Diabetes Diet: ಸಕ್ಕರೆ ಕಾಯಿಲೆ ಕಾಯಿಲೆ ನಿಯಂತ್ರಣಕ್ಕೆ ವರದಾನವಿದ್ದಂತೆ ಈ ಧಾನ್ಯದ ರೊಟ್ಟಿ!
Best Food For Diabetics - ಭಾರತದಲ್ಲಿ ಗೋಧಿ ಮತ್ತು ಅಕ್ಕಿಯನ್ನು ಹೆಚ್ಚು ತಿನ್ನಲಾಗುತ್ತದೆ. ಈ ಎರಡೂ ಆಹಾರ ಪದಾರ್ಥಗಳು ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು, ಆಹಾರವು ತ್ವರಿತವಾಗಿ ಜೀರ್ಣವಾಗುತ್ತದೆ ಮತ್ತು ನಂತರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ.
Diabetes Diet: ಕಳಪೆ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಮಧುಮೇಹ ಇಂದಿನ ಕಾಲದಲ್ಲಿ ಒಂದು ಸಾಮಾನ್ಯ ಕಾಯಿಲೆಯಾಗಿ ಮಾರ್ಪಟ್ಟಿದೆ. ಮಧುಮೇಹದಿಂದಾಗಿ, ಇತರ ಅನೇಕ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಮುಖ್ಯವಾಗಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. ಸಾಮಾನ್ಯವಾಗಿ ಮಧುಮೇಹದಲ್ಲಿ ಎರಡು ವಿಧಗಳಿವೆ, ಟೈಪ್ 1 ಮಧುಮೇಹ ಮತ್ತು ಟೈಪ್ ಮಧುಮೇಹ. ಎರಡೂ ರೀತಿಯ ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಮಧುಮೇಹಿಗಳು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಗೋಧಿ ಮತ್ತು ಅಕ್ಕಿಯಂತಹ ಆಹಾರಗಳನ್ನು ತ್ಯಜಿಸುತ್ತಾರೆ. ಮಧುಮೇಹಿಗಳು ತಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಕೊಬ್ಬಿನ ಸೇವನೆಯ ಬಗ್ಗೆ ವಿಶೇಷ ಕಾಳಜಿವಹಿಸಬೇಕು. ಮಧುಮೇಹಿಗಳು ತಮ್ಮ ಆರೋಗ್ಯವನ್ನು ಸುಧಾರಿಸಲು ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಪ್ರೋಟೀನ್ ಅನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀದುತಾರೆ. ಆದರೆ, ಭಾರತದ ಮುಖ್ಯ ಆಹಾರವೆಂದರೆ ಗೋಧಿ ಮತ್ತು ಅಕ್ಕಿ, ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಕಂಡುಬರುತ್ತದೆ, ಇದು ಹೊಟ್ಟೆಯಲ್ಲಿ ಆಹಾರವನ್ನು ತ್ವರಿತವಾಗಿ ಒಡೆಯುತ್ತದೆ ಮತ್ತು ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇಂದು, ಈ ಲೇಖನದ ಮೂಲಕ, ಮಧುಮೇಹ ರೋಗಿಗಳು ಗೋಧಿ ಮತ್ತು ಅಕ್ಕಿಯ ಬದಲು ಸಜ್ಜೆಯನ್ನು ಏಕೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಗೋಧಿ - ಅಕ್ಕಿಯ ಬದಲು ಈ ಆಹಾರ ಆರೋಗ್ಯಕರ
ಗೋಧಿ ಮತ್ತು ಅಕ್ಕಿಯ ಬದಲಿಗೆ, ಮಧುಮೇಹ ರೋಗಿಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಮತ್ತು ಕ್ಯಾಲೊರಿಗಳನ್ನು ಹೊಂದಿರುವ ಇತರ ಧಾನ್ಯಗಳನ್ನು ಸೇವಿಸಬಹುದು. ಇದರೊಂದಿಗೆ ಸಜ್ಜೆ ಮತ್ತು ರಾಗಿ ಹಿಟ್ಟನ್ನು ಕೂಡ ಸೇವಿಸಬಹುದು. ಸಜ್ಜೆ ಮತ್ತು ರಾಗಿ ಹಿಟ್ಟನ್ನು ಪರಾಠ-ರೊಟ್ಟಿ ಮುಂತಾದ ವಿವಿಧ ರೂಪದಲ್ಲಿ ಸೇವಿಸಬಹುದು. ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಮಧುಮೇಹದಿಂದ ಬಳಲುತ್ತಿರುವವರು ತಮ್ಮ ದೈನಂದಿನ ಆಹಾರದಲ್ಲಿ ಸಜ್ಜೆ ಸೇವಿಸಿದರೆ, ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ 12 ರಿಂದ 15% ರಷ್ಟು ಇಳಿಕೆಯಾಗಬಹುದು ಎಂದು ಹೇಳಲಾಗಿದೆ. ಅನೇಕ ಸಂಶೋಧನೆಗಳಲ್ಲಿ, ಸಜ್ಜೆಯ ಗ್ಲೈಸೆಮಿಕ್ ಸೂಚ್ಯಂಕವು 52.7 ಆಗಿದೆ ಎಂದು ಕಂಡುಬಂದಿದೆ, ಇದು ಗಿರಣಿ ಅಕ್ಕಿ ಮತ್ತು ಸಂಸ್ಕರಿಸಿದ ಗೋಧಿಗಿಂತ ಸುಮಾರು ಶೇ. 30 ರಷ್ಟು ಕಡಿಮೆ GI ಆಗಿದೆ.
ಇದನ್ನೂ ಓದಿ-High Cholesterol ನಿಂದ ಮುಕ್ತಿ ಪಡೆಯಬೇಕೆ? ಈ ಸೂಪರ್ ಸೀಡ್ ಮಿಕ್ಸ್ ಒಮ್ಮೆ ಟ್ರೈ ಮಾಡಿ ನೋಡಿ!
ಈ ಪ್ರಯೋಜನಗಳಿವೆ
>> ಸಜ್ಜೆ ಸೇವನೆಯಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಯಾಗುತ್ತದೆ.
>> ಮಧುಮೇಹದಿಂದ ಸಾಮಾನ್ಯವಾಗಿ ಹೃದ್ರೋಗ ಬರುವ ಅಪಾಯವಿರುತ್ತದೆ. ಸಜ್ಜೆ ಸೇವನೆಯು ಅನೇಕ ಹೃದಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
>> ಸಜ್ಜೆಯಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್ ಕಂಡುಬರುತ್ತದೆ, ಇದು ಹೊಟ್ಟೆಯಲ್ಲಿ ಆಹಾರವನ್ನು ನಿಧಾನವಾಗಿ ಜೀರ್ಣಿಸುತ್ತದೆ, ಹೀಗಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಇದನ್ನೂ ಓದಿ-ಹಲವು ಚರ್ಮ ಸಮಸ್ಯೆಗಳಿಗೆ ರಾಮಬಾಣ ಉಪಾಯ ಈ ಗಿಡದ ಎಳೆಗಳ ನೀರು, ಇಂದೇ ಟ್ರೈ ಮಾಡಿ ನೋಡಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.