Cholesterol Control Tips: ಕೆಟ್ಟ ಆಹಾರ ಪದ್ಧತಿಯಿಂದಾಗಿ ನಮ್ಮ ಯಕ್ರತ್ತು ಒಳ್ಳೆಯ ಕೊಲೆಸ್ಟ್ರಾಲ್ ಬದಲಿಗೆ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಾಗಿ ಉತ್ಪತ್ತಿಸಲು ಪ್ರಾರಂಭಿಸುತ್ತದೆ. ಎಣ್ಣೆಯುಕ್ತ ವಸ್ತುಗಳು ಮತ್ತು ಹೆಚ್ಚು ಮಾಂಸ ಅಥವಾ ಸಂಸ್ಕರಿಸಿದ ಆಹಾರವನ್ನು ಸೇವಿಸುವುದರಿಂದ, ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ರಕ್ತನಾಳಗಳಲ್ಲಿ ಈ ಪ್ಲೇಕ್ ಸಂಗ್ರಹವಾಗುವುದರಿಂದ, ರಕ್ತನಾಳಗಳು ಕಠಿಣ ಮತ್ತು ಕಿರಿದಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ರಕ್ತ ಪರಿಚಲನೆಯು ತೊಂದರೆಗೊಳಗಾಗಲು ಪ್ರಾರಂಭಿಸುತ್ತದೆ. 


COMMERCIAL BREAK
SCROLL TO CONTINUE READING

ರಕ್ತನಾಳಗಳಲ್ಲಿ ಕೊಬ್ಬಿನ ಶೇಖರಣೆ ಹೆಚ್ಚಾಗುತ್ತಿದ್ದರೆ, ಅದರಿಂದ ಪರಿಹಾರ ಪಡೆಯುವ ಉಪಾಯವೊಂದನ್ನು ಇಂದು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ, ಇದು ರಕ್ತನಾಳಗಳಿಂದ  ಕೊಬ್ಬನ್ನು ಸುಲಭವಾಗಿ ತೆಗೆದುಹಾಕುತ್ತದೆ ಮತ್ತು ರಕ್ತನಾಳಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ಮೂಲಕ ರಕ್ತ ಪರಿಚಲನೆ ಸುಧಾರಿಸುತ್ತದೆ. ನಿಮ್ಮ ಅಡುಗೆಮನೆಯಲ್ಲಿರುವ ಕೆಲವು ಡ್ರೈಫ್ರೂಟ್ ಗಳು ಮತ್ತು ಮಸಾಲೆ ಪದಾರ್ಥಗಳು ನಿಮ್ಮ ದೇಹದಲ್ಲಿನ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಈ ಪದಾರ್ಥಗಳನ್ನು ನೆನೆಹಾಕಿ ಹಸಿಯಾಗಿ ಸೇವಿಸಬೇಕು ಮತ್ತು ಅವುಗಳ ನೀರನ್ನು ಕುಡಿಯಬೇಕು.


ಈ ಐದು ಅದಾರ್ಥಗಳನ್ನು ಒಟ್ಟಿಗೆ ನೆನೆಹಾಕಿ
ಒಂದು ಚಮಚ ಮೆಂತ್ಯ, ಒಂದು ಚಮಚ ಸೂರ್ಯಕಾಂತಿ ಮತ್ತು ಲಿನ್ಸೆಡ್ ಬೀಜಗಳು, ಎರಡು ಬಾದಾಮಿ, ನಾಲ್ಕು ಒಣದ್ರಾಕ್ಷಿ ಮತ್ತು ಹತ್ತು ಚಮಚ ಓಟ್ಸ್. ಈ ಎಲ್ಲಾ ಪದಾರ್ಥಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮತ್ತು ಮಾರನೆ ದಿನ ಬೆಳಗ್ಗೆ ಹಳಸಿದ ಬಾಯಿಯಿಂದ ಅದರ ನೀರನ್ನು ಕುಡಿದ ನಂತರ ಅವುಗಳನ್ನು ಜಗಿದು ತಿನ್ನಿರಿ. ಇದರಿಂದ ಶೀಘ್ರದಲ್ಲಿಯೇ ನಿಮ್ಮ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಬ್ಬು ವೇಗವಾಗಿ ಕರಗಲು ಪ್ರಾರಂಭಿಸುತ್ತದೆ. ಆದರೆ, ಈ ಕೆಲಸವನ್ನು ನೀವು ಹಳಸಿದ ಬಾಯಿಯಿಂದ ಮಾಡುತ್ತಿರುವಿರಿ ಎಂಬುದನ್ನು ನೆನೆಪಿನಲ್ಲಿಡಿ. ಇದು ಒಂದು ರೀತಿಯಲ್ಲಿ ತಿಂಡಿಯಾಗಿಯೂ ಕೆಲಸ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಸಹ ಕಡಿಮೆ ಮಾಡುತ್ತದೆ.


ಈ ಪದಾರ್ಥಗಳಲ್ಲಿನ ಪೋಷಕಾಂಶಗಳು ಹಾಗೂ ಪ್ರಯೋಜನಗಳು
ಮೆಂತ್ಯ

ಮೆಂತ್ಯ ಬೀಜಗಳು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಅನ್ನು ಕಡಿಮೆ ಮಾಡುತ್ತದೆ. ಇದರಲ್ಲಿನ ತಾಮ್ರ, ಪೊಟ್ಯಾಸಿಯಮ್, ಕಬ್ಬಿಣ, ಕ್ಯಾಲ್ಸಿಯಂ, ಫೋಲಿಕ್ ಆಮ್ಲ, ರೈಬೋಫ್ಲಾವಿನ್, ಡಯೆಟರಿ ಫೈಬರ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಬಿ 6, ಅಧಿಕ ರಕ್ತದೊತ್ತಡವನ್ನು, ಅಧಿಕ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಮಾಸ್ತವದಲ್ಲಿ, ಮೆಂತ್ಯ ಯಕೃತ್ತಿನಲ್ಲಿ ಇರುವ LDL ಗ್ರಾಹಕಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ. ಇದೊಂದು ರೀತಿಯ ಪ್ರೋಟೀನ್ ಆಗಿದ್ದು, ಇದು ಕೊಲೆಸ್ಟ್ರಾಲ್ ಅನ್ನು ಜೀವಕೋಶಗಳಿಗೆ ಪ್ರವೇಶಿಸಲು ಅನುಮತಿ ನೀಡುತ್ತವೆ. LDL ರಿಸೆಪ್ಟರ್ಸ್ ಹೆಚ್ಚಳವು ಜೀವಕೋಶಗಳಿಗೆ LDL ಅನ್ನು ರಕ್ತಪ್ರವಾಹದಿಂದ ತೆಗೆದುಹಾಕಲು ಸಹಾಯ ಮಾಡುತ್ತದೆ.


ಒಣದ್ರಾಕ್ಷಿ
ಇದು ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ವಿಟಮಿನ್ ಬಿ6, ವಿಟಮಿನ್ ಕೆ, ಕಬ್ಬಿಣ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಸೆಲೆನಿಯಮ್‌ನಂತಹ ಖನಿಜಗಳನ್ನು ಒಳಗೊಂಡಿರುವುದರಿಂದ ಅವು ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ನಿಯಂತ್ರಿಸುತ್ತದೆ. ನೈಸರ್ಗಿಕ ಸಕ್ಕರೆ ಮತ್ತು ಫೈಬರ್ ಇದರಲ್ಲಿ ಕಂಡುಬರುತ್ತದೆ, ಇದು ಹೊಟ್ಟೆಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದರೊಂದಿಗೆ ಪಾಲಿಫಿನಾಲ್ಗಳು, ಫೈಟೊ ಕೆಮಿಕಲ್ಸ್, ಫ್ಲೇವನಾಯ್ಡ್ಗಳು ಸಹ ಇದರಲ್ಲಿ ಕಂಡುಬರುತ್ತವೆ, ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡಲು ಕೆಲಸ ಮಾಡುತ್ತದೆ.


ಓಟ್ಸ್
ಓಟ್ಸ್ ಫೈಬರ್ ನಿಂದ ಸಮೃದ್ಧವಾಗಿದೆ ಮತ್ತು ಬೀಟಾ-ಗ್ಲುಕನ್ ಅನ್ನು ಹೊಂದಿರುತ್ತದೆ, ಇದು ಕರುಳನ್ನು ಶುದ್ಧೀಕರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಓಟ್ಸ್ ಅನ್ನು ನಿಯಮಿತವಾಗಿ ತಿನ್ನುವುದರಿಂದ, ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಸುಮಾರು 6 ಪ್ರತಿಶತದಷ್ಟು ಕಡಿಮೆ ಮಾಡಬಹುದು.
 
ಬಾದಾಮಿ
ಬಾದಾಮಿಯಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳಿವೆ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ-


ಅಗಸೆಬೀಜ ಮತ್ತು ಸೂರ್ಯಕಾಂತಿ ಬೀಜಗಳು
ಎರಡೂ ಬೀಜಗಳಲ್ಲಿರುವ ಕರಗುವ ನಾರಿನಂಶವು ದೇಹದಲ್ಲಿನ ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀರಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ಇದರ ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ ಮತ್ತು ಬಹು ಅಪರ್ಯಾಪ್ತ ಕೊಬ್ಬಿನಾಮ್ಲ ಗುಣಗಳು ಹೆಚ್ಚಾಗುತ್ತವೆ. ಈ ಬೀಜಗಳಲ್ಲಿ ಇರುವ ಒಮೆಗಾ-3 ಕೊಬ್ಬಿನಾಮ್ಲಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ-

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.