ಸಾಕುಪ್ರಾಣಿಗಳು ಮಾನವನ ಅನಾರೋಗ್ಯಕ್ಕೆ ಕಾರಣವಾಗುತ್ತಿವೆಯೇ? ಹೊಸ ಸಂಶೋಧನೆಯಲ್ಲಿ ಅಚ್ಚರಿಯ ಸಂಗತಿ ಬಯಲು
Disease Transmitted from Animals to Humans: ಮಾನವರು ಶತಮಾನಗಳಿಂದ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಹಳ್ಳಿಗಳಲ್ಲಿ ಸಾಕು ಪ್ರಾಣಿಗಳಿಂದ ಸರಿಯಾದ ಅಂತರವನ್ನು ಕಾಯ್ದುಕೊಳ್ಳುತ್ತಾರೆ.
ಬೆಂಗಳೂರು: ನಗರ ಪ್ರದೇಶಗಳಲ್ಲಿ ಮನೆಯಲ್ಲಿ ಪ್ರಾಣಿಗಳನ್ನ ಸಾಕುವ ಪ್ರವೃತ್ತಿ ವೇಗವಾಗಿ ಬೆಳೆಯುತ್ತಿದೆ. ವಿಶೇಷವಾಗಿ ನಾಯಿ ಮತ್ತು ಬೆಕ್ಕುಗಳನ್ನು ಸಾಕಲು ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ. ಮಾನವರು ಶತಮಾನಗಳಿಂದ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಹಳ್ಳಿಗಳಲ್ಲಿ ಸಾಕು ಪ್ರಾಣಿಗಳಿಂದ ಸರಿಯಾದ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಉದಾಹರಣೆಗೆ, ಹಳ್ಳಿಯಲ್ಲಿ ಯಾರಾದರೂ ಹಸು, ಎಮ್ಮೆ, ಮೇಕೆ, ಕುರಿಗಳನ್ನು ಸಾಕಿದ್ದರೆ, ಅವುಗಳನ್ನು ತಮ್ಮ ಕೋಣೆಗೆ ಅಥವಾ ಹಾಸಿಗೆ ಮೇಲೆ ತರುವುದಿಲ್ಲ. ವಾಸಿಸುವ ಮನೆಯ ಹೊರಗೆ ಅವುಗಳಿಗೆ ವ್ಯವಸ್ಥಿತ ಸ್ಥಳವಿರುತ್ತದೆ.
ಇದರಿಂದ ಪ್ರಾಣಿಗಳಿಂದ ಉಂಟಾಗುವ ರೋಗಗಳಿಂದ ಮನುಷ್ಯರನ್ನು ರಕ್ಷಿಸ. ಆದರೆ ನಾಯಿ ಮತ್ತು ಬೆಕ್ಕುಗಳ ವಿಷಯದಲ್ಲಿ ಇದು ಹಾಗಾಗಲ್ಲ. ನಗರಗಳಲ್ಲಿ ಜನರು ತಮ್ಮ ಸ್ವಂತ ಮಕ್ಕಳಂತೆ ಪ್ರಾಣಿಗಳನ್ನು ಬೆಳೆಸುತ್ತಾರೆ. ಅವರ ಹಾಸಿಗೆಯಲ್ಲಿ ಮಲಗಲು ಸಹ ಬಿಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಈ ಪ್ರಾಣಿಗಳಿಂದ ರೋಗ ಹರಡುವ ಅಪಾಯವು ಹೆಚ್ಚು. ಈ ಕುರಿತು ನಡೆಸಿದ ಹೊಸ ಸಂಶೋಧನೆಯಲ್ಲಿ ಹಲವು ವಿಷಯಗಳು ಬೆಳಕಿಗೆ ಬಂದಿವೆ.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಆಹ್ವಾನ..! ʼಪೂರ್ವ ಜನ್ಮದ ಪುಣ್ಯʼ ಎಂದ ನಟ ರಿಷಬ್ ಶೆಟ್ಟಿ
ಇತ್ತೀಚೆಗೆ ಡೈಸನ್ ಗ್ಲೋಬಲ್ ಡಸ್ಟ್ ಸಾಕುಪ್ರಾಣಿಗಳ ಮೇಲೆ ಸಂಶೋಧನೆ ನಡೆಸಿತು. ಈ ಸಂಶೋಧನಾ ವರದಿಯ ಪ್ರಕಾರ, ಸಾಕುಪ್ರಾಣಿಗಳನ್ನು ಸಾಕುವ ಭಾರತೀಯ ಜನರು ತಮ್ಮ ಸಾಕುಪ್ರಾಣಿಗಳ ಸ್ವಚ್ಛತೆ, ರೋಗಗಳು ಮತ್ತು ಅವುಗಳ ಮೇಲೆ ಕಂಡುಬರುವ ವೈರಸ್‌ಗಳ ಬಗ್ಗೆ ಬಹಳ ಜಾಗೃತರಾಗಿರಬೇಕು. ನಾಲ್ಕು ಭಾರತೀಯರಲ್ಲಿ ಒಬ್ಬರು ಮಾತ್ರ ಈ ವಿಚಾರವನ್ನು ಆದ್ಯತೆಯಾಗಿ ನೋಡುತ್ತಾರೆ. ಈ ಕಾರಣದಿಂದಾಗಿ ಅನೇಕ ಬಾರಿ ಪ್ರಾಣಿಗಳು ಮೊದಲು ಅನಾರೋಗ್ಯಕ್ಕೆ ಒಳಗಾಗುತ್ತವೆ. ಈ ಕಾರಣದಿಂದಾಗಿ ರೋಗವು ಮನುಷ್ಯರಿಗೆ ಹರಡುತ್ತದೆ.
ಎಂಡಿಪಿಐ ಓಪನ್ ಆಕ್ಸೆಸ್ ನಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ, ಪ್ರಾಣಿಗಳಲ್ಲಿ ಕಂಡುಬರುವ ಬ್ಯಾಕ್ಟೀರಿಯಾದ ಮೂಲಕ ಸಾಂಕ್ರಾಮಿಕ ರೋಗಗಳು ಮನುಷ್ಯರಿಗೆ ಹರಡುತ್ತವೆ. ಈ ಸಂಶೋಧನೆಯಲ್ಲಿ ಬ್ಯಾಸಿಲಸ್ ಆಂಥ್ರಾಸಿಸ್ ಎಂಬುದು ಪ್ರಾಣಿಗಳಲ್ಲಿ ಮಾರಣಾಂತಿಕ ರೋಗವನ್ನು ಹರಡುವ ಒಂದು ರೀತಿಯ ಬ್ಯಾಕ್ಟೀರಿಯಾ ಎಂದು ಹೇಳಲಾಗಿದೆ. ಈ ಬ್ಯಾಕ್ಟೀರಿಯಾದ ಆಕಾರವು ರಾಡ್‌ನಂತಿರುತ್ತದೆ.
ಇದರಿಂದಾಗಿ ಪ್ರಾಣಿಗಳಲ್ಲಿ ಆಂಥ್ರಾಕ್ಸ್ ಎಂಬ ರೋಗ ಹರಡುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಕಾಯಿಲೆಗೆ ಒಳಗಾದ ಪ್ರಾಣಿಯೊಂದಿಗೆ ಮನುಷ್ಯ ಸಂಪರ್ಕಕ್ಕೆ ಬಂದರೆ, ಈ ರೋಗವು ಮನುಷ್ಯರಿಗೂ ಸೋಂಕು ತರುತ್ತದೆ. ಈ ಸಂಶೋಧನೆಯಲ್ಲಿ, ಸಾಕುಪ್ರಾಣಿಗಳ ಕೂದಲು, ತಲೆಹೊಟ್ಟು ಮತ್ತು ಚರ್ಮದ ಕಣಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡಲಾಗಿದೆ. ಈ ಮಾಲಿನ್ಯಕಾರಕಗಳು ಸಾಕುಪ್ರಾಣಿಗಳ ಮಾಲೀಕರು ಮತ್ತು ಸಾಕುಪ್ರಾಣಿಗಳ ಸುತ್ತಮುತ್ತಲಿನ ಮಕ್ಕಳಲ್ಲಿ ಅಲರ್ಜಿಯನ್ನು ಉಂಟುಮಾಡಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಕಿಚ್ಚನ ‘ಮ್ಯಾಕ್ಸ್’ ಹೆಸರಲ್ಲಿ ಆಂಬುಲೆನ್ಸ್ ಸೇವೆ…ಇದು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನ ಕೊಡುಗೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.