ಬಾದಾಮಿಯನ್ನು ಈ ಸಮಯದಲ್ಲಿ ಹೀಗೆ ತಿಂದರಷ್ಟೇ ಲಾಭ ! ಇಲ್ಲವಾದರೆ ಅಪಾಯವೇ !
ಬಾದಾಮಿಯನ್ನು ತಪ್ಪಾದ ರೀತಿಯಲ್ಲಿ ಸೇವಿಸಿದರೆ ಕ್ಯಾನ್ಸರ್ ಅಪಾಯ ಕೂಡಾ ಎದುರಾಗಬಹುದು. ಬಾದಾಮಿ ಕಾರ್ಸಿನೋಜೆನಿಕ್ ಅಂಶಗಳನ್ನು ಒಳಗೊಂಡಿದೆ.
ಬೆಂಗಳೂರು : ಪ್ರತಿಯೊಬ್ಬರೂ ವಿಭಿನ್ನ ಆಹಾರ ಮತ್ತು ಪಾನೀಯಗಳನ್ನು ಸೇವಿಸುವ ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ, ಕೆಲವು ಆಹಾರ ಪದಾರ್ಥಗಳನ್ನು ಸರಿಯಾದ ಕ್ರಮದಲ್ಲಿ ಸೇವಿಸಿದರೆ ಮಾತ್ರ ಅದರ ಲಾಭ ನಮ್ಮ ದೇಹಕ್ಕೆ ಸಿಗುವುದು. ಬಹುತೇಕ ಮಂದಿಗೆ ಯಾವ ಆಹಾರ ಹೇಗೆ ಸೇವಿಸಬೇಕು ಯಾವಾಗ ಸೇವಿಸಬೇಕು ಎನ್ನುವ ಅರಿವೇ ಇರುವುದಿಲ್ಲ. ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎನಿಸಿಕೊಂಡಿರುವ ಬಾದಾಮಿ ಅಂತಹ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಬಾದಾಮಿಯನ್ನು ಸರಿಯಾದ ರೀತಿಯಲ್ಲಿ ಸೇವಿಸದಿದ್ದರೆ ಅಡ್ಡ ಪರಿಣಾಮಗಳನ್ನೂ ಉಂಟುಮಾಡಬಹುದು.
ಒಣ ಹಣ್ಣುಗಳು ಸಾಮಾನ್ಯವಾಗಿ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಅವುಗಳು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಇವುಗಳನ್ನು ಸೇವಿಸುವುದರಿಂದ ಮೆದುಳು ಕೂಡಾ ಚುರುಕಾಗುತ್ತದೆ. ಅದಕ್ಕಾಗಿಯೇ ಬಾಲ್ಯದಿಂದಲೂ ಬಾದಾಮಿ ತಿನ್ನಲು ಶಿಫಾರಸು ಮಾಡಲಾಗುತ್ತದೆ. ಆದರೆ, ಇದನ್ನು ತಪ್ಪಾದ ರೀತಿಯಲ್ಲಿ ಸೇವಿಸಿದರೆ ಕ್ಯಾನ್ಸರ್ ಕೂಡಾ ಕಾಡುವ ಅಪಾಯವಿರುತ್ತದೆ. ದೇಹಕ್ಕೆ ಹಾನಿಕಾರಕವಾದ ಕೆಲವು ಕಾರ್ಸಿನೋಜೆನಿಕ್ ಅಂಶಗಳನ್ನು ಬಾದಾಮಿ ಒಳಗೊಂಡಿದೆ. ಆದ್ದರಿಂದ, ಅವುಗಳನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ತಿನ್ನುವುದು ಮುಖ್ಯ.
ಇದನ್ನೂ ಓದಿ : ಅನ್ನವನ್ನು ಈ ರೀತಿ ಸೇವಿಸಿದರೆ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಪ್ರಮಾಣ ತಕ್ಷಣ ನಿಯಂತ್ರಣಕ್ಕೆ ಬರುತ್ತದೆ!
ಬಾದಾಮಿ ತಿನ್ನಲು ಸರಿಯಾದ ಮಾರ್ಗ:
ಬಾದಾಮಿ ತಿನ್ನುವುದು ಹೇಗೆ? :
ಬಾದಾಮಿಯನ್ನು ರಾತ್ರಿಯಿಡೀ ನೆನೆಸಿ ಮತ್ತು ಸಿಪ್ಪೆಯನ್ನು ತೆಗೆದು ತಿನ್ನಬೇಕು. ಹೀಗೆ ಮಾಡಿದಾಗ ಕ್ಯಾನ್ಸರ್ ಅಪಾಯವನ್ನು ಉಂಟುಮಾಡುವ ಅಂಶಗಳನ್ನು ಹೊರ ಹೋಗುತ್ತವೆ.
ನೆನೆಸಿದ ಬಾದಾಮಿ ತಿಂದರೆ ಏನಾಗುತ್ತದೆ? :
ಬಾದಾಮಿಯು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲ. ಬಾದಾಮಿಯನ್ನು ನೀರಿನಲ್ಲಿ ನೆನೆಸಿದಾಗ ಅವುಗಳ ಪ್ರಯೋಜನಗಳು ದುಪ್ಪಟ್ಟಾಗುತ್ತವೆ. ಬಾದಾಮಿಯನ್ನು ನೆನೆಸಿದಾಗ ಅದು ಲಿಪೇಸ್‌ನಂತಹ ಕೆಲವು ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ. ಇದು ಚಯಾಪಚಯ ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಕಾರಿ.
ಇದನ್ನೂ ಓದಿ : ಪಪ್ಪಾಯಿ ಹಣ್ಣು ಈ ಜನರಿಗೆ ಒಳ್ಳೆಯದಲ್ಲ…! ತಿಂದರೆ ಪ್ರಯೋಜನದ ಬದಲು ಅಪಾಯವೇ ಹೆಚ್ಚು-ಎಚ್ಚರ
ಬಾದಾಮಿಯನ್ನು ಹಾಗೆಯೇ ತಿಂದರೆ ಏನಾಗುತ್ತದೆ ? :
ಯಕೃತ್ತಿನ ಕ್ಯಾನ್ಸರ್ ಅಪಾಯ :
ಬಾದಾಮಿ ಅಥವಾ ಇತರ ದ್ವಿದಳ ಧಾನ್ಯಗಳಲ್ಲಿ ಅಫ್ಲಾಟಾಕ್ಸಿನ್ ಬಿ1 ಇರುತ್ತದೆ. ಇದು ಯಕೃತ್ತಿನ ಕ್ಯಾನ್ಸರ್ ಗೆ ಕಾರಣವಾಗುತ್ತದೆ (ಲಿವರ್ ಕಾರ್ಸಿನೋಜೆನಿಕ್). ಇದರರ್ಥ ಈ ರಾಸಾಯನಿಕವು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಕಿಡ್ನಿಯಲ್ಲಿ ಕಲ್ಲುಗಳಿದ್ದರೆ ಬಾದಾಮಿ ತಿನ್ನಬೇಡಿ :
ಕಿಡ್ನಿ ಸ್ಟೋನ್ ಇರುವವರು ಬಾದಾಮಿ ತಿನ್ನಬಾರದು. ಬಾದಾಮಿಯಲ್ಲಿ ಆಕ್ಸಲೇಟ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳಿರುವ ಜನರಿಗೆ ಗಂಭೀರ ಹಾನಿ ಉಂಟಾಗುತ್ತದೆ.
ಗ್ಯಾಸ್ ಸಮಸ್ಯೆ ಎದುರಾಗಬಹುದು :
ಬಾದಾಮಿಯಲ್ಲಿ ನಾರಿನಂಶ ಅಧಿಕವಾಗಿರುತ್ತದೆ. ಇದರ ಅತಿಯಾದ ಸೇವನೆಯು ಹೊಟ್ಟೆ ಉಬ್ಬರದ ಸಮಸ್ಯೆಯನ್ನು ಉಂಟುಮಾಡಬಹುದು. ಇದು ಅತಿಸಾರ ಮತ್ತು ಹೊಟ್ಟೆ ನೋವನ್ನು ಸಹ ಉಂಟುಮಾಡಬಹುದು.
ಇದನ್ನೂ ಓದಿ : ಡೆಂಗ್ಯೂ ಜ್ವರದಿಂದ ಚೇತರಿಸಿಕೊಳ್ಳುವಾಗ, ಈ ಮೂರು ಪದಾರ್ಥಗಳನ್ನು ತಪ್ಪದೇ ಸೇವಿಸಿ..!
ಪೋಷಕಾಂಶಗಳ ಹೀರಿಕೊಳ್ಳುವಿಕೆ ನಿಧಾನವಾಗಿರಬಹುದು :
ಬಾದಾಮಿಯಲ್ಲಿ ನಾರಿನಂಶ ಅಧಿಕವಾಗಿದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹವು ಕಬ್ಬಿಣ, ಸತು ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ. ಅದಕ್ಕಾಗಿಯೇ ಬಾದಾಮಿಯನ್ನು ಸರಿಯಾದ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.
ನೆನೆಸಿದ ಬಾದಾಮಿಯ ಪ್ರಯೋಜನಗಳು :
- ಸಂಪೂರ್ಣ ಪ್ರೋಟೀನ್
- ತೂಕ ನಷ್ಟದಲ್ಲಿ ಪ್ರಯೋಜನಕಾರಿ.
- ತೀಕ್ಷ್ಣವಾದ ಮೆದುಳು
- ಶಕ್ತಿಯ ಮೂಲ
- ಕೊಲೆಸ್ಟ್ರಾಲ್ ಕಡಿತ
- ರಕ್ತದೊತ್ತಡ ನಿಯಂತ್ರಣ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.