Raw Milk Skin Care Tips: ಹಸಿ ಹಾಲನ್ನು ಈ ರೀತಿ ಬಳಸಿ ಸುಂದರ ತ್ವಚೆ ನಿಮ್ಮದಾಗಿಸಿ
Raw Milk Skin Care Tips: ಹಸಿ ಹಾಲಿನಿಂದ ಉತ್ತಮ ತ್ವಚೆ ಪಡೆಯಲು ಕೆಲವು ಸಿಂಪಲ್ ಟಿಪ್ಸ್ ಅನ್ನು ನಾವು ನಿಮಗೆ ನೀಡಲಿದ್ದೇವೆ.
Raw Milk Skin Care Tips: ಪ್ರತಿಯೊಂದು ಮನೆಯಲ್ಲೂ ಹಾಲನ್ನು ಬಳಸಲಾಗುತ್ತದೆ. ಚಹಾ ಸೇರಿದಂತೆ ಅನೇಕ ಖಾದ್ಯಗಳನ್ನು ಹಾಲಿನಿಂದ ತಯಾರಿಸಲಾಗುತ್ತದೆ. ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ ಇದ್ದು ಅದು ಮೂಳೆಗಳನ್ನು ಬಲಪಡಿಸುತ್ತದೆ. ಇದಲ್ಲದೆ, ಹಾಲು ಚರ್ಮಕ್ಕೆ ಸಹ ತುಂಬಾ ಒಳ್ಳೆಯದು ಎಂದು ಸಾಬೀತುಪಡಿಸುತ್ತದೆ. ನಿಮ್ಮ ಸೌಂದರ್ಯ ವೃದ್ಧಿಗಾಗಿ ಕಚ್ಚಾ ಹಾಲು ಎಂದರೆ ಹಸಿ ಹಾಲನ್ನು ಬಳಸಬಹುದು. ಹಸಿ ಹಾಲನ್ನು ಯಾವ ರೀತಿ ಬಳಸುವುದರಿಂದ ಉತ್ತಮ ತ್ವಚೆಯನ್ನು ಪಡೆಯಬಹುದು ಎಂದು ತಿಳಿಯಿರಿ...
ಹಸಿ ಹಾಲಿನಿಂದ ಫೇಸ್ ಟೋನರ್ (Make facial toner with raw milk):
ಫೇಸ್ ಟೋನರ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
>> 1 ಚಮಚ ಹಸಿ ಹಾಲು
>> 1 ಟೀಸ್ಪೂನ್ ನಿಂಬೆ ರಸ
>> ಹತ್ತಿಯ ಉಂಡೆ
ಟೋನರ್ ತಯಾರಿಸುವ ವಿಧಾನ :
ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ, ನೀವು ಹಸಿ ಹಾಲಿನಲ್ಲಿ (Raw Milk) ನಿಂಬೆ ರಸವನ್ನು ಬೆರೆಸಿ ಮುಖವನ್ನು ಸ್ವಚ್ಛಗೊಳಿಸಬಹುದು. ಆದರೆ ನಿಮ್ಮ ಚರ್ಮವು ಒಣಗಿದ್ದರೆ, ಹತ್ತಿ ಚೆಂಡನ್ನು ಹಸಿ ಹಾಲಿನಲ್ಲಿ ಅದ್ದಿ ಮತ್ತು ಅದರೊಂದಿಗೆ ಮುಖವನ್ನು ಸ್ವಚ್ಛಗೊಳಿಸಿ.
ಇದನ್ನೂ ಓದಿ - ಹಾಲು ಯಾವಾಗ ಕುಡಿದರೆ ಒಳ್ಳೆಯದು..! ಸಿಂಪಲ್ ಹೆಲ್ತ್ ಟಿಪ್ಸ್
ಕಚ್ಚಾ ಹಾಲಿನಿಂದ ಮುಖದ ಸ್ಕ್ರಬ್ (Facial scrub with raw milk) :
ಸ್ಕ್ರಬ್ ತಯಾರಿಸಲು ಬೇಕಾಗುವ ವಸ್ತುಗಳು:
- 1 ಚಮಚ ಹಸಿ ಹಾಲು
- 1/2 ಟೀಸ್ಪೂನ್ ಜೇನುತುಪ್ಪ
- 1 ಚಮಚ ಓಟ್ಸ್
ಸ್ಕ್ರಬ್ ತಯಾರಿಸುವ ವಿಧಾನ:
ಓಟ್ಸ್ ಅನ್ನು ರುಬ್ಬುವ ಮೂಲಕ ಪುಡಿ ಮಾಡಿ. ಇದರ ನಂತರ, ಒಂದು ಪಾತ್ರೆಯಲ್ಲಿ ಓಟ್ಸ್, ಹಸಿ ಹಾಲು ಮತ್ತು ಜೇನುತುಪ್ಪ (Honey)ವನ್ನು ಮಿಶ್ರಣ ಮಾಡಿ. ನಂತರ ಈ ಮಿಶ್ರಣದಿಂದ ಮುಖ (Face) ಮತ್ತು ಕುತ್ತಿಗೆಯನ್ನು ಸ್ಕ್ರಬ್ ಮಾಡಿ.
ಇದನ್ನೂ ಓದಿ - Diabetes: ಮಧುಮೇಹ ರೋಗಿಗಳು ಈ 3 ವಿಧಾನಗಳಲ್ಲಿ ಹಾಲನ್ನು ಸೇವಿಸಿದರೆ ಶುಗರ್ ನಿಯಂತ್ರಣದಲ್ಲಿರುತ್ತೆ
ಹಸಿ ಹಾಲಿನ ಫೇಸ್ ಮಾಸ್ಕ್ (Raw milk face mask):
ಫೇಸ್ ಮಾಸ್ಕ್ ತಯಾರಿಸಲು ಬೇಕಾಗುವ ಪದಾರ್ಥಗಳು:
* 1 ಟೀಸ್ಪೂನ್ ಮುಲ್ತಾನಿ ಮಿಟ್ಟಿ
* 1 ಟೀಸ್ಪೂನ್ ಕಡಲೆ ಹಿಟ್ಟು
* 1 ಚಮಚ ಹಸಿ ಹಾಲು
ಫೇಸ್ ಮಾಸ್ಕ್ ತಯಾರಿಸುವ ವಿಧಾನ:
ಒಂದು ಪಾತ್ರೆಯಲ್ಲಿ ಮುಲ್ತಾನಿ ಮಿಟ್ಟಿ, ಕಡಲೆ ಹಿಟ್ಟು ಮತ್ತು ಹಸಿ ಹಾಲನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಮತ್ತು 20 ನಿಮಿಷಗಳ ನಂತರ ಮುಖವನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ. ನೀವು ಡ್ರೈ ಸ್ಕಿನ್ ಹೊಂದಿದ್ದರೆ ಈ ಮನೆಯಲ್ಲಿ ಮಾಡಿದ ಫೇಸ್ ಮಾಸ್ಕ್ ಗೆ 1 ಟೀ ಚಮಚ ಜೇನುತುಪ್ಪವನ್ನು ಬೆರೆಸಿ ಬಳಸಿ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ. ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ