ಬೆಂಗಳೂರು : ಬೇಸಿಗೆಯಲ್ಲಿ, ದೇಹಕ್ಕೆ ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ಈ ಕಾರಣಕ್ಕೆ ಜನರು ಹೆಚ್ಚಾಗಿ ನೀರಿನಂಶವಿರುವ ಹಣ್ಣುಗಳನ್ನು ಸೇವಿಸುತ್ತಾರೆ.  ಇಂಥಹ ಹಣ್ಣುಗಳ ಪೈಕಿ ಕಲ್ಲಂಗಡಿ ಹಣ್ಣಿನ ಹೆಸರು ಮೊದಲು ನೆನಪಿಗೆ ಬರುತ್ತದೆ. ಹೌದು ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತದೆ. ಕಲ್ಲಂಗಡಿಯಲ್ಲಿ ಶೇಕಡಾ 92 ರಷ್ಟು ನೀರು ಇರುತ್ತದೆ. ಈ ಹಿನ್ನೆಲೆಯಲ್ಲಿ ಕಲ್ಲಂಗಡಿಯನ್ನು ಬೇಸಿಗೆಯಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಹೆಚ್ಚು ಪ್ರಯೋಜನವಾಗುತ್ತದೆ. 


COMMERCIAL BREAK
SCROLL TO CONTINUE READING

ಅಲ್ಲದೆ ಈ ಹಣ್ಣಿನಲ್ಲಿ ಪ್ರೋಟೀನ್, ವಿಟಮಿನ್, ನಾರಿನಂಶ ಮುಂತಾದ ಹಲವು ಪೌಷ್ಟಿಕಾಂಶಗಳು ಕಂಡುಬರುತ್ತವೆ. ಇದರಲ್ಲಿರುವ ನಾರಿನಂಶವು ಹಸಿವನ್ನು ನಿಯಂತ್ರಿಸುವುದರಿಂದ ತೂಕವನ್ನು ಕಡಿಮೆ ಮಾಡಲು ಕೂಡಾ ಸಹಕಾರಿಯಾಗಿದೆ. ಆದರೆ ಹೆಚ್ಚಿನವರು ಈ ಹಣ್ಣನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಇದು ತಪ್ಪು. ಕಲ್ಲಂಗಡಿಯನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಬಹಳಷ್ಟು ತೊಂದರೆಗಳು ಉಂಟಾಗುತ್ತವೆ. 


ಇದನ್ನೂ ಓದಿ : Health Care Tips: ಲಾವಂಚ ಬೇರು ಬೆರೆಸಿರುವ ನೀರಿನ ಅದ್ಭುತ ಪ್ರಯೋಜನಗಳು ನಿಮಗೆ ತಿಳಿದಿವೆಯೇ?


ಪೌಷ್ಟಿಕಾಂಶ ಕಡಿಮೆಯಾಗುತ್ತದೆ :  ಕಲ್ಲಂಗಡಿಯನ್ನು ಫ್ರಿಡ್ಜ್‌ನಲ್ಲಿ ಇಡಬಾರದು. ಈ ಹಣ್ಣಿನ ಹೊರಭಾಗ ಅಂದರೆ ಸಿಪ್ಪೆ ತುಂಬಾ ದಪ್ಪವಾಗಿರುತ್ತದೆ. ಇದರಿಂದಾಗಿ ಕಲ್ಲಂಗಡಿ ಬೇಗನೆ ಕೆಡುವುದಿಲ್ಲ ಮತ್ತು ಸುಮಾರು 15-20 ದಿನಗಳವರೆಗೆ ಹಾಗೆಯೇ ಇಡಬಹುದು ಫ್ರಿಡ್ಜ್‌ನಲ್ಲಿ ಇಡುವ ಅಗತ್ಯವಿಲ್ಲ. ಒಂದು ವೇಳೆ ಹಣ್ಣನ್ನು ಫ್ರಿಜ್‌ನಲ್ಲಿ ಇಡಲೇ ಬೇಕು ಎಂದಾದರೆ ಈ ಹಣ್ಣನ್ನು ಕತ್ತರಿಸುವ ಮೊದಲು ಇಡಿ. ಕತ್ತರಿಸಿದ ನಂತರ ಯಾವುದೇ ಕಾರಣಕ್ಕೂ ಕಲ್ಲಂಗಡಿ ಯನ್ನು ಫ್ರಿಜ್ ನಲ್ಲಿಡಬಾರದು.  ಯಾಕೆಂದರೆ ರೆಫ್ರಿಜರೇಟರ್‌ನಲ್ಲಿ ಇರಿಸಲಾದ ಕಲ್ಲಂಗಡಿ ಅದರ ಪೌಷ್ಟಿಕಾಂಶವನ್ನು ಕಳೆದು ಹೋಗುತ್ತದೆ. ಜೊತೆಗೆ ಅದರಲ್ಲಿ ಕಂಡುಬರುವ ಕ್ಯಾರೊಟಿನಾಯ್ಡ್ ಮಟ್ಟವೂ ಕಡಿಮೆಯಾಗುತ್ತದೆ.


ಕೋಲ್ಡ್ ಕಲ್ಲಂಗಡಿ ತಿನ್ನುವುದರಿಂದ ಆಗುವ ಅನಾನುಕೂಲಗಳು : 
ಕಲ್ಲಂಗಡಿ ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಅತಿ ಹೆಚ್ಚು ನೀರಿನಂಶವಿರುವ ಹಣ್ಣು.  ಆದರೆ ಇದನ್ನು ಫ್ರಿಜ್ ನಲ್ಲಿಟ್ಟರೆ ಅದರ ಪೋಶಕಾಂಶ ಕಡಿಮೆಯಾಗುತ್ತದೆ. ಜೊತೆಗೆ ಕೋಲ್ಡ್ ಕಲ್ಲಂಗಡಿ ತಿಂದರೆ ಕೆಮ್ಮು, ನೆಗಡಿ ಬರುವ ಸಾಧ್ಯತೆ ಇರುತ್ತದೆ. ಇಷ್ಟು ಮಾತ್ರವಲ್ಲ, ಕತ್ತರಿಸಿದ  ಕಲ್ಲಂಗಡಿ ಹಣ್ಣನ್ನು ಫ್ರಿಜ್ ನಲ್ಲಿಟ್ಟು ತಿಂದರೆ, ಫುಡ್ ಪೋಯಿಜನ್ ಆಗುವ ಸಾಧ್ಯತೆ ಇದೆ.  ಹಾಗಾಗಿ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಫ್ರಿಜ್ ನಲ್ಲಿಡಲೇ ಬಾರದು. ಹೀಗೆ ಮಾಡಿದರೆ  ನಿಮ್ಮ ಆರೋಗ್ಯ ಅಥವಾ ನಿಮ್ಮ ಕುಟುಂಬದ ಸದಸ್ಯರ ಆರೋಗ್ಯವನ್ನು ಹಾಳುಮಾಡಿಕೊಳ್ಳುವಂತಾಗುತ್ತದೆ.  

ಇದನ್ನೂ ಓದಿ :   Side Effects Of Running: ಫಿಟ್ನೆಸ್ ಕಾಯ್ದುಕೊಳ್ಳುವ ಭರದಲ್ಲಿ ನೀವೂ ಕೂಡ ಈ ತಪ್ಪು ಮಾಡುತ್ತಿಲ್ಲವಲ್ಲ!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.