Best juice for Kidney stone : ಕಿಡ್ನಿಗೆ ಸಂಬಂಧಿತ ಸಮಸ್ಯೆಗಳು ವ್ಯಕ್ತಿಯನ್ನು ಬಹಳಷ್ಟು ಹಿಂಸೆಗೆ ಒಳಪಡಿಸುತ್ತವೆ. ಅದರಲ್ಲೂ ಕಲ್ಲಿನ ಸಮಸ್ಯೆಯಾದರೆ ಅಸಹನೀಯ. ಈ ನೋವಿನಿಂದ ಬಳಲುತ್ತಿರುವ ಜನರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಎನನ್ನಾದರೂ ತಿನ್ನುವ ಮೊದಲು ಅದು ಹೆಚ್ಚಿನ ನೋವನ್ನು ಉಂಟುಮಾಡುವುದಿಲ್ಲ ಎಂದು ಖಚಿತಪಡಿಸಿಕೊಂಡು ತಿನ್ನಬೇಕು.


COMMERCIAL BREAK
SCROLL TO CONTINUE READING

ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಕೆಲವು ಜ್ಯೂಸ್‌ಗಳು ಸಹಾಯ ಮಾಡುತ್ತವೆ. ಆರೋಗ್ಯಕರ ಜ್ಯೂಸ್‌ಗಳನ್ನು ಕುಡಿಯಲು ಪ್ರಾರಂಭಿಸಿದರೆ, ಕೆಲವೇ ದಿನಗಳಲ್ಲಿ ಕಲ್ಲುಗಳು ಒಡೆದು ಮೂತ್ರದಲ್ಲಿ ಹೋಗುತ್ತವೆ. ಕಲ್ಲು ಸಮಸ್ಯೆ ಇರುವವರು ಈ ಕೆಳಗೆ ನೀಡಿರುವ ಜ್ಯೂಸ್‌ಗಳನ್ನು ಸೇವಿಸಿದರೆ ನೋವು ಶಮನವಾಗುವುದಲ್ಲದೆ ಕಲ್ಲುಗಳು ಕೂಡ ಒಡೆದು ಹೊರಬರುತ್ತವೆ.


ಇದನ್ನೂ ಓದಿ: ಬೆಳಿಗ್ಗೆ 8 ಗಂಟೆಗೂ ಮೊದಲು ಉಪಹಾರ ಸೇವಿಸಿದ್ರೆ ʼಮಧುಮೇಹʼ ಕಡಿಮೆಯಾಗುತ್ತದೆ..! ಏನಂತಾರೆ ವೈದ್ಯರು


ಟೊಮ್ಯಾಟೋ ರಸ : ಕಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರು ಟೊಮೆಟೊ ಜ್ಯೂಸ್ ಕುಡಿಯಬೇಕು. ಈ ಜ್ಯೂಸ್ ಮಾಡಲು ಎರಡು ಟೊಮೆಟೊಗಳನ್ನು ಚೆನ್ನಾಗಿ ತೊಳೆದು ರುಬ್ಬಿಕೊಳ್ಳಿ, ನಂತರ ಅದಕ್ಕೆ ಉಪ್ಪು ಮತ್ತು ಮೆಣಸು ಸೇರಿಸಿ ಸೇವಿಸಿ.


ನಿಂಬೆ ರಸ : ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದ್ದು ಇದು ಕಲ್ಲುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅದಕ್ಕಾಗಿ ಒಂದು ಬಟ್ಟಲಿನಲ್ಲಿ ಮೊಸರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ನಿಂಬೆಹಣ್ಣನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೀವು ಬಯಸಿದಲ್ಲಿ ಮೊಸರು ಮತ್ತು ನಿಂಬೆಗೆ ರುಚಿಗೆ ಉಪ್ಪು ಕೂಡ ಸೇರಿಸಬಹುದು. ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿ ಸೇವಿಸುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.


ಇದನ್ನೂ ಓದಿ: ಈ ಮೂರು ಸೊಪ್ಪು ತಿಂದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್


ತುಳಸಿ ರಸ : ತುಳಸಿ ರಸವು ಕಲ್ಲುಗಳ ಸಮಸ್ಯೆಯನ್ನು ಹೋಗಲಾಡಿಸಲು ಸಹ ಉಪಯುಕ್ತವಾಗಿದೆ. ಅದಕ್ಕಾಗಿ ತುಳಸಿ ಎಲೆಗಳನ್ನು ತೆಗೆದುಕೊಂಡು ಸರಿಯಾಗಿ ಸ್ವಚ್ಛಗೊಳಿಸಿ ರಸ ತೆಗೆಯಿರಿ. ಈ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಬೆಳಗ್ಗೆ ಮತ್ತು ಸಂಜೆ ಕುಡಿಯಿರಿ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ಕಲ್ಲುಗಳ ಸಮಸ್ಯೆ ನಿವಾರಣೆಯಾಗುತ್ತದೆ.


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತ ಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.