ಹೈದ್ರಾಬಾದ್: Sputnik-5 - ರಷ್ಯಾದ ಕೊರೊನಾ ವೈರಸ್ ಲಸಿಕೆಯಾಗಿರುವ 'Sputnik 5'ಲಸಿಕೆಗೆ ಮುಂದಿನ ಕೆಲ ವಾರಗಳಲ್ಲಿ ಭಾರತೀಯ ಔಷಧಿ ನಿಯಂತ್ರಕದ ಅನುಮತಿ ಸಿಗಲಿದೆ ಎಂದು ಹೈದ್ರಾಬಾದ್ ಮೂಲದ ಫಾರ್ಮಾ ಕಂಪನಿಯಾಗಿರುವ ಡಾ. ರೆಡ್ಡಿಸ್ ಲ್ಯಾಬ್ ಭರವಸೆ ವ್ಯಕ್ತಪಡಿಸಿದೆ. ಕಂಪನಿಯ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-Coronavirus: ರಾಷ್ಟ್ರ ರಾಜಧಾನಿಯಲ್ಲಿ ಈ 5 ಸ್ಥಳಗಳಲ್ಲಿ ಕರೋನಾ ವೇಗವಾಗಿ ಹೆಚ್ಚುತ್ತಿದೆಯಂತೆ


ಈ ಕುರಿತು ಮಾಹಿತಿ ನೀಡಿರುವ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, API ಹಾಗೂ ಸರ್ವಿಸೆಸ್  ದೀಪಕ್ ಸಾಪರಾ, "ನಮಗೆ ಮುಂದಿನ ಕೆಲ ವಾರಗಳಲ್ಲಿ ಅನುಮತಿ ಸಿಗುವ ಭರವಸೆ ಇದೆ ಮತ್ತು ಇದು ಎರಡು ಪ್ರಮಾಣಗಳ ಲಸಿಕೆಯಾಗಿದೆ" ಎಂದಿದ್ದಾರೆ. ಮೊದಲ ಲಸಿಕೆಯ ಪ್ರಮಾಣ ಪಡೆ 21 ದಿನಗಳ ಬಳಿಕ ನೀವು ಲಸಿಕೆಯ ಎರಡನೇ ಪ್ರಮಾಣ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಈ ಲಸಿಕೆ ಪಡೆದ 28ನೆ ದಿನಕ್ಕೆ ಮತ್ತು 42ನೆ ದಿನಕ್ಕೆ ರೋಗ ಪ್ರತಿರೋಧಕ ಶಕ್ತಿ ವಿಕಸಿತಗೊಳ್ಳುತ್ತದೆ. ಹೀಗಾಗಿ ಇದು ಒಟ್ಟು ಎರಡು ಪ್ರಮಾಣಗಳ ಲಸಿಕೆಯಾಗಿದ್ದು, ಮುಂದಿನ ಕೆಲ ವಾರಗಲ್ಲಿ ಇದಕ್ಕೆ ಅನುಮತಿ ಸಿಗುವ ಸಾದ್ಯತೆ ಇದೆ.


ಇದನ್ನೂ ಓದಿ-Coronavirus: ಈ ರಾಜ್ಯದ 7 ನಗರಗಳಲ್ಲಿ ಪ್ರತಿ ಭಾನುವಾರ ಲಾಕ್‌ಡೌನ್


ಭಾನುವಾರ ಸಂಜೆ ಆಯೋಜಿಸಲಾಗುವ ವೆಬಿನಾರ್ ನಲ್ಲಿ ಮಾತನಾಡುತ್ತಾ ಸಾಪರಾ ಅವರು ತಮ್ಮ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ Sputnik 5 ಲಸಿಕೆಯ ಲಭ್ಯತೆ ಕುರಿತು ಪ್ರಶ್ನಿಸಲಾಗಿ, ಡಾ.ರೆಡ್ಡಿಸ್ ಲ್ಯಾಬ್ Sputnik 5 ಲಸಿಕೆಯನ್ನು ಭಾರತಕ್ಕೆ ತರಲು 'ರಷ್ಯಾ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್' ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ-Corona: ಎಲ್ಲೆಡೆ ಕರೋನಾ ಹೆಚ್ಚಾಗುತ್ತಿದ್ದರೂ ಈ ಸುಂದರ ಸ್ಥಳದಲ್ಲಿ ಮಾತ್ರ ಶೂನ್ಯ ಪ್ರಕರಣ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.