ನವದೆಹಲಿ : ತಿನ್ನುವ ಎಲ್ಲಾ ವಸ್ತುಗಳನ್ನು ಫ್ರಿಜ್ನಲ್ಲಿಡುವ ಅವಶ್ಯಕತೆ ಇದೆಯಾ..? ನಾವಂತೂ ಏನಾದರೂ ಸ್ವಲ್ಪ ಉಳಿದರೆ ಅದನ್ನು ಫ್ರಿಜ್ ನಲ್ಲಿಡುತ್ತೇವೆ. ಫ್ರಿಜ್ನಲ್ಲಿಟ್ಟ ಆಹಾರ ವಸ್ತುಗಳು ಎಷ್ಟು ಉತ್ತಮ. ಇದರ ಬಗ್ಗೆ ತಜ್ಞರು ಏನು ಹೇಳುತ್ತಾರೆ.?


COMMERCIAL BREAK
SCROLL TO CONTINUE READING

ಕಟ್ ಮಾಡಿದ ಕಲ್ಲಂಗಡಿಯನ್ನು ಫ್ರಿಜ್ ನಲ್ಲಿಡಬಾರದು. 
ಆಹಾರ ತಜ್ಞರ ಪ್ರಕಾರ ಮಾವಿನಹಣ್ಣು (Mango), ಕಲ್ಲಂಗಡಿ ಹಣ್ಣು (Water melon) ಮುಂತಾದ ಹಣ್ಣುಗಳನ್ನು ಕಟ್ ಮಾಡಿ ಫ್ರಿಜ್ನಲ್ಲಿಡಬೇಡಿ.  ಯಾಕೆಂದರೆ ಕಡಿಮೆ ತಾಪಮಾನ ಇದ್ದಾಗ ಈ ಹಣ್ಣುಗಳು ಬೇಗ ಹಾಳಾಗುತ್ತವೆ.  ರೂಂ ಟೆಂಪರೇಚರಿನಲ್ಲಿ ಬೇಗ ಹಾಳಾಗುವುದಿಲ್ಲ. ಹಾಗಾಗಿ ಮಾವು ಮತ್ತು ಕಲ್ಲಂಗಡಿಯನ್ನು ಕಟ್ ಮಾಡಿ ಫ್ರಿಜ್ (dont keep cut fruits in fridge) ನಲ್ಲಿಡಬಾರದು. 


ಇದನ್ನೂ ಓದಿ : Vitamin A : 'ವಿಟಮಿನ್-A' ಕೊರತೆಯ ಲಕ್ಷಣಗಳೇನು? ಸಮಸ್ಯೆಗಳು ಯಾವುವು? ನಿಯಂತ್ರಣ ಹೇಗೆ? ಇಲ್ಲಿದೆ ಮಾಹಿತಿ


ತಜ್ಞರ ಪ್ರಕಾರ ಕಲ್ಲಂಗಡಿ ವಿಶೇಷವಾಗಿ ಎಥಿಲಿನ್ ಬಗ್ಗೆ ಸಂವೇದನಶೀಲವಾಗಿರುತ್ತದೆ.  ಎಥಿಲಿನ್ ಒಂದು ಹಾರ್ಮೊನ್ ಆಗಿದೆ. ಇದು ಹಣ್ಣು ಮತ್ತು ತರಕಾರಿಯನ್ನು (Vegetables) ಬೇಯಿಸುವಾಗ ಹೊಮ್ಮುತ್ತದೆ. ಈ ಹಾರ್ಮೊನು ಬೇರೆ ಹಣ್ಣು ತರಕಾರಿಗಳ ಗುಣಮಟ್ಟದ ಮೇಲೂ ಪ್ರಭಾವ ಬೀರುತ್ತದೆ. ಹಾಗಾಗಿ, ಕಟ್ ಮಾಡಿದ ಮಾವು ಅಥವಾ ಕಲ್ಲಂಗಡಿಯನ್ನು ತಿನ್ನುವ ಇತರ ವಸ್ತುಗಳಿಂದ ದೂರ ಇಡಬೇಕು. 


ಅಮೇರಿಕದ ವಿವಿಯೊಂದರ ಸಂಶೋಧನೆ ಪ್ರಕಾರ ಕಲ್ಲಂಗಡಿ, ಮಾವು ಮುಂತಾದ ಹಣ್ಣುಗಳನ್ನು ರೂಂ ಟೆಂಪರೇಚರಿನಲ್ಲೇ (friuits in room temperature)ಇಡಬೇಕು.  ಸಾಮಾನ್ಯವಾಗಿ ನಾವು ಮಾರುಕಟ್ಟೆಯಿಂದ ಹಣ್ಣು, ತರಕಾರಿ ತಂದು ತೊಳೆದು ಫ್ರಿಜ್ ನಲ್ಲಿ (fridge) ಇಡುತ್ತೇವೆ.  ಆದರೆ, ಫ್ರಿಜ್ ನಲ್ಲಿಟ್ಟರೆ ಅದರ ಸ್ವಾದ ಕೆಡುತ್ತದೆ. ಒಂದು ವೇಳೆ ಫ್ರಿಜ್ ನಲ್ಲಿಟ್ಟರೂ,  ಕಟ್ ಮಾಡಿದ ಹಣ್ಣುಗಳನ್ನು ಮಾತ್ರ ಫ್ರಿಜ್ ನಲ್ಲಿಡಬೇಡಿ. ಕಟ್ ಮಾಡಿದ ಹಣ್ಣುಗಳನ್ನು ಫ್ರಿಜ್ ನಲ್ಲಿಟ್ಟರೆ ರುಚಿಯೂ ಕೆಡುತ್ತದೆ. ಅದರಲ್ಲಿರುವ ಪೋಷಕಾಂಶಗಳೂ ಕರಗುತ್ತವೆ.


ಇದನ್ನೂ ಓದಿ : Food Combination For Weight Loss: ತೂಕ ಇಳಿಸಿಕೊಳ್ಳಲು ಈ ಆಹಾರವನ್ನು ಒಟ್ಟಿಗೆ ಸೇವಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.