ನವದೆಹಲಿ: "ಪಿರಿಯಡ್ಸ್ ಟೈಮಲ್ಲಿ ಸಿಕ್ಕಾಪಟ್ಟೆ ಹೊಟ್ಟೆನೋವು ಬರುತ್ತೆ... ಆಫಿಸ್ ಗೆ ಹೋಗೋಕೆ ಆಗಲ್ಲ, ರಜೆ ಕೇಳಿದ್ರೂ ಕೊಡಲ್ಲ... ಏನಪ್ಪಾ ಮಾಡೋದು?" ಎನ್ನುವ ಚಿಂತೆ ಉದ್ಯೋಗಿ ಮಹಿಳೆಯರದ್ದು. ಆದರೆ ಈಜಿಪ್ಟಿನ ಕಂಪನಿಯೊಂದು ತನ್ನ ಮಹಿಳಾ ಉದ್ಯೋಗಿಗಳಿಗೆ ಋತುಸ್ರಾವದ ಸಂದರ್ಭದಲ್ಲಿ ಒಂದು ದಿನದ 'ವೇತನ ಸಹಿತ ರಜೆ' ನೀಡುತ್ತಿದೆ. 


COMMERCIAL BREAK
SCROLL TO CONTINUE READING

ಈಜಿಪ್ಟಿನಲ್ಲಿರುವ ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿ Shark and Shrimpನಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಋತುಸ್ರಾವದ ಸಂದರ್ಭದಲ್ಲಿ ಒಂದು ದಿನ ವೇತನ ಸಹಿತ ರಜೆಯನ್ನು ನೀಡಲಾಗುತ್ತಿದೆ. ಈ ರಜೆ ಪಡೆಯಲು ಯಾವುದೇ ವಯ್ದ್ಯಕಿಯ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ. ಮಹಿಳೆಯರು ಅವರಿಗೆ ಅಗತ್ಯವಿದ್ದಾಗ ಒಂದು ದಿನ ರಜೆ ತೆಗೆದುಕೊಳ್ಳಬಹುದು. ಈಜಿಪ್ಟಿನ ಕಂಪನಿ ನೀಡುತ್ತಿರುವ 'ಪೀರಿಯಡ್ಸ್ ರಜೆ'ಯನ್ನು ಶ್ಲಾಘಿಸಿರುವ ಲಂಡನ್ ಸರ್ಕಾರ ತನ್ನ ದೇಶದ ಇತರ ಕಂಪನಿಗಳಲ್ಲೂ ಈ ರಜೆ ಜಾರಿಗೆ ತರಲು ಸೂಚಿಸಿದೆ. 


ಅಂತಾರಾಷ್ಟ್ರೀಯ ಪತ್ರಿಕೆಗೆ ಹೇಳಿಕೆ ನೀಡಿರುವ Shark and Shrimp ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ರಾನಿಯಾ ಯೂಸುಫ್, ನಮ್ಮ ಉದ್ಯೋಗಿಗಳು ಈ ರಜೆಯನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂಬ ನಂಬಿಕೆ. ಮಹಿಳಾ ಉದ್ಯೋಗಿಗಳು ಅವರಿಗೆ ಅಗತ್ಯವಿದ್ದಾಗ ಒಂದು ದಿನ ಈ ರಜೆ ಪಡೆಯಬಹುದು.  ನಮಗೆ ಉದ್ಯೋಗಿಗಳ ಬಗ್ಗೆ ನಂಬಿಕೆ ಇದೆ. ಮಧ್ಯ ಪೂರ್ವ ಮತ್ತು ಉತ್ತರ ಆಫ್ರಿಕಾದ ದೇಶಗಳಲ್ಲಿ ಋತುಸ್ರಾವದ ಬಗ್ಗೆ ಮುಕ್ತವಾಗಿ ಚರ್ಚಿಸುವುದಿಲ್ಲ. ಆದ್ದರಿಂದ ನಾವು ಈ ನಿರ್ಧಾರವನ್ನು ತೆಗೆದುಕೊಂಡಾಗ ಎಲ್ಲರಿಗೂ ಅಚ್ಚರಿಯಾಯಿತು ಎಂದಿದ್ದಾರೆ.


'ಋತುಸ್ರಾವದ ರಜೆ' ಆಲೋಚನೆ ಜಪಾನ್, ದಕ್ಷಿಣ ಕೊರಿಯಾ, ತೈವಾನ್, ಇಂಡೋನೇಶಿಯಾದಂತಹ ದೇಶಗಳಲ್ಲಿ ಮೊದಲಿನಿಂದಲೂ ಇದೆ. ಭಾರತದಲ್ಲಿಯೂ ಕೆಲವು ಕಂಪನಿಗಳು ಈ ರಜೆಯನ್ನು ನೀಡುತ್ತಿವೆ. ಇನ್ನು ಕೆಲವು ಕಂಪನಿಗಳು ಋತುಸ್ರಾವದ ದಿನ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ನಿಗದಿಗಿಂತ ಹೆಚ್ಚು ವೇತನ ನೀಡುತ್ತಿವೆ. 2015 ರಲ್ಲಿ ಮೊದಲ ಬಾರಿಗೆ, ಝಾಂಬಿಯಾ ದೇಶದಲ್ಲಿ ಈ ರಜೆ ನೀಡುವ ಪದ್ಧತಿ ಪ್ರಾರಂಭವಾಯಿತು.