Corona XE Second Case - ಕರೋನಾದ ಹೊಸ ಉಪ-ವೇರಿಯಂಟ್ XE ಗುಜರಾತ್‌ ಬಳಿಕ ಮಹಾರಾಷ್ಟ್ರದಲ್ಲಿ ಕದತಟ್ಟಿದೆ. ಓಮಿಕ್ರಾನ್‌ನ ಈ ಅಪಾಯಕಾರಿ ರೂಪಾಂತರದ ಎರಡನೇ ಪ್ರಕರಣವು ಮುಂಬೈನಲ್ಲಿ ಪತ್ತೆಯಾಗಿದೆ. ಇದರೊಂದಿಗೆ, ದೇಶದಲ್ಲಿ XE ರೂಪಾಂತರದ ಒಟ್ಟು ಮೂರು ಪ್ರಕರಣಗಳು ಕಂಡುಬಂದಿವೆ. ಕೇಂದ್ರ ಆರೋಗ್ಯ ಸಚಿವಾಲಯವು ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಂದಲಮಯ ಆತಂಕ ಹೊಂದಿದ್ದರೂ ಕೂಡ ಶನಿವಾರ, ಮುಂಬೈ ನಗರದ BMC ಮುಂಬೈನಲ್ಲಿ ಈ ಹೊಸ ರೂಪಾಂತರದ ಪ್ರಕರಣವನ್ನು ದೃಢಪಡಿಸಿದೆ.

COMMERCIAL BREAK
SCROLL TO CONTINUE READING

ಆಂಗ್ಲ ಮಾಧ್ಯಮದ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಬಿಎಂಸಿ ಶನಿವಾರದಂದು ಕೊರೊನಾವೈರಸ್‌ನ ಹೊಸ ಉಪ-ವೇರಿಯಂಟ್ XE ಯ ಖಚಿತ ಪ್ರಕರಣವನ್ನು ಒಪ್ಪಿಕೊಂಡಿದೆ ಎಂದು ದೃಢಪಡಿಸಿದೆ. ದೊರೆತ ಮಾಹಿತಿಯ ಪ್ರಕಾರ, ಸಾಂತಾಕ್ರೂಸ್ ನಲ್ಲಿ ವಾಸಿಸುವ 67 ವರ್ಷದ ವ್ಯಕ್ತಿಯಲ್ಲಿ ಈ ರೂಪಾಂತರವನ್ನು ದೃಢಪಡಿಸಲಾಗಿದೆ. ಈ ವ್ಯಕ್ತಿ ಕರೋನಾ ವಿರೋಧಿ ಎರಡೂ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಕರೋನಾದ ಈ ಹೊಸ ಉಪ-ವೇರಿಯಂಟ್ ಓಮಿಕ್ರಾನ್‌ನ ರೂಪಾಂತರಿ ಎಂದು ವಿವರಿಸಿದೆ, ಇದು ಅದಕ್ಕಿಂತ 10 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಅದು ಹೇಳಿದೆ.


ಇದನ್ನೂ ಓದಿ-China: ಚೀನಾದಲ್ಲಿ ಮತ್ತೆ ಕೊರೊನಾ ಅಬ್ಬರ: ಶಾಂಘೈನಲ್ಲಿ ಅಂಗಡಿಗಳು ಬಂದ್‌

ಮಾರ್ಚ್ 11 ರಂದು ವ್ಯಕ್ತಿ ವಡೋದರಾಗೆ ತೆರಳಿದ್ದರು
BMC ಪ್ರಕಾರ, ವ್ಯಕ್ತಿ ಮಾರ್ಚ್ 11 ರಂದು ವಡೋದರಾಗೆ ತೆರಳಿದ್ದರು ಮತ್ತು ಹೋಟೆಲ್ನಲ್ಲಿ ಸಭೆಯ ಬಳಿಕ ಅವರ ಆರೋಗ್ಯ ಹದಗೆಟ್ಟಿತ್ತು. ನಂತರ ಅವರಿಗೆ ಕರೋನಾ ಪರೀಕ್ಷೆ ನಡೆಸಲಾಗಿದ್ದು, ವರದಿ ಪಾಸಿಟಿವ್ ಎಂದು ತಿಳಿದುಬಂದಿದೆ. ಆದರೆ, ಕೊರೊನಾ ಲಕ್ಷಣಗಳು ಕಾಣಿಸದೇ ಇದ್ದಾಗ ಮತ್ತೆ ಅವರು ಮುಂಬೈಗೆ ತೆರಳಿದ್ದರು. ಈಗ ಅವರ ಕರೋನಾ ಪರೀಕ್ಷೆಯ ಮಾದರಿಯನ್ನು ಪ್ರದರ್ಶಿಸಿದಾಗ, ವರದಿಯಲ್ಲಿ XE ರೂಪಾಂತರಿ ಇರುವುದನ್ನು ದೃಢಪಡಿಸಲಾಗಿದೆ.


ಇದನ್ನೂ ಓದಿ-ಮತ್ತೆ ಕರೋನಾ ಹಾಹಾಕಾರ.! ಹೊಸ ವೆರಿಯೇಂಟ್ ಪತ್ತೆ, ಹೆತ್ತವರಿಂದ ಪ್ರತ್ಯೇಕಿಸಲಾಗುತ್ತಿದೆ ಮಕ್ಕಳನ್ನು

ಈ ವ್ಯಕ್ತಿಯು ಕರೋನಾ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾನೆ ಮತ್ತು ಸಂಪೂರ್ಣವಾಗಿ ಆರೋಗ್ಯವಾಗಿದ್ದಾನೆ ಎಂದು BMC ಹೇಳಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ