Infertility: ಇತ್ತೀಚಿಗೆ ಬಂಜೆತನ ಹೆಚ್ಚಾಗುತ್ತಿದೆ. ಬಂಜೆತನ ಹೆಚ್ಚಾಗಲು ಬದಲಾದ ನಮ್ಮ ಜೀವನ ಪದ್ದತಿಯೇ ಕಾರಣ ಎಂದು ಸುಲಭವಾಗಿ ಹೇಳಲಾಗುತ್ತದೆ. ಆದರೆ, ವೈಜ್ಞಾನಿಕವಾಗಿ ಬಂಜೆತನಕ್ಕೆ ಅದೊಂದೇ ಕಾರಣವಾಗಿರುವುದಿಲ್ಲ. ಜೊತೆಗೆ ಬಂಜೆತನ ಎನ್ನುವುದು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ಸಮಸ್ಯೆ ಎನ್ನುವ ಮಾತುಗಳೂ ಇವೆ. ಈ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳು ಇಲ್ಲಿವೆ. 


COMMERCIAL BREAK
SCROLL TO CONTINUE READING

ಇತ್ತೀಚಿನ ಹಲವು ಅಧ್ಯಯನಗಳು ಬಂಜೆತನ ಹೆಚ್ಚಾಗಲು ಬದಲಾದ ನಮ್ಮ ಜೀವನ ಪದ್ದತಿಯೊಂದೇ ಕಾರಣ ಅಲ್ಲ ಎನ್ನುವುದನ್ನು ಬಿಡಿಸಿ ಹೇಳಿವೆ. ಜೊತೆಗೆ ಬದಲಾದ ಆಹಾರ ಕ್ರಮ ಕೂಡ ಬಂಜೆತನ ಹೆಚ್ಚಾಗಲು ಒಂದು ಕಾರಣ ಎಂದಿವೆಯೇ ಹೊರತು ಅದೇ ಪ್ರಮುಖ ಕಾರಣ ಎಂದು ಹೇಳಿಲ್ಲ. ಮೊದಲನೆಯದಾಗಿ ಬಂಜೆತನ ಹೆಚ್ಚಾಗಲು ಏನು ಕಾರಣ ಎನ್ನುವುದನ್ನು ನೋಡೋಣ. 


ಇದನ್ನೂ ಓದಿ- ಔಷಧೀಯ ಅಗತ್ಯವಿಲ್ಲ..! ರಕ್ತಹೀನತೆ ಸಮಸ್ಯೆಗೆ ಈ ಆಹಾರಗಳೇ ರಾಮಬಾಣ: ತಿಂಗಳಲ್ಲಿ ಸಿಗುತ್ತೆ ಬೆಸ್ಟ್ ರಿಸಲ್ಟ್..!


ಬಂಜೆತನ ಹೆಚ್ಚಾಗಲು ಇರುವ ಪ್ರಮುಖ ಕಾರಣಗಳು:-
>> ತಡವಾಗಿ ಮದುವೆ ಆಗುವುದು ಜೊತೆಗೆ ತಡವಾಗಿ ಮಕ್ಕಳ ಪ್ಲಾನ್ ಮಾಡುವುದು. 
>> ಹೆಣ್ಣಿನ ವಯಸ್ಸು ಏರಿಕೆ ಆದಂತೆ ಆಕೆಯ ಅಂಡಾಣು/ಮೊಟ್ಟೆಯ ಸಂಖ್ಯೆ ಗುಣಮಟ್ಟ ಕುಸಿಯುತ್ತಿರುತ್ತದೆ. 
>> ಪುರುಷರು ಮದ್ಯಪಾನ, ಧೂಮಪಾನ ಮಾಡುವುದರಿಂದ ವೀರ್ಯಾಣು ಕೊರತೆ ಉಂಟಾಗುತ್ತದೆ. 
>> ಮದ್ಯಪಾನ, ಧೂಮಪಾನ ಮಾಡುವುದರಿಂದ ವೀರ್ಯಾಣುವಿನ ಗುಣಮಟ್ಟವೂ ಕಡಿಮೆಯಾಗುತ್ತದೆ.
>> ಪೋಷಣೆಯುಕ್ತ ಆಹಾರ ಸೇವಿಸದಿರುವುದೂ ಕೂಡ ಮಕ್ಕಳಾಗದಿರುವುದಕ್ಕೆ ಒಂದು ಕಾರಣವಾಗಿದೆ.
>> ದೈಹಿಕ ವ್ಯಾಯಾಮದ ಕಡೆಗೆ ಗಮನಹರಿಸದಿರುವುದು ಇನ್ನೊಂದು ಪ್ರಮುಖ ಸಮಸ್ಯೆ 
>> ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರಿಗೆ ಬೊಜ್ಜು ಇದ್ದರೂ ಬಂಜೆತನಕ್ಕೆ ಕಾರಣವಾಗಬಹುದು. 
>> ದಾಂಪತ್ಯ ಕಲಹ, ಒತ್ತಡದಿಂದ ಹಾರ್ಮೋನ್ ಗಳಲ್ಲಿ ಬದಲಾವಣೆಯಾಗಿ ವೀರ್ಯಾಣು ಉತ್ಪಾದನೆ ಆಗಲ್ಲ. 


ಇದನ್ನೂ ಓದಿ- ಚಳಿಗಾಲದಲ್ಲಿ ಜಿಡ್ಡುಗಟ್ಟಿರುವ ಕೊಬ್ಬು ಕರಗಿಸಿ ಚಪ್ಪಟೆಯಾದ ಬೆಲ್ಲಿ ಪಡೆಯಲು ಈ ಯೋಗಾಸನಗಳನ್ನು ಟ್ರೈ ಮಾಡಿ...


ಬಂಜೆತನದ ಬಗ್ಗೆ ತಿಳಿದಿರಲೇಬೇಕಾದ ಸಂಗತಿಗಳು:- 
* ಬಂಜೆತನ ಎನ್ನುವುದು ಕೇವಲ ಹೆಣ್ಣಿಗೆ ಸಂಬಂದಿಸಿದ ಸಮಸ್ಯೆಯಲ್ಲ. 
* ಬಂಜೆತನ ಎಂಬುದು ಗಂಡ ಹೆಂಡತಿ ಇಬ್ಬರ ಆರೋಗ್ಯದ ಮೇಲೂ ನಿರ್ಧಾರವಾಗುತ್ತದೆ. 
* ಗರ್ಭ ಕಟ್ಟಲು ಗಂಡ ಹೆಂಡತಿ ಇಬ್ಬರ ಪ್ರಯತ್ನ ಕೂಡ ಮುಖ್ಯವಾದುದು.
* ಗರ್ಭ ಕಟ್ಟಲಿಲ್ಲ ಎಂದರೆ ಗಂಡ ಹೆಂಡತಿ ಇಬ್ಬರೂ ದೈಹಿಕ ತಪಾಸಣೆ ಮಾಡಿಸಬೇಕು. 
* ಹೊರಗಡೆಯ ಆಹಾರ, ಪ್ಯಾಕೆಟ್ ಆಹಾರ ಮತ್ತು ಸಕ್ಕರೆಯ ಸೇವನೆಯನ್ನು ಬಿಡಬೇಕು. 
* ಪ್ರತಿದಿನ 1 ಹಣ್ಣು ಮತ್ತು 2 ರೀತಿಯ ತರಕಾರಿಗಳನ್ನು ಸೇವಿಸಬೇಕು. 
* 30 ನಿಮಿಷ ವ್ಯಾಯಾಮ ಅಥವಾ 1 ಗಂಟೆ ಯೋಗಾಭ್ಯಾಸ ಮಾಡಬೇಕು.
* ಪುರುಷರು ದಿನಕ್ಕೆ 3 ವಾಲ್ನಟ್ ಸೇವಿಸಿದರೆ ವೀರ್ಯಾಣು ವೃದ್ಧಿಗೆ ಸಹಕಾರಿಯಾಗುತ್ತದೆ. 
* ಗಂಡ ಹೆಂಡತಿ ಇಬ್ಬರು ಮಾನಸಿಕ ಒತ್ತಡವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.