ರಕ್ತದ ಪ್ಲಾಸ್ಮಾದಲ್ಲಿನ Coronaavirus ಅನ್ನು ಅಂತ್ಯಗೊಳಿಸಲಿವೆ ಈ ಕಿರಣಗಳು, ವಿಜ್ಞಾನಿಗಳಿಗೆ ಸಿಕ್ಕ ಹೊಸ ಯಶಸ್ಸು
ಕೊರೊನಾ ವೈರಸ್ ಚಿಕಿತ್ಸೆಗೆ ಸಂಬಂಧಿಸಿದಂತೆ ಸಮಾಧಾನಕರ ಸುದ್ದಿಯೊಂದು ಪ್ರಕಟವಾಗಿದೆ
ಹ್ಯೂಟನ್: ಕೊರೊನಾ ವೈರಸ್ ಚಿಕಿತ್ಸೆಗೆ ಸಂಬಂಧಿಸಿದಂತೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಈ ಕುರಿತು ಸಂಶೋಧನೆಯೊಂದನ್ನು ಕೈಗೊಂಡಿರುವ ವಿಜ್ಞಾನಿಗಳು ಕೊರೊನಾ ವೈರಸ್ ಅನ್ನು ವಿಟಮಿನ್ ರೈಬೋಪ್ಲಾವಿನ್ ಹಾಗೂ ನೇರಳಾತೀತ ಕಿರಣಗಳ ಸಂಪರ್ಕಕ್ಕೆ ತಂದಾಗ ಇದು ಮಾನವನ ಪ್ಲಾಸ್ಮಾ ಹಾಗೂ ರಕ್ತ ಉತ್ಪನ್ನ(ಮಾನವನ ರಕ್ತದಿಂದ ತಯಾರಾದ ಚಿಕಿತ್ಸಾತ್ಮಕ ಪದಾರ್ಥ, ಕೆಂಪು ರಕ್ತ ಕಣಗಳು, ಪ್ಲೆಟ್ಲೆಟ್ ಗಳು, ಪ್ಲಾಸ್ಮಾ ಇತ್ಯಾದಿ)ಗಳಲ್ಲಿನ ವೈರಸ್ ನ ಪ್ರಭಾವವನ್ನು ಕಡಿಮೆ ಮಾಡುತ್ತದೆ. ರಕ್ತ ವರ್ಗಾವಣೆಯ ಸಂದರ್ಭದಲ್ಲಿ ವೈರಸ್ ಹರಡುವ ಸಾಧ್ಯತೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.ಮಾಡಲು ಇದು ಸಹಾಯ ಮಾಡುತ್ತದೆ.
ಆದರೆ ಈ ಕುರಿತು ಹೇಳಿರುವ ಅಮೆರಿಕಾದ ಕೊಲೋರಾಡೋ ವಿಶ್ವ ವಿದ್ಯಾಲಯದ ವಿಜ್ಞಾನಿಗಳು, ಕೊವಿಡ್ 19 ಮಹಾಮಾರಿ ಪಸರಿಸುವ ಕೊರೊನಾ ವೈರಸ್ ಅಥವಾ ಸಾರ್ಸ್-CoV-2 ರಕ್ತ ವರ್ಗಾವಣೆಯ ಮೂಲಕ ಹರಡುತ್ತದೆಯೋ ಅಥವಾ ಇಲ್ಲವೋ ಎಂಬುದು ಇದುವರೆಗೆ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಅಧ್ಯಯನದಲ್ಲಿ, ವಿಜ್ಞಾನಿಗಳು ಒಂಬತ್ತು ಪ್ಲಾಸ್ಮಾ ಮತ್ತು ಮೂರು ರಕ್ತ ಉತ್ಪನ್ನಗಳ ಚಿಕಿತ್ಸೆಗಾಗಿ ಮಿರಾಸೋಲ್ ಪೈಥೋಜನ್ ಡಿಡಕ್ಷನ್ ತಂತ್ರಜ್ಞಾನ ವ್ಯವಸ್ಥೆ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕುರಿತಂತೆ ಹೇಳಿದೆ ನೀಡಿರುವ ಅಧ್ಯಯನದ ಸಹ ಲೇಖಕ ಇಜಾಬೆಲ್ಲಾ ರಾಗನ್, "ನಾವು ವೈರಸ್ ಪ್ರಮಾಣವನ್ನು ಕಡಿಮೆ ಮಾಡಿದ್ದೇವೆ ಮತ್ತು ಚಿಕಿತ್ಸೆಯ ನಂತರ ನಮಗೆ ವೈರಸ್ ಕಂಡುಬಂದಿಲ್ಲ" ಎಂದು ಹೇಳಿದ್ದಾರೆ.
ಸಿಎಸ್‌ಯು ಸಂಸ್ಥೆಯ ಅಧ್ಯಯನದ ಹಿರಿಯ ಲೇಖಕ ರೇ ಗುಡ್ರಿಚ್ ಕಂಡುಹಿಡಿದ ಈ ಸಾಧನವು ರಕ್ತ ಉತ್ಪನ್ನ ಅಥವಾ ಪ್ಲಾಸ್ಮಾವನ್ನು ನೇರಳಾತೀತ ಕಿರಣಗಳಿಗೆ ಒಡ್ಡುವ ಮೂಲಕ ಕಾರ್ಯನಿರ್ವಹಿಸುತ್ತದೆ. 1980ರ ದಶಕದಲ್ಲಿ ರಕ್ತ ಮತ್ತು ರಕ್ತ ಉತ್ಪನ್ನಗಳ ಮೂಲಕ ಎಚ್‌ಐವಿ ಹರಡಿದಾಗ ಈ ಸಾಧನವು ಪರಿಣಾಮಕಾರಿ ಸಾಬಿತಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ಆದರೂ, ಪ್ರಸ್ತುತ ಮಿರಾಸೊಲ್ ಬಳಕೆಯನ್ನು ಯುಎಸ್ ಹೊರಗೆ ಮಾತ್ರ ಅನುಮತಿಸಲಾಗಿದೆ, ವಿಶೇಷವಾಗಿ ಯುರೋಪ್, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದಲ್ಲಿ. ಈ ಅಧ್ಯಯನವನ್ನು PLOS One ಪತ್ರಿಕೆಯಲ್ಲಿ ಪ್ರಕಟವಾಗಿದೆ.