Are Bald Men More Virile : ಬೋಳು.. ಬಾಲ್ಡ್‌ ತಲೆ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ತುಂಬಾ ನೋವುಂಟು ಮಾಡುತ್ತದೆ. ಆದರೂ ಬೋಳು ತಲೆ ಇದ್ದವರು ಹೆಚ್ಚಿನ ಲೈಂಗಿಕ ಶಕ್ತಿಯನ್ನು ಹೊಂದಿರುತ್ತಾರೆ ಅವರು ತಮ್ಮ ಸಂಗಾತಿ ಜೊತೆ ಉತ್ತಮ ಲೈಂಗಿಕ ಕ್ರಿಯೆ ನಡೆಸುತ್ತಾರೆ ಎನ್ನುವ ಮಾತಿದೆ. ಬೋಳು ತಲೆ ಮತ್ತು ಪುರುಷತ್ವಕ್ಕೆ ಏನಾದ್ರೂ ಸಂಬಂಧವಿದೆಯೇ..? ಬನ್ನಿ ನೋಡೋಣ..


COMMERCIAL BREAK
SCROLL TO CONTINUE READING

ಬೋಳುತನಕ್ಕೂ ಲೈಂಗಿಕ ಶಕ್ತಿಗೂ ಯಾವುದೇ ಸಂಬಂಧವಿಲ್ಲ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. ಕೂದಲು ಉದುರುವುದು ಪುರುಷತ್ವವನ್ನು ಹೆಚ್ಚಿಸುವುದಿಲ್ಲ. ಪುರುಷತ್ವವು ವಾಸ್ತವವಾಗಿ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಇದು ಲೈಂಗಿಕ ಆರೋಗ್ಯ ಮತ್ತು ಫಲವತ್ತತೆಯನ್ನು ಒಳಗೊಂಡಿರುತ್ತದೆ. ಲೈಂಗಿಕತೆ ಉತ್ತಮವಾಗಿರಲು ದೈಹಿಕ, ಮಾನಸಿಕ, ಜೀವನಶೈಲಿ ಅಂಶಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದರು. ಆದರೆ ಬೋಳು ತಲೆ ಪುರುಷತ್ವವನ್ನು ಸುಧಾರಿಸುತ್ತದೆ ಎಂಬುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. 


ಇದನ್ನೂ ಓದಿ: ಮದ್ಯ ಸೇವನೆಯ ಬಳಿಕ ಈ ಆಹಾರಗಳನ್ನು ತಪ್ಪಿಯೂ ಕೂಡ ಸೇವಿಸಬೇಡಿ... ಜೀವಕ್ಕೆ ಅಪಾಯ!


ವಿಶ್ವದ ಶೇಕಡಾ 85 ರಷ್ಟು ಪುರುಷರು 50ನೇ ವಯಸ್ಸಿನಲ್ಲೇ ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೋಳು ತಲೆಗೆ ಅನೇಕ ಕಾರಣಗಳಿವೆ, ಕುಟುಂಬದಲ್ಲಿ ಯಾರಿಗಾದರೂ ಬೋಳು ಇದ್ದರೆ, ಅಲ್ಲದೆ, ತೀವ್ರ ಒತ್ತಡ, ಆಹಾರ ಪದ್ಧತಿ, ಅನಾರೋಗ್ಯ, ತೂಕ ಇಳಿಕೆ ಹೀಗೆ ಹಲವು ಕಾರಣಗಳಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ.


ಮೆಡಿಕಲ್ ಜರ್ನಲ್ ಆಫ್ ಆಸ್ಟ್ರೇಲಿಯಾದಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಬೋಳು ಪುರುಷರಲ್ಲಿ ಲೈಂಗಿಕತೆಯ ಸಮಸ್ಯೆಯನ್ನು ತಿಳಿಸುತ್ತದೆ. ಬೋಳುತನಕ್ಕೂ ಪುರುಷತ್ವಕ್ಕೂ ಸಂಬಂಧವಿಲ್ಲ ಎಂದು ಹೇಳಲಾಗುತ್ತದೆ.. ಬೋಳಾದ ಪುರುಷರು ತಮ್ಮ ಜೀವಿತಾವಧಿಯಲ್ಲಿ ನಾಲ್ಕಕ್ಕಿಂತ ಹೆಚ್ಚು ಮಹಿಳೆಯರೊಂದಿಗೆ ಸಂಭೋಗಿಸುವ ಸಾಧ್ಯತೆ ಕಡಿಮೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.