Home remedies for cough and cold : ಕೆಮ್ಮು ಮತ್ತು ಕಫದಿಂದಾಗಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉಸಿರಾಟದ ತೊಂದರೆಗಳು, ವಿಶೇಷವಾಗಿ ಕಫ ತಲೆನೋವಾಗಿ ಪರಿಣಮಿಸುತ್ತದೆ. ಅಲ್ಲದೆ, ಜ್ವರ ಬರುತ್ತದೆ.. ಇದರಿಂದ ನಮಗೆ ಯಾವುದೇ ಕೆಲಸಗಳನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಬನ್ನಿ ಈ ಮನೆ ಮದ್ದುಗಳನ್ನು ಪ್ರಯತ್ನಿಸಿ.. 


COMMERCIAL BREAK
SCROLL TO CONTINUE READING

ಚಳಿಗಾಲದಲ್ಲಿ ಅಷ್ಟೇ ಅಲ್ಲ, ಬೇಸಿಗೆಯಲ್ಲಿಯೂ ಸಾಕಷ್ಟು ಜನ ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಾರೆ. ದೇಹದ ನಿರ್ಜಲಿಕರಣದಿಂದಾಗಿ ಈ ಸಮಸ್ಯೆ ಉದ್ಭವಿಸುತ್ತದೆ. ಕೆಮ್ಮು ಮತ್ತು ಕಫವನ್ನು ಚಿಟಿಕೆಯಲ್ಲಿ ಕಡಿಮೆ ಮಾಡಲು ಕೆಲವು ಸಲಹೆಗಳು ಇಲ್ಲಿವೆ.. ಪ್ರಯತ್ನಿಸಿ.


ಇದನ್ನೂ ಓದಿ: ಗಂಟುಗಳಲ್ಲಿ ಸೇರಿಕೊಂಡು ನೋವಿಗೆ ಕಾರಣವಾಗುವ ಯುರಿಕ್ ಆಸಿಡ್ ಅನ್ನು ಕರಗಿಸುತ್ತದೆ ಈ ಜ್ಯೂಸ್ !


ತುಳಸಿ ನೀರು: ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೋಸಿ ಕುಡಿದರೆ ಕೆಮ್ಮು ಮತ್ತು ಕಫ ನಿವಾರಣೆಯಾಗುತ್ತದೆ.


ಶುಂಠಿ ಚಹಾ: ಶುಂಠಿಯ ತುಂಡುಗಳನ್ನು ನೀರಿನಲ್ಲಿ ಕುದಿಸಿ ಜೇನುತುಪ್ಪದೊಂದಿಗೆ ಸೇರಿಸಿ ಕುಡಿಯುವುದರಿಂದ ಗಂಟಲು ನೋವು ಮತ್ತು ಕೆಮ್ಮು ಕಡಿಮೆಯಾಗುತ್ತದೆ.


ಮನೆ ಮದ್ದು : ಮೆಣಸು, ಜೀರಿಗೆ, ಕೊತ್ತಂಬರಿ ಸೊಪ್ಪು ಮತ್ತು ತುಳಸಿ ಎಲೆಗಳ ಕಷಾಯ ಮಾಡಿ ಕುಡಿದರೆ ಕೆಮ್ಮು ಮತ್ತು ಕಫವನ್ನು ಕಡಿಮೆಯಾಗುತ್ತದೆ.


ಇದನ್ನೂ ಓದಿ: ಬೆಳಗ್ಗೆ ಈ ಕಾಫಿ ಕುಡಿದರೆ ಸಾಕು ಬ್ಲಡ್ ಶುಗರ್ ಒಮ್ಮೆಲೇ ನಾರ್ಮಲ್ ಆಗಿ ಬಿಡುತ್ತದೆ! ಅದ್ಯಾವ ಕಾಫೀ ನೋಡಿ !


ಸ್ಟ್ರೀಮ್‌ : ನೀಲಗಿರಿ ಎಣ್ಣೆಯನ್ನು ಬಿಸಿ ನೀರಿಗೆ ಹಾಕಿ ಅದರ ಆವಿಯನ್ನು ಮೂಗಿನ ಮೂಲಕ ಉಸಿರಾಡಿದರೆ ಮೂಗು ಕಟ್ಟುವಿಕೆ ಮತ್ತು ಕೆಮ್ಮು ನಿವಾರಣೆಯಾಗುತ್ತದೆ. 


ಜೇನು: ಒಂದು ಚಮಚ ಜೇನುತುಪ್ಪವನ್ನು ನೇರವಾಗಿ ಅಥವಾ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.


ಬಿಸಿ ನೀರಿನಿಂದ ಸ್ನಾನ: ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹವು ಬೆಚ್ಚಗಾಗುತ್ತದೆ ಮತ್ತು ಕೆಮ್ಮು ಮತ್ತು ಕಫವನ್ನು ನಿವಾರಿಸುತ್ತದೆ.


ಸೂಪ್: ಚಿಕನ್ ಸೂಪ್ ಮತ್ತು ಟೊಮೆಟೊ ಸೂಪ್ ಕುಡಿಯುವುದರಿಂದ ಅದು ದೇಹವನ್ನು ಬೆಚ್ಚಗಾಗಿಸುತ್ತದೆ ಮತ್ತು ಕೆಮ್ಮು ಮತ್ತು ಕಫವನ್ನು ಕಡಿಮೆ ಮಾಡುತ್ತದೆ.


ಬಿಸಿ ನೀರು: ಸಾಕಷ್ಟು ಬಿಸಿ ನೀರು ಕುಡಿಯುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ, ಕಫವನ್ನು ತೆಳುಗೊಳಿಸುತ್ತದೆ ಮತ್ತು ಕೆಮ್ಮನ್ನು ನಿವಾರಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.