Shatavari health benefits : ಮದುವೆಯ ನಂತರ, ಪ್ರತಿಯೊಬ್ಬ ಪುರುಷ ಮತ್ತು ಮಹಿಳೆ ತಮ್ಮ ನಡುವೆ ಉತ್ತಮ ದೈಹಿಕ ಸಂಬಂಧವನ್ನು ಹೊಂದಲು ಬಯಸುತ್ತಾರೆ. ಇದು ಸಂತೋಷದ ವೈವಾಹಿಕ ಜೀವನದ ಒಂದು ಅಂಶ. ಪತಿ-ಪತ್ನಿಯರ ಬಾಂಧವ್ಯ ತೃಪ್ತಿಕರವಾಗಿದ್ದರೆ ದಾಂಪತ್ಯ ಜೀವನದಲ್ಲಿ ನೆಮ್ಮದಿ ಕಡಿಮೆಯಾಗುವುದಿಲ್ಲ. ಗಂಡು ದೈಹಿಕವಾಗಿ ದುರ್ಬಲಗೊಂಡಾಗ ಸಮಸ್ಯೆಗಳು ಉದ್ಭವಾಗುವುದನ್ನು ನೀವು ಗಮನಿಸಬಹುದು.


COMMERCIAL BREAK
SCROLL TO CONTINUE READING

ಗಂಡು ದೈಹಿಕವಾಗಿ ದುರ್ಬಲರಾಗಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಕೆಲಸದ ಒತ್ತಡ, ಅನಾರೋಗ್ಯ ಇರುಬಹುದು. ಇಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೇ ಡೈವೋರ್ಸ್‌ ನಂತಹ ಸಮಸ್ಯೆಗಳು ಉದ್ಬವವಾಗುತ್ತವೆ. ಇಲ್ಲವೆ ಇಬ್ಬರ ನಡುವೆ ವೈಮನಸ್ಸು, ಬೇರೆ ಪುರುಷರ ಸಂಗ ಮಾಡುವಂತಹ ಘಟನೆಗಳು ಜರುಗುತ್ತದೆ.


ಇದನ್ನೂ ಓದಿ:ಎಂದಾದರೂ ನೀವು ʼಈರುಳ್ಳಿ ಟೀʼ ಕುಡಿದಿದ್ದೀರಾ..? ಮಾಡುವ ವಿಧಾನ, ಪ್ರಯೋಜನಗಳು ಇಲ್ಲಿವೆ


ಇದೀಗ ನಾವು ಪುರುಷರ ಆರೋಗ್ಯ ಉತ್ತಮಗೊಳಿಸಲು ಸಹಕಾರಿಯಾಗಿರುವ ಅಮೂಲ್ಯ ಔಷಧೀಯ ಗುಣಗಳ ನಿಧಿ ಬಗ್ಗೆ ನಿಮಗೆ ಹೇಳುತ್ತವೆ. ಅದು ಬೇರೆಯಾವುದು ಅಲ್ಲ ಶತಾವರಿ ಬೇರು.. ಹೌದು ಪುರುಷರಿಗೆ, ಶತಾವರಿಯನ್ನು ವರವೆಂದು ಪರಿಗಣಿಸಲಾಗುತ್ತದೆ. ಶತಾವರಿಯನ್ನು ಸೇವಿಸುವುದರಿಂದ ವಿವಾಹಿತ ಪುರುಷರು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.


ಮದುವೆಯ ನಂತರ ಪುರುಷರು ನಿಯಮಿತವಾಗಿ ಶತಾವರಿಯನ್ನು ಸೇವಿಸಿದರೆ, ಅವರ ಲೈಂಗಿಕ ಕಾರ್ಯಕ್ಷಮತೆ ಸುಧಾರಿಸುತ್ತದೆ. ಅದಕ್ಕಾಗಿ ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲಿಗೆ ಶತಾವರಿ, ಇಂಗು ಪುಡಿ ಬೆರೆಸಿ ಕುಡಿಯಿರಿ. ಈ ರೀತಿ ಮಾಡುವುದರಿಂದ ಸ್ನಾಯುಗಳು ಸಹ ಬಲಗೊಳ್ಳುತ್ತವೆ.


ಪುರುಷರಿಗೆ ಕಡಿಮೆ ವೀರ್ಯಾಣು ಸಮಸ್ಯೆಯಿದ್ದರೂ ಹೆಚ್ಚಿನ ವೀರ್ಯ ಕೌಂಟ್‌ಗಾಗಿ ಶತಾವರಿ ತೆಗೆದುಕೊಳ್ಳಬಹುದು. ಇದರ ಸೇವನೆಯಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚುತ್ತದೆ. ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಶತಾವರಿ ಪುಡಿಯನ್ನು ಬೆರೆಸಿದ ಹಾಲನ್ನು ರಾತ್ರಿಯಲ್ಲಿ ನಿಯಮಿತವಾಗಿ ಕುಡಿಯಿರಿ.


ಇದನ್ನೂ ಓದಿ: ʼಬಡವರ ಬಾದಾಮಿʼ ಶೆಂಗಾದಿಂದ ಬೇಗ ತೂಕ ಕಡಿಮೆಯಾಗುತ್ತದೆ..! ಹೇಗೆ ಗೊತ್ತಾ..? ತಪ್ಪದೇ ತಿಳಿಯಿರಿ


ವಯಸ್ಸಾದ ಪುರುಷರು ಸಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಶತಾವರಿ ತೆಗೆದುಕೊಳ್ಳುವುದು ಸಹ ಪ್ರಯೋಜನಕಾರಿಯಾಗಿದೆ. ಈ ಮೂಲಿಕೆ ವಯಸ್ಸಿನ ನಂತರ ಗಂಡಿನಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ನ್ಯೂಸ್‌ ಇದನ್ನು ಅನುಮೋದಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.