ಬೆಂಗಳೂರು : ಮೂಲಂಗಿ ಅನೇಕ ಗುಣಗಳಿಂದ ಕೂಡಿದೆ. ಸಲಾಡ್‌ಗಳು,  ಪಲ್ಯ, ಸಾಂಬಾರ್ ಮತ್ತು ಪರಾಟಾಗಳ ರೂಪದಲ್ಲಿ ಮೂಲಂಗಿಯನ್ನು ತಿನ್ನಬಹುದು. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳಾಗುತ್ತವೆ.   ಆದರೆ, ತಪ್ಪಾದ ಸಮಯದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.  ರಾತ್ರಿ ಹೊತ್ತು ಮೂಲಂಗಿಯನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ರಾತ್ರಿ ವೇಳೆ ಮೂಲಂಗಿಯನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಾಗುತ್ತವೆ.  


COMMERCIAL BREAK
SCROLL TO CONTINUE READING

ರಾತ್ರಿ ಮೂಲಂಗಿ ತಿನ್ನುವುದರಿಂದ ಆಗುವ ಅನಾನುಕೂಲಗಳು :
ದೇಹದಲ್ಲಿ ನೋವು :


ರಾತ್ರಿ ಹೊತ್ತು ಮೂಲಂಗಿಯನ್ನು ಸೇವಿಸುವುದರಿಂದ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.  ಒಂದು ವೇಳೆ ಮೊದಲೇ ದೇಹದ ಯಾವುದಾದರೂ ಭಾಗದಲ್ಲಿ ನೋವು ಇದ್ದರೆ, ಮೂಲಂಗಿ ಸೇವನೆಯಿಂದ ದೂರ ಇರುವುದು ಒಳ್ಳೆಯದು. ಇನ್ನು ರಾತ್ರಿ  ವೇಳೆ, ಮೂಲಂಗಿ  ತಿನ್ನುವುದರಿಂದ ಲೋ ಬಿಪಿ ಸಮಸ್ಯೆಯೂ ಎದುರಾಗಬಹುದು. ಏಕೆಂದರೆ ಮೂಲಂಗಿಯಲ್ಲಿ ದೇಹಕ್ಕೆ ಹಾನಿಕಾರಕವಾಗಿರುವ ಹೈಪೊಗ್ಲಿಸಿಮಿಕ್ ಅಂಶ ಇರುತ್ತದೆ. 


ಇದನ್ನೂ ಓದಿ : Heart Health: ನಿತ್ಯ ಈ ಕೆಲಸ ಮಾಡಿದ್ರೆ ಸಾಕು, ಹೃದ್ರೋಗ ನಿಮ್ಮ ಹತ್ತಿರ ಸುಳಿಯುವುದಿಲ್ಲ


ಹೊಟ್ಟೆ ನೋವು :
ಮೂಲಂಗಿಯಲ್ಲಿ ಐರನ್ ಅಂಶ ಅಧಿಕವಾಗಿರುತ್ತದೆ. ಐರನ್ ನ ಅತಿಯಾದ ಸೇವನೆಯಿಂದ, ಹೊಟ್ಟೆಯಲ್ಲಿ ತೊಂದರೆಗಳು, ಮಲಬದ್ಧತೆ, ಗ್ಯಾಸ್ ಇತ್ಯಾದಿ ಸಮಸ್ಯೆಗಳು ಎದುರಾಗುತ್ತದೆ. ಅಷ್ಟೇ ಅಲ್ಲ, ರಾತ್ರಿ ವೇಳೆ ಮೂಲಂಗಿಯನ್ನು ಸೇವಿಸಿದರೆ ಮೊಣಕಾಲು, ಸೊಂಟ, ಭುಜ ಅಥವಾ ಕಾಲಿನಲ್ಲಿ ನೋವು  ಕಾಣಿಸಿಕೊಳ್ಳುತ್ತದೆ.  


ಕೀಲು  ನೋವು :
ರಾತ್ರಿ ವೇಳೆ ಮೂಲಂಗಿ ಸೇವಿಸುವುದರಿಂದ ಕೀಲುಗಳಲ್ಲಿ ನೋವು ಉಂಟಾಗುತ್ತದೆ. ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆ ಇರುವವರು ರಾತ್ರಿ ವೇಳೆ ಮೂಲಂಗಿ ಸೇವಿಸುವುದನ್ನು ತಪ್ಪಿಸಬೇಕು. ಮತ್ತೊಂದೆಡೆ, ಸಂಧಿವಾತದ ಸಮಸ್ಯೆ ಇದ್ದರೆ, ಮೂಲಂಗಿಯಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳಬೇಕು. 


ಇದನ್ನೂ ಓದಿ : Diabetes: ಖಾಲಿ ಹೊಟ್ಟೆಯಲ್ಲಿ ಸೇವಿಸಿ ಈ ಜ್ಯೂಸ್‌.. ನಿಯಂತ್ರಣದಲ್ಲಿರುತ್ತೆ ಡಯಾಬಿಟಿಸ್!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.