಶುಂಠಿಯನ್ನು ಮಿತವಾಗಿ ಬಳಸಬೇಕು, ಏಕೆಂದರೆ ಇದು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು, ವಿಶೇಷವಾಗಿ ಈಗಾಗಲೇ ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರಲ್ಲಿ.
ಇದನ್ನೂ ಓದಿ: ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಮಾಡುತ್ತೆ ಮಶ್ರೂಮ್! ಇದೇ ವಿಧಾನದಲ್ಲಿ ಸೇವಿಸಿದ್ರೆ ಅಪ್ಪಿತಪ್ಪಿಯೂ ಹೆಚ್ಚಾಗಲ್ಲ
ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ತೆಗೆದುಕೊಳ್ಳಬಾರದು. ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಕಾಳಜಿಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.