Black Carrot For Weight Loss : ಕ್ಯಾರೆಟ್ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.ಕ್ಯಾರೆಟ್ ವರ್ಷವಿಡೀ ಮಾರುಕಟ್ಟೆಯಲ್ಲಿ ಲಭ್ಯವಿರುವ ತರಕಾರಿ.ಕ್ಯಾರೆಟ್ ಅನೇಕ ರೀತಿಯ ಪೋಷಕ ತತ್ವಗಳನ್ನು ಒಳಗೊಂಡಿದೆ.ತೂಕ ನಷ್ಟ ಬಯಸುವವರಿಗೆ ಇದು ಹೇಳಿ ಮಾಡಿಸಿದ ತರಕಾರಿ. 


COMMERCIAL BREAK
SCROLL TO CONTINUE READING

ಕ್ಯಾರೆಟ್ ನಲ್ಲಿಯೂ ಹಲವು ವಿಧ. ಹಲವು ಬಣ್ಣದ ಕ್ಯಾರೆಟ್ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಹಳದಿ, ಕೇಸರಿ, ಕಡು ಕೇಸರಿ, ಕೆಂಪು ಮತ್ತು ಕಪ್ಪು ಹೀಗೆ ವಿವಿಧ ಬಣ್ಣಗಳ ಕ್ಯಾರೆಟ್ ಇವೆ. ಇದರಲ್ಲಿ ದೇಹ ತೂಕ ಕಳೆದುಕೊಳ್ಳಲು ಬಯಸುವವರು ಇದೇ ಬಣ್ಣದ ಕ್ಯಾರೆಟ್ ಸೇವಿಸಬೇಕು. ಹೌದು, ನಾವಿಲ್ಲಿ ಹೇಳುತ್ತಿರುವುದು ಕಪ್ಪು ಬಣ್ಣದ ಕ್ಯಾರೆಟ್ ಬಗ್ಗೆ. 


ಇದನ್ನೂ ಓದಿ : Black Coffee Benefits: ತೂಕ ಇಳಿಕೆಯಷ್ಟೇ ಅಲ್ಲ, ಮಧುಮೇಹಕ್ಕೂ ದಿವ್ಯೌಷಧ ಬ್ಲಾಕ್ ಕಾಫಿ


ಕಪ್ಪು ಬಣ್ಣದ ಕ್ಯಾರೆಟ್ ಮಾರುಕಟ್ಟೆಯಲ್ಲಿ ಅಪರೂಪವಾಗಿ ಕಂಡುಬಂದರೂ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ಪೋಷಕಾಂಶಗಳ ಆಗರವೇ ಆಗಿದೆ. ನಿಯಮಿತವಾಗಿ ಕಪ್ಪು ಕ್ಯಾರೆಟ್ ಅನ್ನು ಸೇವಿಸಿದರೆ, ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಈ ಕ್ಯಾರೆಟ್ ನಲ್ಲಿರುವ ಬೊಜ್ಜು ವಿರೋಧಿ ಗುಣವು ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸುತ್ತದೆ. 


ತೂಕ ಕಡಿಮೆ ಮಾಡಲು ಕಪ್ಪು ಕ್ಯಾರೆಟ್ : 
ಕಪ್ಪು ಕ್ಯಾರೆಟ್‌ನಲ್ಲಿ ಫೈಬರ್, ವಿಟಮಿನ್ ಎ,ವಿಟಮಿನ್ ಬಿ,ವಿಟಮಿನ್ ಸಿ, ಪೊಟ್ಯಾಸಿಯಮ್, ಮ್ಯಾಂಗನೀಸ್, ಕಬ್ಬಿಣ ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ. ಇದು ತುಂಬಾ ಕಡಿಮೆ ಪ್ರಮಾಣದ ಕ್ಯಾಲೋರಿ ಮತ್ತು ಸಕ್ಕರೆಯನ್ನು ಹೊಂದಿರುತ್ತದೆ.ಹಾಗಾಗಿ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಕಪ್ಪು ಕ್ಯಾರೆಟ್‌ನಲ್ಲಿ ಬಹಳಷ್ಟು ಪ್ರಮಾಣದಲ್ಲಿ ಫೈಬರ್ ಕಂಡುಬರುತ್ತದೆ. ಈ ತರಕಾರಿಯು ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡುವುದಲ್ಲದೆ, ದೇಹದ ವಿಷವನ್ನು ತೆಗೆದುಹಾಕುವುದು. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವುದು, ಕೊಲೆಸ್ಟ್ರಾಲ್ ಅನ್ನು ಕೂಡಾ ಕಡಿಮೆ ಮಾಡುವುದು. 


ಕಪ್ಪು ಕ್ಯಾರೆಟ್ ಅನ್ನು ಹೇಗೆ ಸೇವಿಸುವುದು? :
-ಕ್ಯಾರೆಟ್ ಅನ್ನು ಸೇವಿಸಲು ಸುಲಭವಾದ ಮಾರ್ಗವೆಂದರೆ ಅವುಗಳನ್ನು ಚೆನ್ನಾಗಿ ತೊಳೆದು ನೇರವಾಗಿ ತಿನ್ನುವುದು. ಮೇಲಿನ ಮಣ್ಣು ಅಥವಾ ಕೊಳೆಯನ್ನು ಸರಿಯಾಗಿ ಸ್ವಚ್ಛಗೊಳಿಸಳು ಸಾಧ್ಯವಾಗದಿದ್ದರೆ ಸಿಪ್ಪೆ ಸುಲಿದು ತಿನ್ನುವುದು ಒಳ್ಳೆಯದು. 
-ಕ್ಯಾರೆಟ್ ಅನ್ನು ಹೆಚ್ಚಾಗಿ ಸಲಾಡ್ ರೂಪದಲ್ಲಿ ಬಳಸಲಾಗುತ್ತದೆ. ಕಪ್ಪು ಕ್ಯಾರೆಟ್ ಅನ್ನು ನೀರುಳ್ಳಿ, ಟೊಮೆಟೊ, ಮೂಲಂಗಿ, ಸೌತೆಕಾಯಿ, ನಿಂಬೆ ಮತ್ತು ಉಪ್ಪಿನೊಂದಿಗೆ ಬೆರೆಸಿ ತಿನ್ನಬಹುದು. 
-ನಿಮಗೆ ಕ್ಯಾರೆಟ್ ಅನ್ನು ಜಗಿದು ತಿನ್ನಲು ಇಷ್ಟವಿಲ್ಲದಿದ್ದರೆ, ಅದನ್ನು ಸ್ವಚ್ಛಗೊಳಿಸಿ,ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ನಂತರ ಇದರ ರಸ ತೆಗೆದು ಕುಡಿಯಿರಿ. ಇದು ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯ ಮಾಡುತ್ತದೆ.


ಇದನ್ನೂ ಓದಿ : ಹೊಟ್ಟೆಯ ಭಾಗದಲ್ಲಿಯೇ ಸೇರಿಕೊಂಡಿರುವ ಬೊಜ್ಜು ಕರಗಿಸಲು ತುಳಸಿ ಎಲೆಯೊಂದೇ ಸಾಕು! ಹೀಗೆ ಮತ್ತು ಈ ಸಮಯದಲ್ಲಿಯೇ ಬಳಸಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.