Raw Turmeric Benefits: ಈ ರೋಗಗಳಿಗೆ ಹಸಿ ಅರಿಶಿನ ರಾಮಬಾಣ, ಹೀಗೆ ಬಳಸಿರಿ
ಹಸಿ ಅರಿಶಿನದ ಪ್ರಯೋಜನಗಳು: ಹಸಿ ಅರಿಶಿನವನ್ನು ಸೇವಿಸುವುದರಿಂದ ಅನೇಕ ರೋಗಗಳು ನಿಮ್ಮಿಂದ ದೂರವಾಗುತ್ತವೆ. ಮಧುಮೇಹ ಅಥವಾ ಬೊಜ್ಜು ಇರಲಿ ಅರಿಶಿನದ ಬಳಕೆಯಿಂದ ನಿಮಗೆ ಅನೇಕ ಪ್ರಯೋಜನಗಳು ಲಭಿಸುತ್ತವೆ. ಅರಿಶಿನದ ಪ್ರಯೋಜನಗಳೇನು ಎಂಬುದರ ಬಗ್ಗೆ ತಿಳಿಯಿರಿ.
ನವದೆಹಲಿ: ಶುಂಠಿಯಂತೆ ಅರಿಶಿನವು ಸಹ ಅನೇಕ ರೋಗ ನಿವಾರಕ ಗುಣಗಳನ್ನು ಮತ್ತು ಪ್ರಯೋಜನಗಳನ್ನು ಹೊಂದಿದೆ. ಅರಿಶಿನವು ಚಳಿಗಾಲದಲ್ಲಿ ವ್ಯಕ್ತಿಯ ಆರೋಗ್ಯವನ್ನು ಸದೃಢವಾಗಿಡಲು ಬಹಳ ಸಹಾಯಕವಾಗಿದೆ. ಅರಿಶಿನದಲ್ಲಿ ಹೇರಳ ಔಷಧೀಯ ಗುಣಗಳು ಕಂಡುಬರುತ್ತವೆ. ಇದು ಹಲವಾರು ರೋಗಗಳಿಂದ ನಿಮಗೆ ಮುಕ್ತಿ ನೀಡುತ್ತದೆ.
ಇದಲ್ಲದೆ ಕ್ಯಾಲ್ಸಿಯಂ, ಕಬ್ಬಿಣ ಸೇರಿದಂತೆ ಅನೇಕ ಜೀವಸತ್ವಗಳು ಹಸಿ ಅರಿಶಿನದಲ್ಲಿ ಕಂಡುಬರುತ್ತವೆ. ಇವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹಸಿ ಅರಿಶಿನವು ರುಚಿಯಲ್ಲಿ ಕಹಿಯಾಗಿರುತ್ತದೆ. ಅದನ್ನು ತಿನ್ನಲು ತುಂಬಾ ಕಷ್ಟ. ನೀವು ನಿಯಮಿತವಾಗಿ ಅರಿಶಿನ ಸೇವಿಸಿದರೆ, ಹಲವು ಆರೋಗ್ಯಕರ ಪ್ರಯೋಜನಗಳು ದೊರೆಯುತ್ತವೆ. ಹಾಗಾದರೆ ಅರಿಶಿನ ಸೇವನೆಯಿಂದ ಆಗುವ ಲಾಭಗಳೇನು ಎಂಬುದರ ಬಗ್ಗೆ ತಿಳಿಯಿರಿ.
ಇದನ್ನೂ ಓದಿ: Lung Cancer: ದೇಹದಲ್ಲಿ ಈ ಬದಲಾವಣೆಗಳು ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ
ಮಧುಮೇಹದಲ್ಲಿ ಪ್ರಯೋಜನಕಾರಿ
ಸಕ್ಕರೆ ರೋಗಿಗಳಿಗೆ ಹಸಿ ಅರಿಶಿನ ವರದಾನವಾಗಿದೆ. ನೀವು ಅರಿಶಿನವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ವಾಸ್ತವವಾಗಿ ಅರಿಶಿನದಲ್ಲಿ ಕಂಡುಬರುವ ಲಿಪೊಪೊಲಿಸ್ಯಾಕರೈಡ್ ಎಂಬ ಅಂಶವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಚರ್ಮಕ್ಕೆ ಅದ್ಭುತ ಕಾಂತಿ ನೀಡುತ್ತದೆ
ಹಸಿ ಅರಿಶಿನವನ್ನು ಹಚ್ಚುವುದರಿಂದ ಮುಖದ ಹೊಳಪು ಮರಳಿ ಬರುತ್ತದೆ. ಪ್ರತಿದಿನ ಹಸಿ ಅರಿಶಿನವನ್ನು ಹಚ್ಚುವುದರಿಂದ ಕೆಲವೇ ದಿನಗಳಲ್ಲಿ ತ್ವಚೆಯ ಮೇಲಿನ ಕಲೆಗಳು ನಿವಾರಣೆಯಾಗಿ ಚರ್ಮವು ಹೊಳೆಯಲು ಪ್ರಾರಂಭಿಸುತ್ತದೆ. ನಿಮ್ಮ ಚರ್ಮದ ಆರೋಗ್ಯವನ್ನು ಸುಧಾರಿಸಲು ಬಯಸಿದರೆ ಮನೆಯಲ್ಲಿ ಹಸಿ ಅರಿಶಿನವನ್ನು ಮಾತ್ರ ಬಳಸಿ. ಇದಕ್ಕಾಗಿ ಒಂದು ಚಮಚ ಹಸಿ ಅರಿಶಿನದಲ್ಲಿ ಹಾಲನ್ನು ಬೆರೆಸಿ ಪೇಸ್ಟ್ ಮಾಡಿ ಮತ್ತು ಅದನ್ನು ಪ್ರತಿದಿನ ಮುಖಕ್ಕೆ ಹಚ್ಚಿರಿ. ನಂತರ ಸುಮಾರು ಅರ್ಧ ಘಂಟೆಯ ನಂತರ ತೊಳೆಯಿರಿ. ಇದರಿಂದ ನೀವು ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತೀರಿ.
ಇದನ್ನೂ ಓದಿ: Tea: ಚಹಾ ಸೇವನೆಯಿಂದ ತೂಕ ಹೆಚ್ಚಾಗುತ್ತದೆಯೇ? ಇದರ ಹಿಂದಿನ ನಿಜಾಂಶ ಏನು?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ