Health tips : ಕಾಡು ಹುಣಸೆ, ಸೀಮೆ ಹುಣಸೆ, ಸಿಹಿ ಹುಣಸೆ ಹೀಗೆ ವಿಭಿನ್ನ ಹೆಸರುಗಳಿಂದ ಕರೆಯಲ್ಪಡುವ ಈ ಹಣ್ಣು ನೋಡೋಕೆ ಎಷ್ಟು ಸುಂದರವಾಗಿದೆಯೋ ಅಷ್ಟೇ ಆರೋಗ್ಯಕ್ಕೆ ಉತ್ತಮವೂ ಕೂಡ ಹೌದು. ಹೆಚ್ಚಾಗಿ ಕಾಡಿನಲ್ಲಿ ಬೆಳೆಯುವ ಈ ಹಣ್ಣಿನ ಮಹತ್ವದ ಕುರಿತು ಜನರಿಗೆ ತಿಳಿದಿಲ್ಲ. ಭಾರತದಾದ್ಯಂತ ಕಂಡುಬರುವ ಈ ಹಣ್ಣನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಹೆಸರು ವಿಭಿನ್ನವಾಗಿರಬಹುದು ಆದರೆ ಇದನ್ನು ತಿನ್ನುವುದರಿಂದ ಆರೋಗ್ಯ ಮತ್ತು ಅನೇಕ ಪ್ರಯೋಜನಗಳು ಹಲವು.


COMMERCIAL BREAK
SCROLL TO CONTINUE READING

ಆರೋಗ್ಯ ತಜ್ಞರ ಪ್ರಕಾರ, ಸೀಮೆ ಹುಣಸೆ ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತವೆ ಎಂದು ಹೇಳಲಾಗುತ್ತದೆ. ಈ ಹಣ್ಣು ವಿಟಮಿನ್ ಸಿ, ಪ್ರೋಟೀನ್, ಕಾರ್ಬೋಹೈಡ್ರೇಟ್, ಪೊಟ್ಯಾಸಿಯಮ್, ಥಯಾಮಿನ್ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. 


ಇದನ್ನೂ ಓದಿ: ಮಧುಮೇಹ ರೋಗಿಗಳಿಗೆ ವರದಾನಕ್ಕೆ ಸಮಾನ ಕೆಂಪು ಪಾಲಕ್, ಕೆಲವೇ ನಿಮಿಷಗಳಲ್ಲಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಬರುತ್ತೆ!


ಗೋರಸ್ ಹುಣಸೆ ಹಣ್ಣಿನ ಪ್ರಯೋಜನಗಳು


  • ಸೀಮೆ ಹುಣಸೆಯಲ್ಲಿ ಪೋಷಕಾಂಶಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ, ಆದ್ದರಿಂದ ಇದರ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

  • ಸೀಮೆ ಹುಣಸೆ ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಈ ಹಣ್ಣನ್ನು ನೇರವಾಗಿ ತಿನ್ನಬಹುದು ಅಲ್ಲದೆ, ಅದರ ರಸವನ್ನು ಸಹ ತಯಾರಿಸಬಹುದು. ಇದರ ಎಲೆಯ ಸಾರವು ಮಧುಮೇಹಕ್ಕೆ ಉತ್ತಮ ಎಂದು ಹೇಳಲಾಗುತ್ತದೆ.

  • ಯಾವುದೇ ರೀತಿಯ ಹೊಟ್ಟೆಯ ಸಮಸ್ಯೆಯಿದ್ದರೆ ಸೀಮೆ ಹುಣಸೆ ತಿಂದರೆ ಗುಣವಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ರಕ್ಷಿಸುತ್ತದೆ.

  • ಸೀಮೆ ಹುಣಸೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು. ಇದರಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಈ ಹಣ್ಣು ಹೃದ್ರೋಗಿಗಳಿಗೆ ಉತ್ತಮ

  • ರಕ್ತದ ಕೊರತೆ ಇರುವವರು ಈ ಸೀಮೆ ಹುಣಸೆ ಹಣ್ಣನ್ನು ತಿನ್ನಬೇಕು. ಇದರಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದರಿಂದ ರಕ್ತಹೀನತೆಯ ಸಮಸ್ಯೆ ನಿವಾರಣೆಯಾಗುತ್ತದೆ.


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.