saffron benefits: ಕೇಸರಿಯು ಪ್ರಕೃತಿಯಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಪದಾರ್ಥವಾಗಿದೆ. ಹೆಚ್ಚಿನ ಬೆಲೆಯಿಂದಾಗಿ ಅನೇಕ ಜನರು ಅದನ್ನು ಖರೀದಿಸಲು ಹಿಂಜರಿಯುತ್ತಾರೆ. ಆದರೆ ಇದು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇರಾನ್ ಪ್ರಪಂಚದಲ್ಲೇ ಅತಿ ಹೆಚ್ಚು ಕೇಸರಿ ಉತ್ಪಾದಿಸುವ ದೇಶವಾಗಿದೆ. ಇರಾನ್ ನಂತರ ಅಫ್ಘಾನಿಸ್ತಾನ ಮತ್ತು ಕಾಶ್ಮೀರವಿದೆ. ಇನ್ನು ಈ ವರದಿಯಲ್ಲಿ ಕೇಸರಿಯ ಪ್ರಯೋಜನಗಳನ್ನು ತಿಳಿಯೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ, ರೈತರು ಖುಷ್!


ಕೇಸರಿಯಲ್ಲಿರುವ ಸಿರೊಟೋನಿನ್ ನರಪ್ರೇಕ್ಷಕಗಳ ಮೇಲಿರುವ ಒತ್ತಡವನ್ನು ನಿಯಂತ್ರಿಸುತ್ತದೆ. ಪರಿಣಾಮವಾಗಿ, ಮನಸ್ಥಿತಿ ಸುಧಾರಿಸುತ್ತದೆ.


ಮಧುಮೇಹಕ್ಕೆ ಕೂಡ ಕೇಸರಿ ಹೇಳಿಮಾಡಿಸಿದ ಮದ್ದು ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗದಂತೆ ಇದು ಕಾಪಾಡುತ್ತದೆ. ಜೊತೆಗೆ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ


ಕೇಸರಿಯು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಹೀಗಾಗಿ ಇದರ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವಿಶೇಷವಾಗಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ.


ನೆನಪಿನ ಶಕ್ತಿ ಹೆಚ್ಚಿಸಲು ಕೇಸರಿ ಮಿಶ್ರಣ ಮಾಡಿರುವ ಹಾಲನ್ನು ಕುಡಿಯಬೇಕು. ಸಣ್ಣಪುಟ್ಟ ವಿಷಯಗಳನ್ನು ಹೆಚ್ಚಾಗಿ ಮರೆಯುವ ಜನರಿಗೆ ಕೇಸರಿ ತುಂಬಾ ಉಪಯುಕ್ತವಾಗಿದೆ.


ಕೇಸರಿಯಲ್ಲಿ ಆಂಟಿಆಕ್ಸಿಡೆಂಟ್ ಅಧಿಕವಾಗಿದೆ. ಇದು ಕಣ್ಣಿನ ರೆಟಿನಾವನ್ನು ರಕ್ಷಿಸುತ್ತದೆ. ಹೀಗಾಗಿ ಕಣ್ಣಿನ ಆರೋಗ್ಯವನ್ನು ಸುಧಾರಿಸುವಲ್ಲಿ ಇದು ಮುಖ್ಯವಾಗಿದೆ. ಕಣ್ಣಿನ ಪೊರೆ ಸಮಸ್ಯೆಗೆ ಇದು ಶಾಶ್ವತ ಪರಿಹಾರವನ್ನು ನೀಡುತ್ತದೆ.


ಇದನ್ನೂ ಓದಿ: ಈ ದಿನಾಂಕಗಳಲ್ಲಿ ಹುಟ್ಟಿದ ಹುಡುಗರಿಗೆ ಗಯ್ಯಾಳಿಯಂತಹ ಹೆಂಡತಿ ಸಿಗ್ತಾಳೆ.. ಬದುಕನ್ನೇ ಸರ್ವನಾಶ ಮಾಡ್ತಾಳೆ.. ನಿಮ್ಮ ಜನ್ಮದಿನಾಂಕವೂ ಇದೆಯೇ ಎಂದು ನೋಡಿ!!


 ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ