ಬೆಂಗಳೂರು : ಕೆಲವರಿಗೆ ಹೊಟ್ಟೆಯ ಕಿರಿಕಿರಿ ಅಥವಾ ಆಸಿಡಿಟಿ ಪದೇ ಪದೇ ಸಮಸ್ಯೆ ಮಾಡುತ್ತಿರುತ್ತದೆ. ಮಸಾಲೆಯುಕ್ತ ಆಹಾರ, ಒತ್ತಡ ಮತ್ತು ನಾವು ಅನುಸರಿಸುವ  ತಪ್ಪು ಜೀವನಶೈಲಿಯಿಂದಾಗಿ ಆಸಿಡಿಟಿ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿಭಾಯಿಸಲು ಸುಲಭ ಮತ್ತು ಪರಿಣಾಮಕಾರಿ ಮಾರ್ಗವಿದೆ. ಅದೇನೆಂದರೆ ನಿತ್ಯ ಕನಿಷ್ಠ 30 ನಿಮಿಷಗಳ ಕಾಲ  ವಾಕ್ ಮಾಡುವುದು. 


COMMERCIAL BREAK
SCROLL TO CONTINUE READING

ಪ್ರತಿ ದಿನ ಒಂದು ನಿಗದಿತ ಸಮಯದವರೆಗೆ ವಾಕ್ ಮಾಡುವುದರಿಂದ ಆಸಿಡಿಟಿ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎನ್ನುವುದು ಅಧ್ಯಯನದಲ್ಲಿ ಸಾಬೀತಾಗಿದೆ. ಈ ಅಧ್ಯಯನದಲ್ಲಿ, ಸಂಶೋಧಕರು 12 ವಾರಗಳವರೆಗೆ ಪ್ರತಿದಿನ 30 ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ ಅಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುವುದು ಈ ಅಧ್ಯಯದಲ್ಲಿ ಸಾಬೀತಾಗಿದೆ. 


ಇದನ್ನೂ ಓದಿ : Benefits of drumstick leaves: ಡ್ರಮ್‌ಸ್ಟಿಕ್ ಎಲೆಗಳಲ್ಲಿ ಅಡಗಿದೆ ಆರೋಗ್ಯದ ನಿಧಿ..!


ವಾಕಿಂಗ್ ಯಾವ ರೀತಿಯಲ್ಲಿ ಪ್ರಯೋಜನವಾಗಿದೆ ? : 
ವಾಕಿಂಗ್ ಹೊಟ್ಟೆಯ ಸ್ನಾಯುಗಳನ್ನು ಉತ್ತೇಜನಗೊಳ್ಳುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಆಹಾರ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಹೊಟ್ಟೆಯಲ್ಲಿ ಆಮ್ಲದ ಅತಿಯಾದ ಉತ್ಪಾದನೆಯನ್ನು ನಿಲ್ಲಿಸುತ್ತದೆ. ಇದಲ್ಲದೇ ವಾಕಿಂಗ್ ಒತ್ತಡವನ್ನು ಕಡಿಮೆ ಮಾಡುತ್ತದೆ. 


ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ:
ವಾಕಿಂಗ್ ದೇಹವನ್ನು ಚಲಿಸುವಂತೆ ಮಾಡುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಆಮ್ಲ ರಚನೆಯು ಕಡಿಮೆಯಾಗುತ್ತದೆ.


ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ:
ವಾಕಿಂಗ್ ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಆಹಾರವನ್ನು ಕೆಳಕ್ಕೆ ತಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಆಸಿಡ್ ರಿಫ್ಲಕ್ಸ್ ಅಪಾಯವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ : Cholesterol Control: ರಕ್ತದಲ್ಲಿನ ಮೊಂಡು ಜಿಡ್ಡನ್ನು ತೊಲಗಿಸಲು ರಾಮಬಾಣ ಈ ಗಿಡಮೂಲಿಕೆ ಚಹಾ!


ಒತ್ತಡವನ್ನು ಕಡಿಮೆ ಮಾಡುತ್ತದೆ:
ಒತ್ತಡವು ಆಸಿಡಿಟಿಯನ್ನು ಹೆಚ್ಚಿಸುತ್ತದೆ. ವಾಕಿಂಗ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ಅಸಿಡಿಟಿ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ.


ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ:
ಸ್ಥೂಲಕಾಯತೆ ಅಸಿಡಿಟಿ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ವಾಕಿಂಗ್ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಅಸಿಡಿಟಿ ಸಮಸ್ಯೆಯನ್ನು ಕಡಿಮೆ ಮಾಡಳು ಸಹಾಯ ಮಾಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.