Protein Deficiency Symptoms : ನಮ್ಮ ದೇಹಕ್ಕೆ ಅನೇಕ ಪೋಷಕಾಂಶಗಳು ಬೇಕಾಗುತ್ತವೆ. ಇವುಗಳಲ್ಲಿ ಯಾವುದಾದರೂ ಒಂದರ ಕೊರತೆಯಾದರೂ ದೇಹವು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಈ ಪೋಷಕಾಂಶಗಳಲ್ಲಿ ಒಂದು ಪ್ರೋಟಿನ್. ಇದು ನಮ್ಮ ದೇಹವನ್ನು ಆರೋಗ್ಯಕರವಾಗಿಡಲು ಬಹಳ ಮುಖ್ಯವಾಗಿದೆ. ದೇಹದಲ್ಲಿನ ಸ್ನಾಯುಗಳು, ಚರ್ಮ, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಬಿಲ್ಡಿಂಗ್ ಬ್ಲಾಕ್ ಆಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ದೇಹದಲ್ಲಿನ ಜೀವಕೋಶಗಳ ನಿರ್ಮಾಣ ಮತ್ತು ಅವುಗಳು ಸರಿಯಾಗಿ ಕೆಲಸ ಮಾಡುವಂತೆ ಮಾಡಬೇಕಾದರೆ ಪ್ರೋಟಿನ್ ಅತ್ಯಗತ್ಯ. 


COMMERCIAL BREAK
SCROLL TO CONTINUE READING

ಪ್ರೋಟೀನ್ ಕೊರತೆಯಾದರೆ ಖಂಡಿತವಾಗಿಯೂ ಕಾಡುವುದು ಅನಾರೋಗ್ಯ : 
ಪ್ರಪಂಚದಾದ್ಯಂತ ಸುಮಾರು 1 ಶತಕೋಟಿ ಜನರು ಪ್ರೋಟಿನ್ ಕೊರತೆಯಿಂದ ಬಳಲುತ್ತಿದ್ದಾರೆ ಎನ್ನುವುದು ಅನೇಕ ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಬೆಳೆಯುತ್ತಿರುವ ಮಕ್ಕಳು ಮತ್ತು ವೃದ್ಧರಲ್ಲಿ ಪ್ರೋಟಿನ್ ಕೊರತೆ ಹೆಚ್ಚು ಸಾಮಾನ್ಯವಾಗಿದೆ.  ದೇಹದಲ್ಲಿ ಪ್ರೋಟಿನ್ ಕೊರತೆಯಾದಾಗ ಸ್ನಾಯುಗಳ ದೌರ್ಬಲ್ಯ, ದೇಹ ಮತ್ತು ಸ್ನಾಯುಗಳಲ್ಲಿ ಕಾಣಿಸಿಕೊಳ್ಳುವ ನೋವು, ಕೂದಲು  ಉದುರುವುದು, ಮೂಳೆಗಳು ಮುರಿಯುವುದು, ದೇಹದಲ್ಲಿ ಹೆಚ್ಚು ಸುಸ್ತು ಮತ್ತು  ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಚರ್ಮಡ ಶುಷ್ಕತೆ, ಕೂದಲು ಮತ್ತು ಉಗುರುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಇತ್ಯಾದಿಗಳು ದೇಹದಲ್ಲಿ ಪ್ರೋಟಿನ್ ಕೊರತೆಯ ಲಕ್ಷಣಗಳಾಗಿವೆ. 


ಇದನ್ನೂ ಓದಿ : ದೇಹದಲ್ಲಾಗುವ ಈ ಬದಲಾವಣೆ ನೀಡುತ್ತದೆ ಅಂಡಕೋಶದ ಕ್ಯಾನ್ಸರ್ ನ ಸುಳಿವು,.!


ಪ್ರೋಟೀನ್ ಕೊರತೆಯ ನಷ್ಟದಿನದ ಎದುರಾಗುವ ಸಮಸ್ಯೆಗಳು :  
1- ದೇಹದಲ್ಲಿ ಪ್ರೋಟಿನ್ ಕೊರತೆಯಾದಾಗ ಮುಖ, ಮತ್ತು ಹೊಟ್ಟೆಯ ಭಾಗದಲ್ಲಿ  ಊತ ಕಾಣಿಸಿಕೊಳ್ಳುತ್ತದೆ. ಕೂದಲು ಉದುರುವಿಕೆ ದುರ್ಬಲ ಸ್ನಾಯು,  ದೇಹದ ಬೆಳವಣಿಗೆ ಸರಿಯಾಗಿ ಆಗದಿರುವುದು. ವಿಪರೀತ ದಣಿವು ಕಾಣಿಸಿಕೊಳ್ಳುತ್ತದೆ.  2- ಪ್ರೋಟಿನ್  ಕೊರತೆ ಹೊಸ ಕೋಶಗಳ ರಚನೆಯನ್ನು ವಿಳಂಬಗೊಳಿಸುತ್ತದೆ. ಈ ಕಾರಣದಿಂದಾಗಿ, ಚಿಕಿತ್ಸೆಯು ಪರಿಣಾಮ ಬೀರುವಲ್ಲಿ ಸಮಯ ತೆಗೆದುಕೊಳ್ಳುತ್ತದೆ.
3-ಸ್ನಾಯುಗಳಲ್ಲಿ ಪ್ರೋಟಿನ್ ಕೊರತೆಯು ಸ್ನಾಯು ನೋವನ್ನು ಉಂಟುಮಾಡಬಹುದು.
4- ಪ್ರೋಟಿನ್ ಕೊರತೆಯು ಮಕ್ಕಳ ಎತ್ತರವನ್ನು  ತಡೆಯುತ್ತದೆ. 
5- ಪ್ರೋಟಿನ್ ಕೊರತೆಯು ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗಬಹುದು.
6- ಪ್ರೋಟಿನ್ ಕೊರತೆಯ ಪರಿಣಾಮವು ಮೊದಲು ಕೂದಲಿನ ಮೇಲೆ ಕಂಡುಬರುತ್ತದೆ. ಕೂದಲು  ಡ್ರೈ ಆಗುತಿದ್ದು, ನಿರ್ಜೀವವಾಗುತ್ತಿದ್ದರೆ, ಕೂದಲು ಅತಿಯಾಗಿ ಉದುರುತ್ತಿದ್ದರೆ,  ಪ್ರೋಟಿನ್ ಕೊರತೆಯಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಎಂದು ನೀವು ಅರ್ಥಮಾಡಿಕೊಳ್ಳುತ್ತೀರಿ.
7-ದೇಹದಲ್ಲಿ ಪ್ರೋಟಿನ್ ಮತ್ತು ಕ್ಯಾಲ್ಸಿಯಂ ಕೊರತೆಯಿಂದಾಗಿ, ಉಗುರುಗಳು ಸಹ ಒಡೆಯಲು ಪ್ರಾರಂಭಿಸುತ್ತವೆ.
8- ಪ್ರೋಟಿನ್  ಕೊರತೆಯಿಂದಾಗಿ, ದೇಹವು ಇದ್ದಕ್ಕಿದ್ದಂತೆ  ಊದಿ ಕೊಳ್ಳುವುದು ಮತ್ತು ಕೊಬ್ಬು ಹೆಚ್ಚಾಗಲು ಆರಂಭವಾಗುತ್ತದೆ. 
9- ದೇಹದಲ್ಲಿ ಪ್ರೋಟಿನ್ ಕೊರತೆಯಿಂದ ಆಯಾಸವಾಗುತ್ತಿರುತ್ತದೆ. ಪ್ರೋಟಿನ್  ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
10- ಪ್ರೋಟಿನ್ ಕೊರತೆಯಿಂದ ಪದೇ ಪದೇ ಸೋಂಕು ತಗಲುತ್ತಿರುತ್ತದೆ. ಈ ಸಮಸ್ಯೆ ಮತ್ತೆ ಮತ್ತೆ ಕಾಡುತ್ತದೆ. 


ಇದನ್ನೂ ಓದಿ : Weight Loss: ಇದ್ದಕ್ಕಿದ್ದಂತೆ ತೂಕ ನಷ್ಟವಾಗುವುದು ಈ ಗಂಭೀರ ಕಾಯಿಲೆಯ ಲಕ್ಷಣವಾಗಿರಬಹುದು


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.