Reuse Of Facial Mask Alert! ಐದು ಬಾರಿಗಿಂತ ಹೆಚ್ಚು ಬಾರಿ MASK ಧರಿಸಬೇಡಿ, ಮರುಬಳಕೆಗೆ ಸಂಬಂಧಿಸಿದಂತೆ ತಜ್ಞರ ಎಚ್ಚರಿಕೆ ಇದು
Using N95 Mask: ಕರೋನಾ ವಿರುದ್ಧ ರಕ್ಷಣಾ ಪಡೆಯುವಲ್ಲಿ ಮಾಸ್ಕ್ ಅತಿದೊಡ್ಡ ಅಸ್ತ್ರವಾಗಿದೆ, ಆದರೆ ನೀವು N95 ಮಾಸ್ಕ್ ಅನ್ನು ಎಷ್ಟು ಬಾರಿ ಬಳಸಬಹುದು ಮತ್ತು ನೀವು ಅದನ್ನು ಯಾವಾಗ ಬದಲಾಯಿಸಬೇಕು ಎಂಬುದನ್ನು ನೀವು ತಿಳಿದಿರಬೇಕು.
ನವದೆಹಲಿ: Reuse Of Facial Mask Alert! - ಕರೋನವೈರಸ್‌ನಿಂದ (Coronavirus) ರಕ್ಷಣೆ ಪಡೆಯಲು ಮಾಸ್ಕ್ ಧರಿಸುವುದು ಬಹಳ ಮುಖ್ಯ ಮತ್ತು ತಜ್ಞರು ವಿಶೇಷವಾಗಿ ಎನ್ 95 ಮಾಸ್ಕ್ (N95 Mask) ಧರಿಸಲು ಶಿಫಾರಸ್ಸು ಕೂಡ ಮಾಡುತ್ತಾರೆ. ಮಾಸ್ಕ್ ಕರೋನಾದಿಂದ (Covid-19) ರಕ್ಷಿಸುವ ದೊಡ್ಡ ಅಸ್ತ್ರವಾಗಿದೆ. ಇದೇ ವೇಳೆ ನೀವು N95 ಮಾಸ್ಕ್ (N95 Respiratory Mask) ಅನ್ನು ಎಷ್ಟು ಬಾರಿ ಬಳಸಬಹುದು ಮತ್ತು ನೀವು ಅದನ್ನು ಯಾವಾಗ ಬದಲಾಯಿಸಬೇಕು ಎಂಬುದನ್ನು ಸಹ ನೀವು ತಿಳಿದಿರಬೇಕು. ಮುಖಕ್ಕೆ ಚೆನ್ನಾಗಿ ಹೊಂದಿಕೊಳ್ಳುವ ಮಾಸ್ಕ್ ಅನ್ನು ಧರಿಸಲು CDC ಜನರಿಗೆ ಸಲಹೆ ನೀಡಿದೆ.
ಕೆಲವೊಮ್ಮೆ ಜನರು ಒಂದೇ ಮಾಸ್ಕ್ ಅನ್ನು ಹಲವಾರು ದಿನಗಳವರೆಗೆ ಧರಿಸುತ್ತಾರೆ. ಇನ್ನೂ ಕೆಲವೊಮ್ಮೆ ಕೆಲವರು ಸಡಿಲವಾದ ಅಥವಾ ಯೋಗ್ಯವಲ್ಲದ ಮಾಸ್ಕ್ ಗಳನ್ನು ಧರಿಸುತ್ತಾರೆ. ಇಂತಹ ಮಾಸ್ಕ್ ಗಳು ಕರೋನವೈರಸ್ ಸೋಂಕಿನಿಂದ ರಕ್ಷಣೆ ನೀಡುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ
ಕೊಳೆಯಾಗಿರುವ ಮಾಸ್ಕ್ ಮರುಬಳಕೆ ಮಾಡಬೇಡಿ
ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಸಹಾಯಕ ಪ್ರಾಧ್ಯಾಪಕ ಮೈಕೆಲ್ ಜಿ. ನೈಟ್ ವಾಷಿಂಗ್ಟನ್ ಪೋಸ್ಟ್‌ಗೆ ಈ ಕುರಿತು ಮಾಹಿತಿ ನೀಡಿದ್ದು, ನೀವು ಮಾಸ್ಕ್ ಅನ್ನು 45 ನಿಮಿಷಗಳ ಕಾಲ ಹೊರಗೆ ಹೋಗಿ ಬಂದ ನಂತರ ಅದನ್ನು ತೆಗೆದರೆ, ಅದನ್ನು ಮರುಬಳಕೆ ಮಾಡುವುದರಿಂದ ಯಾವುದೇ ಹಾನಿಯಾಗುವುದಿಲ್ಲ. ಇಡೀ ದಿನ ಒಂದು ಮಾಸ್ಕ್ ಅನ್ನು ಧರಿಸಿ, ನಂತರ ಆ ಮಾಸ್ಕ್ ಅನ್ನು ಮತ್ತೆ ಬಳಸುವುದು ಹಾನಿಕಾರಕವಾಗಿದೆ.
N-95 ಮಾಸ್ಕ್ ಅನ್ನು 5 ಕ್ಕಿಂತ ಹೆಚ್ಚು ಬಾರಿ ಧರಿಸಬೇಡಿ
ಒಂದಕ್ಕಿಂತ ಹೆಚ್ಚು ಮಾಸ್ಕ್ ಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ ಮತ್ತು ಪರ್ಯಾಯವಾಗಿ ಧರಿಸಿ. ಒಂದೇ ಮಾಸ್ಕ್ ಅನ್ನು ಹೆಚ್ಚು ಹೊತ್ತು ಧರಿಸಬೇಡಿ. ದಿನಕ್ಕೆ ಕೆಲವೇ ಗಂಟೆಗಳ ಕಾಲ ಮಾಸ್ಕ್ ಹಾಕಿಕೊಂಡರೆ 4-5 ದಿನಗಳಲ್ಲಿ ಕೊಳೆಯಾಗುತ್ತದೆ. CDC ಪ್ರಕಾರ, N-95 ರೆಸ್ಪಿರೆಟರಿ ಮಾಸ್ಕ್ ಗಳನ್ನು 5 ಕ್ಕಿಂತ ಹೆಚ್ಚು ಬಾರಿ ಬಳಸಬಾರದು.
ಈ ವಿಷಯಗಳನ್ನು ನೆನಪಿನಲ್ಲಿಡಿ
ಮಾಸ್ಕ್ ಅನ್ನು ಬಳಸಿದ ನಂತರ ನಿಮ್ಮ ಕೈಗಳನ್ನು ತೊಳೆಯಿರಿ. ಇಯರ್‌ಲೂಪ್‌ಗಳು ಅಥವಾ ಎಲಾಸ್ಟಿಕ್ ಬ್ಯಾಂಡ್ ಅನ್ನು ಹಿಡಿದಿಟ್ಟುಕೊಳ್ಳುವಾಗ ಮಾಸ್ಕ್ ಅನ್ನು ತೆಗೆದುಹಾಕಿ. ಮಾಸ್ಕ್ ನ ಒಳ ಮತ್ತು ಹೊರ ಭಾಗವನ್ನು ಸ್ಪರ್ಶಿಸುವುದನ್ನು ತಪ್ಪಿಸಿ.
ಇದನ್ನೂ ಓದಿ-New Invention: ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರಿಗೊಂದು ಸಂತಸದ ಸುದ್ದಿ
ಮಾಸ್ಕ್ ವನ್ನು ಯಾವಾಗ ಎಸೆಯಬೇಕು?
ಮೈಕೆಲ್ ಜಿ ನೈಟ್ ಪ್ರಕಾರ, ಮಾಸ್ಕ್ ಅನ್ನು ಅದರ ಸ್ಥಿತಿ ಮತ್ತು ಅದರ ಫಿಟ್ಟಿಂಗ್ ಮೂಲಕ ಪರಿಶೀಲಿಸಬಹುದು. ಮಾಸ್ಕ್ ಎಲ್ಲಿಯಾದರೂ ಡ್ಯಾಮೇಜ್ ಆಗಿದ್ದರೆ, ಅದನ್ನು ಬಳಸಬೇಡಿ. ಕೊಳೆಯಾಗಿರುವ ಮಾಸ್ಕ್ ಬಳಸುವುದು ನಿಮಗೆ ಹಾನಿ ಮಾಡುತ್ತದೆ. ಮಾಸ್ಕ್ ಹಾಕಿಕೊಂಡು ಸೀನುತ್ತಿದ್ದರೆ ಮತ್ತೆ ಅಂತಹ ಮಾಸ್ಕ್ ಹಾಕಬೇಡಿ.
ಇದನ್ನೂ ಓದಿ-Moong Sprouts Benefits : ಖಾಲಿ ಹೊಟ್ಟೆಯಲ್ಲಿ ಸೇವಿಸಿ ಮೊಳಕೆ ಕಾಳು : ಆರೋಗ್ಯಕ್ಕಿದೆ ಈ 5 ಅದ್ಭುತ ಪ್ರಯೋಜನಗಳು
ಮಾಸ್ಕ್ ಧರಿಸಲು ಸರಿಯಾದ ಮಾರ್ಗ
ಮಾಸ್ಕ್ ಅನ್ನು ಯಾವಾಗಲು ಕಾಗದದ ಚೀಲದಲ್ಲಿ ಇರಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ಮಾಸ್ಕ್ ಗಳನ್ನೂ ಇರಿಸಿಕೊಳ್ಳಲು ಇದು ಶುದ್ಧ ಮತ್ತು ಸುರಕ್ಷಿತ ಮಾರ್ಗವಾಗಿದೆ. ಇದು ಮಾಸ್ಕ್ ಗೆ ತೇವಾಂಶವನ್ನು ತರುವುದಿಲ್ಲ ಮತ್ತು ನೀವು ಒಣಗಿದ ಇದರಿಂದ ನೀವು ಒಣಗಿದ ಮಾಸ್ಕ್ ಬಳಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ-Benefits of Tomato in Diabetes: ಮಧುಮೇಹದಲ್ಲಿ ಟೊಮೇಟೊ ತಿನ್ನಬೇಕೇ ಅಥವಾ ಬೇಡವೇ? ತಜ್ಞರ ಉತ್ತರ ತಿಳಿಯಿರಿ
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆಯಲು ಮರೆಯಬೇಡಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.