Health Benefits of Quinoa : ಯಾವುದೇ ಆಹಾರವಾಗಲೀ  ಪಾನೀಯವಾಗಲಿ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ನಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ.  ಆರೋಗ್ಯವಾಗಿರಲು ಬಯಸುವುದಾದರೆ ದೈನಂದಿನ ಆಹಾರದಲ್ಲಿ ಕೆಲವು ಧಾನ್ಯಗಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಕ್ವಿನೋವಾ ಅಂತಹ ಪೋಷಕಾಂಶ-ಭರಿತ ಧಾನ್ಯಗಳಲ್ಲಿ ಒಂದು. ಇದನ್ನು ಚಳಿಗಾಲದ ಸೂಪರ್ ಫುಡ್ ಎಂದು ಕೂಡಾ ಕರೆಯಲಾಗುತ್ತದೆ. ಕ್ವಿನೋವಾದಲ್ಲಿ ಫೈಬರ್, ವಿಟಮಿನ್ ಬಿ , ವಿಟಮಿನ್ ಇ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ರಂಜಕದಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಇದರಲ್ಲಿರುವ ಪೋಷಕಾಂಶಗಳು ಹೃದಯಾಘಾತ ಮತ್ತು ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ತಡೆಯುತ್ತದೆ. 


COMMERCIAL BREAK
SCROLL TO CONTINUE READING

ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ : 
ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಕ್ವಿನೋವಾದಲ್ಲಿವೆ. ಕ್ವಿನೋವಾ ಹೃದ್ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 


ಇದನ್ನೂ ಓದಿ : Health Tips: ಬಿಪಿ-ಶುಗರ್ ಅಷ್ಟೇ ಅಲ್ಲ ಕ್ಯಾನ್ಸರ್ ರೋಗಿಗಳಿಗೂ ತುಂಬಾ ಲಾಭಕಾರಿ ಈ ಹಸಿರು ತರಕಾರಿ


ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ :
ಕ್ವಿನೋವಾ ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ಇದರಲ್ಲಿ ಫೈಬರ್ ಅಂಶ ಹೇರಳವಾಗಿರುತ್ತದೆ. ಇದನ್ನು ಸೇವಿಸುವುದರಿಂದ ಮಲಬದ್ಧತೆ, ಅಜೀರ್ಣದಂತಹ ಸಮಸ್ಯೆಗಳು ದೂರವಾಗುತ್ತವೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ನಿಮ್ಮ ಆಹಾರದ ಮೆನುವಿನಲ್ಲಿ ಕ್ವಿನೋವಾಕ್ಕೆ ಒಂದು ಜಾಗವಿರಲಿ.


ಕ್ಯಾನ್ಸರ್ ಗೆ ಪರಿಹಾರ ಕ್ವಿನೋವಾ :
ಕ್ವಿನೋವಾ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳನ್ನು ಗುಣಪಡಿಸುವ ಕೆಲಸ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಕ್ವಿನೋವಾ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಯೋಜನಕಾರಿಯಾಗಿದೆ. 


ಮೂಳೆಗಳನ್ನು ಬಲಪಡಿಸುತ್ತದೆ :
ಪ್ರೋಟೀನ್, ಅಮೈನೋ ಆಮ್ಲಗಳು, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ರಂಜಕದಂತಹ ಪೋಷಕಾಂಶಗಳು ಮೂಳೆಗಳನ್ನು ಬಲಪಡಿಸಲು  ಸಹಾಯ ಮಾಡುತ್ತವೆ. ಕ್ವಿನೋವಾವನ್ನು ತಿನ್ನುವ ಮೂಲಕ ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್‌ನಂತಹ ರೋಗಗಳ ಅಪಾಯವನ್ನು ತೆಗೆದುಹಾಕುತ್ತದೆ. 


ಇದನ್ನೂ ಓದಿ : Soaked Figs Benefits: ನೆನೆಹಾಕಿದ ಅಂಜೂರ ಸೇವನೆಯಿಂದಾಗುವ ಲಾಭಗಳು ನಿಮಗೆ ತಿಳಿದಿವೆಯೇ?


ರಕ್ತಹೀನತೆಯ ಅಪಾಯವನ್ನು ನಿವಾರಿಸುತ್ತದೆ :
ಈ ಧಾನ್ಯವು ಕಬ್ಬಿಣದ ಅಂಶದಲ್ಲಿ ಸಮೃದ್ಧವಾಗಿದೆ. ಕ್ವಿನೋವಾ ಸೇವನೆಯು ದೇಹದಲ್ಲಿನ ರಕ್ತಹೀನತೆಯನ್ನು ಹೋಗಲಾಡಿಸುತ್ತದೆ. ಮತ್ತು ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯಿದ್ದರೆ ಕ್ವಿನೋವಾ ಸೇವನೆ ಪರಿಹಾರ ನೀಡುತ್ತದೆ.  


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.