How to Control Uric Acid : ರಕ್ತದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ ಅದನ್ನು ಗೌಟ್ ಎಂದು ಕರೆಯಲಾಗುತ್ತದೆ.ಇದು ಕೀಲುಗಳಲ್ಲಿ ಯೂರಿಕ್ ಆಸಿಡ್ ಹರಳುಗಳು ರೂಪುಗೊಳ್ಳಲು ಪ್ರಾರಂಭಿಸುವ ಸ್ಥಿತಿಯಾಗಿದೆ.ಅಂತಹ ಪರಿಸ್ಥಿತಿಯಲ್ಲಿ, ಕೀಲುಗಳಲ್ಲಿ ತೀವ್ರವಾದ ನೋವು ಮತ್ತು ಊತ ಕಾಣಿಸಿಕೊಳ್ಳುತ್ತದೆ.ರಕ್ತದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಕಿಡ್ನಿಯಲ್ಲಿ ಕಲ್ಲುಗಳಾಗುವ ಸಂಭವವಿರುತ್ತದೆ.ಇದು ಮುಖ್ಯವಾಗಿ ಪ್ಯೂರಿನ್‌ಗಳ ವಿಭಜನೆಯಿಂದ ರೂಪುಗೊಳ್ಳುತ್ತದೆ.  ರಕ್ತದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಬೇಕಾದರೆ ಪ್ಯೂರಿನ್ ಭರಿತ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಕು.


COMMERCIAL BREAK
SCROLL TO CONTINUE READING

ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಲು ದಾಳಿಂಬೆ ರಸವನ್ನು ಕುಡಿಯಬಹುದು.ಈ ಕೆಂಪು ಬಣ್ಣದ ಜ್ಯೂಸ್ ದೇಹದಲ್ಲಿರುವ ಅಧಿಕ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡುತ್ತದೆ. 


ಇದನ್ನೂ ಓದಿ : Aparna Dies: ಧೂಮಪಾನಿಗಳಲ್ಲದವರಲ್ಲಿ ಶ್ವಾಸಕೋಶ ಕ್ಯಾನ್ಸರ್‌ಗೆ ಕಾರಣವೇನು? ತಜ್ಞರ ಅಭಿಪ್ರಾಯವೇನು?


ದಾಳಿಂಬೆ ಜ್ಯೂಸ್ ಪ್ರಯೋಜನ : 
ದಾಳಿಂಬೆ ರಸವು ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಸಿಟ್ರಿಕ್ ಮತ್ತು ಮಾಲಿಕ್ ಆಮ್ಲ ಹೇರಳವಾಗಿ ಕಂಡು ಬರುತ್ತದೆ.ಈ ಅಂಶವು ರಕ್ತದಲ್ಲಿನ ಯೂರಿಕ್ ಆಸಿಡ್  ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.ಇದು ಗೌಟ್ ರೋಗಿಗಳು ಎದುರಿಸುವ ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.ಕೀಲು ನೋವು ಅತಿಯಾಗಿ ಬಾಧಿಸುತ್ತಿದ್ದರೆ ಈ ರಸವನ್ನು ಸೇವಿಸಬಹುದು.ಇದಲ್ಲದೆ ದಾಳಿಂಬೆ ರಸವು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುತ್ತದೆ.


ದಾಳಿಂಬೆ ರಸ  ತಯಾರಿಸಲು ಬೇಕಾಗಿರುವ ಪದಾರ್ಥ :
ಸಿಪ್ಪೆ ಸುಲಿದ ದಾಳಿಂಬೆ - 1 ರಿಂದ 2 ಕಪ್ 
ಬ್ಲಾಕ್ ಸಾಲ್ಟ್ - ರುಚಿಗೆ ತಕ್ಕಂತೆ


ಇದನ್ನೂ ಓದಿ : ಅಧಿಕ ರಕ್ತದೊತ್ತಡದ ಸಂದರ್ಭದಲ್ಲಿ ಯಾವ ಉಪ್ಪನ್ನು ತಿನ್ನಬೇಕು ಗೊತ್ತೇ ?


ತಯಾರಿಸುವ ವಿಧಾನ : 
ದಾಳಿಂಬೆ ಕಾಳುಗಳನ್ನು ಮಿಕಿಸ್ಯಲ್ಲಿ ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ಸ್ವಲ್ಪ ಬ್ಲಾಕ್ ಸಾಲ್ಟ್ ಸೇರಿಸಿ.ನಿಮಗಿಷ್ಟ ಎಂದಾದರೆ ಪುದೀನ ಎಲೆಗಳನ್ನು ಕೂಡ ಸೇರಿಸಬಹುದು. ಈಗ ಫಿಲ್ಟರ್ ಮಾಡದೇ ಹಾಗೆಯೇ ಕುಡಿಯಿರಿ.ಇದು ಸಾಕಷ್ಟು ಪ್ರಯೋಜನಕಾರಿಯಾಗಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.