ಬೆಂಗಳೂರು : ಅನೇಕರು ಉತ್ತಮ ಆರೋಗ್ಯ, ಫಿಟ್ನೆಸ್ ಕಾಯ್ದುಕೊಳ್ಳಬೇಕು ಎಂಬ ಉದ್ದೇಶದಿಂದ  ಮಾಂಸಾಹಾರವನ್ನು ಸೇವಿಸುತ್ತಾರೆ.  ಮಾಂಸಾಹಾರವನ್ನು  ತಿನ್ನುವುದರ ಮೂಲಕ ನೀವು ಆರೋಗ್ಯ ವೃದ್ಧಿಸಬಹುದು ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ವಾಸ್ತವವಾಗಿ ಹಾಗಾಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಮಾಂಸಾಹಾರ ಒಳ್ಳೆಯದಲ್ಲ.  ಮಾಂಸಾಹಾರವನ್ನುತ್ಯಜಿಸಿ  ಸಸ್ಯಾಹಾರಿಗಳಾಗಲು ಬಯಸಿದರೆ, ಸಸ್ಯಾಹಾರದ   ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲೇಬೇಕು.  


COMMERCIAL BREAK
SCROLL TO CONTINUE READING

ದೇಹ  ತೂಕ ಇಳಿಕೆಯಾಗುತ್ತದೆ:
ಸಸ್ಯಾಹಾರವನ್ನು ಸೇವಿಸುವುದರಿಂದ ತೂಕ ಇಳಿಕೆ (Weight Loss) ಯಾಗುತ್ತದೆ ಎಂಬುದು 2016 ರಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. ವಾಸ್ತವವಾಗಿ, ಸಸ್ಯಾಹಾರಿ ಆಹಾರದಲ್ಲಿ ಕೊಬ್ಬಿನ ಅಂಶ ಕಡಿಮೆ ಇರುತ್ತದೆ. ಅಲ್ಲದೆ, ಸಸ್ಯಾಹಾರಿ ಆಹಾರವು ಚಯಾಪಚಯ ಕ್ರಿಯೆಯನ್ನು(Metabolism)   ಹೆಚ್ಚಿಸುವ ಮೂಲಕ ದೇಹ ತೂಕ ಇಳಿಸಲು ಸಹಾಯ ಮಾಡುತ್ತದೆ. 


ಇದನ್ನೂ ಓದಿ ನಗಬೇಡಿ..! ಹೃದಯಾಘಾತ ಬಾತ್ ರೂಮಿನಲ್ಲೇ ಹೆಚ್ಚು.! ಏನದು ಲಿಂಕ್..?


ಮಧುಮೇಹವನ್ನು ದೂರವಿಡಬಹುದು :
ಸಸ್ಯಾಹಾರಿ ಆಹಾರಗಳೆಂದರೆ   ಧಾನ್ಯಗಳು, ಹಸಿರು ಎಲೆಗಳ ತರಕಾರಿಗಳು, ಹಣ್ಣುಗಳು (Fruits) ಮತ್ತು ಬೀಜಗಳನ್ನು ಒಳಗೊಂಡಿರುತ್ತದೆ. ಈ ಆಹಾರಗಳಲ್ಲಿ ಗ್ಲೈಸೆಮಿಕ್ ಅಂಶ ಕಡಿಮೆಯಿರುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿ ಸಕ್ಕರೆ ಅಂಶವು (Sugar) ನಿಯಂತ್ರಣದಲ್ಲಿರುತ್ತದೆ. ಇದಲ್ಲದೆ, ಮಾಂಸಾಹಾರಿಗಳಿಗೆ (Non  Vegetarian) ಹೋಲಿಸಿದರೆ, ಸಸ್ಯಾಹಾರಿಗಳಲ್ಲಿ ಮಧುಮೇಹದ ಅಪಾಯವು  ಐವತ್ತು ಪ್ರತಿಶತದಷ್ಟು ಕಡಿಮೆಯಿರುತ್ತದೆ. 


ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ: 
ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಸಸ್ಯಾಹಾರಿಗಳಲ್ಲಿ ಮಾಂಸಾಹಾರಿಗಳಿಗಿಂತ ಕಡಿಮೆ ರಕ್ತದೊತ್ತಡವಿರುತ್ತದೆ. (Blood Pressure).  ಸಸ್ಯ ಆಧಾರಿತ ಆಹಾರಗಳಲ್ಲಿ ಕಡಿಮೆ ಪ್ರಮಾಣದ ಕೊಬ್ಬು, ಸೋಡಿಯಂ ಮತ್ತು ಕೊಲೆಸ್ಟ್ರಾಲ್ ಇರುತ್ತದೆ. ಈ ಕಾರಣದಿಂದಾಗಿ, ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.


ಇದನ್ನೂ ಓದಿ : DANGER ! ಚಹಾ ಜೊತೆ ತಪ್ಪಿಯೂ ಈ ತಪ್ಪು ಮಾಡಬೇಡಿ..! ಅಪಾಯ ಖಚಿತ


ಹೃದಯ ಆರೋಗ್ಯಕರವಾಗಿರುತ್ತದೆ: 
ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಪ್ರಕಾರ, ಸಸ್ಯಾಹಾರಿಗಳಿಗೆ ಮಾಂಸಾಹಾರಿಗಳಿಗಿಂತ ಮೂರನೇ ಒಂದು ಭಾಗದಷ್ಟು ಕಡಿಮೆ ಹೃದಯ ಸಮಸ್ಯೆಗಳಿವೆ. ಅಧ್ಯಯನದ ಪ್ರಕಾರ, ಮಾಂಸಾಹಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಕಂಡುಬರುತ್ತದೆ. ಇದು ಹೃದಯದ ಅಪಧಮನಿಗಳನ್ನು ನಿರ್ಬಂಧಿಸುತ್ತದೆ. ಈ ಕಾರಣದಿಂದಾಗಿ, ಹೃದಯ ಸಮಸ್ಯೆಯ (Heart disease) ಅಪಾಯವು ಹೆಚ್ಚಾಗುತ್ತದೆ.


ಕ್ಯಾನ್ಸರ್ ಅಪಾಯ ಕಡಿಮೆ: 
ಅಧ್ಯಯನದ ಪ್ರಕಾರ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ (Immunity) ಹೆಚ್ಚುತ್ತದೆ.  ಮಾಂಸಾಹಾರಿಗಳಿಗೆ ಹೋಲಿಸಿದರೆ ಸಸ್ಯಾಹಾರಿಗಳಿಗೆ ಕ್ಯಾನ್ಸರಿನ (Cancer) ಅಪಾಯ ಕೂಡಾ ಕಡಿಮೆಯೇ.  ಸ್ವೀಡಿಷ್ ಅಧ್ಯಯನದ ಪ್ರಕಾರ, ಸಸ್ಯಾಹಾರಿ ಜನರಲ್ಲಿ ಆಸ್ತಮಾದ ಅಪಾಯವೂ ಕಡಿಮೆ ಎಂದೇ ಹೇಳಲಾಗಿದೆ


ಇದನ್ನೂ ಓದಿ : Fruit lables : ಹಣ್ಣಿನಲ್ಲಿ ಸ್ಟಿಕರ್ ಯಾಕೆ ಹಾಕಿರುತ್ತಾರೆ ಗೊತ್ತಾ ? ಲೇಬಲ್ ಕೋಡ್ ಏನು ಹೇಳುತ್ತೆ..?


ಲೈಂಗಿಕ ಜೀವನವು ಉತ್ತಮಗೊಳ್ಳುತ್ತದೆ :
ಯುನೈಟೆಡ್ ಕಿಂಗ್‌ಡಂನಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಸಸ್ಯಾಹಾರಿಗಳಿಗೆ ಹೋಲಿಸಿದರೆ ಮಾಂಸಾಹಾರಿಗಳು  ತಮ್ಮ ಲೈಂಗಿಕ ಜೀವನದಲ್ಲಿ ಸಂತೋಷವಾಗಿ ಇರುತ್ತಾರೆ ಎಂದು ಹೇಳಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.