ಬೆಂಗಳೂರು : ಕನ್ನಡ ಚಲನಚಿತ್ರ ನಟ-ನಿರ್ದೇಶಕ ವಿಜಯ್ ರಾಘವೇಂದ್ರ  ಪತ್ನಿ ಸ್ಪಂದನಾ ಸಾವಿನ ಸುದ್ದಿ ನಿಜಕ್ಕೂ ಶಾಕಿಂಗ್. ತನ್ನ ಕುಟುಂಬದೊಂದಿಗೆ ಥೈಲ್ಯಾಂಡ್ ಪ್ರವಾಸದಲ್ಲಿದ್ದಾಗ ಸ್ಪಂದನಾ ಹೃದಯಾಘಾತಕ್ಕೆ ಒಳಗಾಗಿದ್ದಾರೆ.  ಭಾನುವಾರ ರಾತ್ರಿ ಮಲಗಿದ್ದ ಸ್ಪಂದನಾ ಬೆಳಗ್ಗೆ ಎದ್ದೇಳಲ್ಲಿಲ್ಲ  ಎಂದು  ವಿಜಯ್ ರಾಘವೇಂದ್ರ ಅವರ ಸಹೋದರ ಶ್ರೀ ಮುರಳಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ಪಂದನ ಮಾತ್ರವಲ್ಲ, ಮಲಗಿದ್ದ ವ್ಯಕ್ತಿ ಬೆಳಗ್ಗೆ ಎದ್ದೇಳಲಿಲ್ಲ ಎನ್ನುವ ಅನೇಕ ಪ್ರಕರಣಗಳನ್ನು ನಾವು ಕೇಳಿರುತ್ತೇವೆ. ಹಾಗಿದ್ದರೆ ನಿದ್ದೆಯಲ್ಲಿದ್ದಾಗ ಹಠಾತ್ತನೆ ಸಾವಿನೆಡೆಗೆ ಜಾರುವ ಹಿಂದಿರುವ ಕಾರಣ ಏನು ಎನ್ನುವ ಪ್ರಶ್ನೆ ಮನದಲ್ಲಿ ಮೂಡುತ್ತದೆ. 


COMMERCIAL BREAK
SCROLL TO CONTINUE READING

ಹಠಾತ್ ಹೃದಯ ಸ್ತಂಭನ ಯಾಕೆ ಆಗುತ್ತದೆ ? : 
ಹಠಾತ್ ಹೃದಯ ಸ್ತಂಭನದಿಂದ ನಿದ್ರೆಯಲ್ಲಿ ಸಾವು ಸಂಭವಿಸುತ್ತದೆ. ಇದು ಹೃದಯಾಘಾತದಂತೆ ಅಲ್ಲ. ಯುವತಿಯರಲ್ಲಿ ಹಠಾತ್ ಹೃದಯ ಸ್ತಂಭನವು ವಿವಿಧ ಕಾರಣಗಳಿಂದ ಉಂಟಾಗಬಹುದು. ತಜ್ಞರ ಪ್ರಕಾರ, ಹಠಾತ್ ಹೃದಯ ಸ್ತಂಭನವು ಹೃದಯ ಸಂಬಂಧಿ ಸಮಸ್ಯೆಗಳಿಂದ ಉಂಟಾಗುತ್ತದೆ. ಇದರಲ್ಲಿ ಹೃದಯದ ಅಪಧಮನಿಗಳ ಬ್ಲೋಕೆಜ್, ಹೃದಯದ ಲಯದಲ್ಲಿನ ಹಠಾತ್ ಬದಲಾವಣೆಗಳು ಅಥವಾ ಇತರ ಹೃದಯ ಕಾಯಿಲೆಗಳು ಸೇರಿವೆ.


ಇದನ್ನೂ ಓದಿ : ನಿಮ್ಮ ಲಿವರ್ ಫಿಟ್ ಆಗಿರಿಸಲು ನಿತ್ಯ ಮಾಡಿ ಈ 5 ಯೋಗಾಸನ


ಹೃದಯ ಸ್ತಂಭನದ ಅಪಾಯವನ್ನು ತಪ್ಪಿಸುವುದು ಹೇಗೆ ? : 
ಆರೋಗ್ಯಕರ ಜೀವನಶೈಲಿ: ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಸರಿಯಾಗಿ ತಿನ್ನುವುದು ಮತ್ತು ಒತ್ತಡವನ್ನು ನಿರ್ವಹಿಸುವುದರಿಂದ ಆರೋಗ್ಯವನ್ನು ಕಾಪಾಡಬಹುದು. 


ನಿಯಮಿತ ತಪಾಸಣೆ: ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮತ್ತು ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಇದರಿಂದ ನಮ್ಮ ಆರೋಗ್ಯ ಸ್ಥಿತಿ ಹೇಗಿದೆ ಎನ್ನುವ ಮಾಹಿತಿ ನಮ್ಮಲ್ಲಿರುತ್ತದೆ. 


ಹೃದಯದ ಆರೋಗ್ಯಕ್ಕೆ ಗಮನ ಕೊಡಿ: ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆರೋಗ್ಯ ಸಲಹೆಗಾರರನ್ನು ಸಂಪರ್ಕಿಸುವುದು ಒಳ್ಳೆಯದು.  ವಿಶೇಷವಾಗಿ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಹೃದಯ ಸಮಸ್ಯೆಗಳಿದ್ದರೆ ಅಥವಾ ಹೃದಯಾಘಾತದಿಂದ ಯಾರಾದರೂ ಮೃತಪಟ್ಟಿದ್ದರೆ ಹೃದಯದ ತಪಾಸಣೆ ಮಾಡಿಸುತ್ತಿರುವುದು ಒಳ್ಳೆಯದು. 


ಇದನ್ನೂ ಓದಿ : ಈ ಪ್ರಯೋಜನಗಳಿಗಾಗಿ ಪತ್ನಿ ಸದಾ ಪತಿಯ ಎಡಭಾಗದಲ್ಲಿಯೇ ಮಲಗಬೇಕಂತೆ !


ACP ಮತ್ತು BCPಯ ನಿರ್ವಹಣೆ : ನೀವು  ಅಧಿಕ ರಕ್ತದೊತ್ತಡ ಅಥವಾ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ನಿಯಮಿತವಾಗಿ  ಚೆಕ್ ಅಪ್ ಮಾಡಿಸುತ್ತಿರಬೇಕು, ವೈದ್ಯರ ಸಲಹೆಯನ್ನು ಅನುಸರಿಸಬೇಕು. 


ರೋಗಲಕ್ಷಣಗಳ ಅರಿವು : ಎದೆ ನೋವು, ಎದೆ ಬಡಿತದಲ್ಲಿ ಏರಿಳಿತ,  ತಲೆ ಸುತ್ತುವುದು ಮೂರ್ಛೆ ಮುಂತಾದ ಎಚ್ಚರಿಕೆಯ ಸೂಚನೆಗಳ ಬಗ್ಗೆ ಗಮನ ವಹಿಸಬೇಕು.  ಯಾವುದೇ ಸೂಚನೆಯನ್ನು ಮಾಮೂಲಿ ವಿಷಯ ಎಂದು ಕಡೆಗಣಿಸುವ ಬದಲು ವೈದ್ಯರ ಸಲಹೆ ಪಡೆದುಕೊಳ್ಳಬೇಕು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.