ವಾರಕ್ಕೆ 55 ಗಂಟೆಗಿಂತ ಹೆಚ್ಚು ಕೆಲಸ ಮಾಡುವವರಲ್ಲಿ ಈ ಖಾಯಿಲೆಯ ಅಪಾಯ ಹೆಚ್ಚು! ವೈದ್ಯರು ಏನ್ ಹೇಳ್ತಾರೆ!
Working Hours: ಹಾಲಿ 9 ಗಂಟೆ ಕೆಲಸ ಮಾಡುತ್ತಿರುವ ಐಟಿ ಉದ್ಯೋಗಿಗಳಿಗೆ 9 ಗಂಟೆ ಬದಲು 14 ಗಂಟೆ ಕೆಲಸ ಮಾಡಿಸಲು ಕಾನೂನು ತರುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಕಾರ್ಮಿಕ ಇಲಾಖೆಯಿಂದಲೇ ಕಾನೂನು ಜಾರಿಗೆ ಸಿದ್ಧತೆ ನಡೆಯುತ್ತಿದೆ. ಐಟಿ ಸಿಬ್ಬಂದಿಗಳ ಕೆಲಸದ ಸಮಯ ವಿಸ್ತರಣೆಗೆ ಕಾರ್ಮಿಕ ಇಲಾಖೆ ಬಹುತೇಕ ಒಪ್ಪಿಗೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದರಿಂದ ಉದ್ಯೋಗಿಗಳ ಮೇಲೆ ಏನು ಪರಿಣಾಮ ಬೀರಬಹುದು? ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ ತಿಳಿಯಿರಿ.
Working Hours: ಒಂದೆಡೆ ಐಡಿ ಉದ್ಯೋಗಿಗಳಿಗೆ (IT Employees) ಕೆಲಸದ ಅವಧಿಯಲ್ಲಿ 9ಗಂಟೆ ಬದಲಿಗೆ 14ಗಂಟೆಗಳವರೆಗೆ ವಿಸ್ತರಿಸಲು ಕಾರ್ಮಿಕ ಇಲಾಖೆ ಸಜ್ಜಾಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಐಟಿ ನೌಕರರ ಸಂಘ ಈ ನಿಯಮ ಜಗತ್ತಿನಲ್ಲಿ ಎಲ್ಲೂ ಇಲ್ಲ. ಇದು ದೈಹಿಕ, ಮಾನಸಿಕ ಆರೋಗ್ಯದಲ್ಲಿ ದುಷ್ಪರಿಣಾಮ ಬೀರುತ್ತದೆ ಎಂದು ಪ್ರತಿಪಾಧಿಸುತ್ತಿದೆ. ಐಟಿ ಉದ್ಯೋಗಿಗಳ ಕೆಲಸದ ಅವಧಿ ವಿಸ್ತರಣೆಯಿಂದ ಯಾವ ರೋಗದ ಅಪಾಯ ಹೆಚ್ಚು? ಈ ಬಗ್ಗೆ ಡಬಲ್ಯುಎಚ್‌ಓ (WHO) ಏನು ಹೇಳಿದೆ? ವೈದ್ಯರು ಏನು ಹೇಳುತ್ತಾರೆ ಎಂಬ ಮಾಹಿತಿ ಇಲ್ಲಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಡೇಟಾದಲ್ಲಿ ಏನಿದೆ?
ಸುಮಾರು ಮೂರನೇ ಒಂದು ಭಾಗದಷ್ಟು ಕೆಲಸಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಸುದೀರ್ಘ ಕೆಲಸ ಮಾಡುವ ಅಭ್ಯಾಸಕ್ಕೆ ಸಂಬಂಧಿಸಿದೆ ಮತ್ತು ಇದು ಉದ್ಯೋಗ-ಸಂಬಂಧಿತ ಕಾಯಿಲೆಗಳಿಗೆ ಬಹಳ ಅಪಾಯಕಾರಿ ಅಂಶವಾಗಿದೆ. ವಾರಕ್ಕೆ 35-40 ಗಂಟೆಗಳ ಕಾಲ ಕೆಲಸ ಮಾಡುವುದಕ್ಕೆ ಹೋಲಿಸಿದರೆ ವಾರಕ್ಕೆ 55 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕೆಲಸ ಮಾಡುವವರಿಗೆ ಪಾರ್ಶ್ವವಾಯು ಅಪಾಯವು (Risk Of Stroke) ಸುಮಾರು 35% ಮತ್ತು ಹೃದ್ರೋಗದಿಂದ ಸಾಯುವ ಅಪಾಯವು 17% ರಷ್ಟು ಹೆಚ್ಚಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಡೇಟಾ ತೋರಿಸುತ್ತದೆ. ಹಾಗಾದರೆ, "ಕೆಲಸದ ತೀವ್ರತೆ" ಅನೇಕ ಜನರಿಗೆ ಸಾಮಾನ್ಯ ಸಮಸ್ಯೆಯಾಗಿದೆಯೇ? ಈ ಬಗ್ಗೆ
ಇದನ್ನೂ ಓದಿ- ಕಫದಿಂದ ಉಪಶಮನ, ದೃಷ್ಟಿ ಸುಧಾರಣೆ ಕರಿಬೇವಿನ ಸೊಪ್ಪಿನಿಂದ ಆರೋಗ್ಯಕ್ಕಿರುವ ಲಾಭಗಳ ಬಗ್ಗೆ ನಿಮಗೆ ಗೊತ್ತೇ?
ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವ ಜನರು ಹೆಚ್ಚು ಒತ್ತಡವನ್ನು (Stress) ಅನುಭವಿಸುತ್ತಾರೆ ಎಂಬುದು ಒಂದು ಕಾರಣವಾಗಿರಬಹುದು. ಹೆಚ್ಚಿನ ಒತ್ತಡದ ಹಾರ್ಮೋನುಗಳು ಆರ್ಟರಿಗಳ ಮುಚ್ಚುವಿಕೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸಬಹುದು, ಇದು ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು. ಕೆಲಸದ ಅವಧಿ ವಿಸ್ತರಣೆಯಿಂದ ಆಗಬಹುದಾದ ಅನಾನುಕೂಲಗಳೇನು ಎಂಬ ಬಗ್ಗೆ ಸರ್ಜಾಪುರ ಮಣಿಪಾಲ್ ಆಸ್ಪತ್ರೆಯ ಕಾರ್ಡಿಯೋಲಾಜಿ ವಿಭಾಗದ ಕನ್ಸಲ್ಟೆಂಟ್ ಡಾ. ಎಂ ಸುಧಾಕರ ರಾವ್ ಕೆಳಕಂಡ ಮಾಹಿತಿಯನ್ನು ನೀಡಿದ್ದಾರೆ.
ಸುದೀರ್ಘ ಕಾಲ ಕೆಲಸ ಮಾಡುವುದರ ಹಾನಿಕಾರಕ ಪರಿಣಾಮಗಳು?
ಒತ್ತಡದ (Stress) ಹೊರತಾಗಿ, ದೀರ್ಘ ಕಾಲ ಕೆಲಸ ಮಾಡುವುದು ನಿಮ್ಮ ಆರೋಗ್ಯದ ಮೇಲೆ ಇತರ ಹಲವು ವಿಧಗಳಲ್ಲಿ ಪರಿಣಾಮ ಬೀರುತ್ತದೆ.
1. ನೀವು ದಿನಕ್ಕೆ ಸುಮಾರು 8 ಗಂಟೆಗಳ ನಿದ್ರೆಯನ್ನು ಪಡೆಯುವುದಿಲ್ಲ
2. ನೀವು ಸರಿಯಾಗಿ ಆಹಾರವನ್ನು ತಿನ್ನುವುದಿಲ್ಲ ಅಥವಾ ಅನಾರೋಗ್ಯಕರ ಆಹಾರವನ್ನು ತಿನ್ನುತ್ತಿದ್ದೀರಿ.
3. ನೀವು ವ್ಯಾಯಾಮ ಮಾಡುವುದಿಲ್ಲ.
4. ನೀವು ಸಂಬಂಧಗಳನ್ನು ನಿರ್ಲಕ್ಷಿಸುತ್ತೀರಿ.
5. ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೀರಿ.
6. ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ತೂಕ, ಅಧಿಕ ಕೊಲೆಸ್ಟ್ರಾಲ್ ಮತ್ತು ಜಡ ಜೀವನಶೈಲಿ ಚಟುವಟಿಕೆಯಂತಹ ಇತರ ಅಪಾಯಕಾರಿ ಅಂಶಗಳಿಗೆ ಒಳಗಾಗುತ್ತೀರಿ .
7. ಎಚ್ಚರಿಕೆಯ ಸಂಕೇತಗಳನ್ನು ನಿರ್ಲಕ್ಷಿಸುವುದರಿಂದ ಚಿಕಿತ್ಸೆ ಪಡೆಯುವುದು ವಿಳಂಬವಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ- ಮೊಟ್ಟೆಯ ಹಳದಿ ಭಾಗ ತಿನ್ನುವುದರಿಂದ ಕೊಲೆಸ್ಟ್ರಾಲ್, ತೂಕ ಹೆಚ್ಚಾಗುತ್ತಾ?
ಕೆಲಸದ ಒತ್ತಡ ಮತ್ತು ಸುದೀರ್ಘ ಕೆಲಸದ ಅವಧಿಯನ್ನು ಹೇಗೆ ನಿರ್ವಹಿಸುವುದು?
ಕೆಲಸ ಮತ್ತು ವೈಯಕ್ತಿಕ ಜೀವನದ ಅನಾರೋಗ್ಯಕರ ಸಮತೋಲನದ ಸಂಕೇತಗಳನ್ನು ಗಮನಿಸುವುದು ಮುಖ್ಯವಾಗಿದೆ. ನಿಮ್ಮನ್ನು ನೀವೇ ನಿರ್ಲಕ್ಷಿಸುವುದು, ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದು, ಕೆಲಸದಲ್ಲಿ ಅತೃಪ್ತ ಭಾವನೆ, ನಿಮ್ಮ ಕೆಲಸದ ಕಾರ್ಯಕ್ಷಮತೆಯ ಬಗ್ಗೆ ನಿರಂತರವಾಗಿ ಚಿಂತಿಸುವುದು, ಕೆಲಸ ಮತ್ತು ಕುಟುಂಬದ ನಡುವೆ ಸಮತೋಲನ ಕಾಯ್ದುಕೊಳ್ಳಲು ಒದ್ದಾಡುವುದು ಮತ್ತು ಒಂಟಿತನವನ್ನು ಅನುಭವಿಸುವುದು ಇದರ ಕೆಲವು ಸಂಕೇತಗಳಾಗಿವೆ.
ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನವನ್ನು ಹೊಂದಿರುವುದು ತುಂಬಾ ಮುಖ್ಯವಾಗಿದೆ. ಏಕೆಂದರೆ ಇದು ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ವೈಯಕ್ತಿಕ ಜೀವನದ ಕಡೆಗೆ ಗಮನಹರಿಸಿ ಒಂದು ದಿನಚರಿಯನ್ನು ರಚಿಸುವುದು ಮುಖ್ಯವಾಗಿದೆ. ಹಾಗೆಯೇ, ವಾಕಿಂಗ್, ಸೈಕ್ಲಿಂಗ್, ಈಜು, ಅಥವಾ ಯೋಗ ಮತ್ತು ಧ್ಯಾನದಂತಹ ಚಟುವಟಿಕೆಗಳಲ್ಲಿ ಪ್ರತಿದಿನ ಕೆಲವು ಗಂಟೆಗಳ ಕಾಲ ಕಳೆಯುವುದು ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಮನಸ್ಸನ್ನು ಇತರ ವಿಷಯಗಳ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಇತರರು ಇನ್ನೂ ಕೆಲಸ ಮಾಡುತ್ತಿರುವಾಗ ನಿಮ್ಮ ಕೆಲಸ ಈಗಾಗಲೇ ಮುಗಿದಿದ್ದರೆ ಆಫೀಸ್ ನಿಂದ ಹೊರಟು ಮನೆಗೆ ಬರಲು ಹಿಂಜರಿಯಬೇಡಿ. ನಿಮ್ಮ ಹೆಂಡತಿ, ತಂದೆ ತಾಯಿ ಅಥವಾ ಮಕ್ಕಳಿಗಿಂತ ಯಾವುದೇ ಕೆಲಸ ದೊಡ್ಡದಲ್ಲ. ಅದೇ ಸಮಯದಲ್ಲಿ, ಕೆಲಸದ ಸಮಯವನ್ನು ನಿಗದಿಪಡಿಸಲು ಸರ್ಕಾರವು ನಿಯಮಗಳನ್ನು ಮಾಡಬೇಕಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.