Knee Pain Treatment: ಕೀಲು ನೋವನ್ನು ಬುಡಸಮೇತ ನಿವಾರಿಸುತ್ತೆ ಹಸಿ ಪಪ್ಪಾಯಿ, ಈ ರೀತಿ ಸೇವಿಸಿ
Home Remedies for High Uric Acid: ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಂತೆ ಕೀಲು ನೋವು, ಸೆಳೆತ ಮತ್ತು ಉರಿಯೂತದ ಸಮಸ್ಯೆ ಹೆಚ್ಚಾಗುತ್ತದೆ, ಆದರೆ ಹಸಿ ಪಪ್ಪಾಯಿ ಈ ಸಮಸ್ಯೆಗಳನ್ನು ಮಾತ್ರವಲ್ಲದೆ ಯೂರಿಕ್ ಆಸಿಡ್ ಅನ್ನು ಮೂಲದಿಂದ ನಿವಾರಿಸುತ್ತದೆ. ಹೇಗೆ ತಿಳಿದುಕೊಳ್ಳೋಣ ಬನ್ನಿ
Joints Pain-Arthritis Treatment :ನೀವು ಅಧಿಕ ತೂಕ ಹೊಂದಿದ್ದರೆ ಅಥವಾ ಯೂರಿಕ್ ಆಮ್ಲವು ನಿಮ್ಮ ದೇಹದಲ್ಲಿ ವೇಗವಾಗಿ ಹೆಚ್ಚುತ್ತಿದ್ದರೆ, ಹಸಿ ಪಪ್ಪಾಯಿಯು ನಿಮಗೆ ರಾಮಬಾಣವೆಂದು ಸಾಬೀತಾಗಲಿದೆ. ಇದನ್ನು ತಿನ್ನುವ ಸರಿಯಾದ ಮಾರ್ಗ, ಸಮಯ ಮತ್ತು ಅನುಪಾತದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದ ತಕ್ಷಣ ಕೀಲು ನೋವು ಅಥವಾ ಸಂಧಿವಾತದ ಸಮಸ್ಯೆ ಶುರುವಾಗುತ್ತದೆ. ಯೂರಿಕ್ ಆಸಿಡ್ ಅನ್ನು ಸಮಯಕ್ಕೆ ನಿಯಂತ್ರಿಸದೆ ಹೋದಲ್ಲಿ, ಅದು ಸಂಧಿವಾತವಾಗಿ ಬದಲಾಗುತ್ತದೆ ಮತ್ತು ನಂತರ ನಡೆದಾದುವುದರಿಂದ ಹಿಡಿದು ಕುಳಿತುಕೊಳ್ಳುವವರೆಗೆ ಅಸಹನೀಯ ನೋವು ಕೊಡುತ್ತದೆ. ಆದರೆ ಇಲ್ಲಿ ನಾವು ಹಸಿ ಪಪ್ಪಾಯಿಯ ಪ್ರಯೋಜನಗಳ ಬಗ್ಗೆ ಹೇಳುತ್ತಿದ್ದೇವೆ. ಹಸಿ ಪಪ್ಪಾಯಿ ಸೇವನೆ ನಿಮ್ಮೀ ಸಮಸ್ಯೆಯನ್ನು ಬುಡಸಮೇತ ನಿವಾರಿಸುತ್ತದೆ.
ಹಸಿ ಪಪ್ಪಾಯಿಯ ಗುಣಗಳು
ಹಸಿ ಪಪ್ಪಾಯಿಯು ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಕ್ಯಾಲೋರಿಯೂ ಕಡಿಮೆಯಾಗಿರುತ್ತದೆ. ಇದು ವಿಟಮಿನ್ ಸಿ, ಫೋಲೇಟ್ ಮತ್ತು ವಿಟಮಿನ್ ಇ ಗಳಿಂದ ಸಮೃದ್ಧವಾಗಿದೆ ಮತ್ತು ಯೂರಿಕ್ ಆಮ್ಲವನ್ನು ಕಡಿಮೆ ಮಾಡುವಲ್ಲಿ ಈ ಮೂರೂ ರಾಸಾಯನಿಕಗಳು ಔಷಧಿಗಳಂತೆ ಕೆಲಸ ಮಾಡುತ್ತವೆ. ಹಾಗಾದರೆ ಪಪ್ಪಾಯಿಯ ಹೆಚ್ಚಿನ ಪ್ರಯೋಜನಗಳನ್ನು ಮತ್ತು ಅದನ್ನು ತಿನ್ನಲು ಸರಿಯಾದ ಮಾರ್ಗ ಯಾವುದು ತಿಳಿದುಕೊಳ್ಳೋಣ.
ಪಪ್ಪಾಯಿ ಜ್ಯೂಸ್ ತಯಾರಿಸಿ
ಯೂರಿಕ್ ಆಮ್ಲವನ್ನು ತಕ್ಷಣವೇ ನಿಯಂತ್ರಣಕ್ಕೆ ತರಬೇಕು ಎಂದರೆ, ನೀವು ಪ್ರತಿದಿನ ಬೆಳಗ್ಗೆ ಕನಿಷ್ಠ ಒಂದು ಲೋಟ ಹಸಿ ಪಪ್ಪಾಯಿ ರಸವನ್ನು ಕುಡಿಯುವುದು ಮುಖ್ಯ. ನೀವು ಬಯಸಿದರೆ, ನೀವು ಅದರಲ್ಲಿ ನಿಂಬೆ ಅಥವಾ ಜೇನುತುಪ್ಪವನ್ನು ಕೂಡ ಬೆರೆಸಬಹುದು. ಅದರಲ್ಲಿಯೂ ವಿಶೇಷವಾಗಿ ಯೂರಿಕ್ ಆಮ್ಲ ಹೆಚ್ಚಳ ಸಮಸ್ಯೆ ಇರುವವರು ಹಳಸಿದ ಬಾಯಿ ಇದನ್ನು ಕುಡಿಯುವುದರಿಂದ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡಲು ಮಾಡಲು ಇದು ಸಹಾಯ ಮಾಡುತ್ತದೆ.
ಇದನ್ನೂ ಓದಿ-ಈ ಆಹಾರಗಳನ್ನು ಸೇವಿಸಿದರೆ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆ ಎದುರಾಗುವುದೇ ಇಲ್ಲ
ತರಕಾರಿಯ ರೂಪದಲ್ಲಿ ಸೇವಿಸಿ
ನೀವು ಇದನ್ನು ತರಕಾರಿಯ ರೂಪದಲ್ಲಿ ಸೇವಿಸುವ ಅಭ್ಯಾಸ ಮಾಡಿಕೊಂಡರೂ ಕೂಡ ಉತ್ತಮ, ಇದು ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಇದನ್ನು ತಯಾರಿಸುವಾಗ, ಅದರಲ್ಲಿ ಮೆಂತ್ಯ ಮತ್ತು ಇಂಗು ಹಾಕಿ. ಅರಿಶಿನ ಮತ್ತು ಉಪ್ಪಿನೊಂದಿಗೆ ಬೇಯಿಸಿ. ಯೂರಿಕ್ ಆಸಿಡ್ ಅಧಿಕವಾಗಿರುವ ಯಾವುದೇ ರೂಪದಲ್ಲಿ ಹಸಿ ಪಪ್ಪಾಯಿಯನ್ನು ಆದಷ್ಟು ಹೆಚ್ಚು ತಿನ್ನಲು ಪ್ರಯತ್ನಿಸಿ.
ಇದನ್ನೂ ಓದಿ-ಈ ವಿಟಮಿನ್ಗಳ ಕೊರತೆಯಿಂದ ದುರ್ಬಲಗೊಳ್ಳುತ್ತೆ ಮೂಳೆಗಳು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.