ಉಪ್ಪಿನಕಾಯಿ ಜಾಸ್ತಿ ತಿಂತೀರಾ? ಹಾಗಿದ್ರೆ ಈ ಸಮಸ್ಯೆಗಳು ಖಚಿತ!
ಉಪ್ಪಿನಕಾಯಿ ಇಷ್ಟ ಅಂತ ಸಿಕ್ಕಾಪಟ್ಟೆ ತಿಂದ್ರೆ ಆರೋಗ್ಯವೂ ಅಷ್ಟೇ ಹದಗೆಡುತ್ತದೆ. ಹಾಗಾಗಿ ಉಪ್ಪಿನಕಾಯಿ ತಿನ್ನೋದ್ರಿಂದ ಏನೆಲ್ಲಾ ತೊಂದರೆ ಆಗುತ್ತೆ ಎನ್ನುವ ಅಂಶಗಳನ್ನೊಮ್ಮೆ ತಿಳಿದುಕೊಳ್ಳಿ....
ಬೆಂಗಳೂರು: ಉಪ್ಪಿನಕಾಯಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ... ಮೃಷ್ಟಾನ್ನ ಭೋಜನ ಬಡಿಸಿದರೂ ಪಕ್ಕದಲ್ಲಿ ಉಪ್ಪಿನಕಾಯಿ ಇದ್ದರೆ ಊಟದ ಮಜವೇ ಬೇರೆ ಅನ್ನೋದು ಊಟ ಬಲ್ಲವರ ಮಾತು! ಆದರೆ, ಉಪ್ಪಿನಕಾಯಿ ಇಷ್ಟ ಅಂತ ಸಿಕ್ಕಾಪಟ್ಟೆ ತಿಂದ್ರೆ ಆರೋಗ್ಯವೂ ಅಷ್ಟೇ ಹದಗೆಡುತ್ತದೆ. ಹಾಗಾಗಿ ಉಪ್ಪಿನಕಾಯಿ ತಿನ್ನೋದ್ರಿಂದ ಏನೆಲ್ಲಾ ತೊಂದರೆ ಆಗುತ್ತೆ ಎನ್ನುವ ಅಂಶಗಳನ್ನೊಮ್ಮೆ ತಿಳಿದುಕೊಳ್ಳಿ....
ಉಪ್ಪಿನಕಾಯಿ ತಿನ್ನುವುದರಿಂದ ಆಗುವ ಸಮಸ್ಯೆಗಳು
* ಉಪ್ಪಿನಕಾಯಿಯಲ್ಲಿ ಖಾರ ಹೆಚ್ಚಾಗಿರುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಟ್ಟಿಟ್ಟ ಬುತ್ತಿ.
* ಹಲವು ದಿನಗಳ ಕಾಲ ಉಪ್ಪಿನಕಾಯಿ ಶೇಖರಿಸಿ ಇಟ್ಟು ತಿನ್ನುವುದರಿಂದ ಹೊಟ್ಟೆ ಉರಿ, ಎದೆ ಉರಿಗೆ ಕಾರಣವಾಗುತ್ತದೆ.
* ಇದರಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುವದರಿಂದ ಶರೀರದಲ್ಲಿ ಸೋಡಿಯಂನ ಅಂಶ ಹೆಚ್ಚಾಗುತ್ತದೆ.
* ಇದರಿಂದಾಗಿ ರೋಗನಿರೋಧಕ ಶಕ್ತಿಯೂ ಕುಂಠಿತವಾಗುತ್ತದೆ.
* ಉಪ್ಪಿನಕಾಯಿ ಹೆಚ್ಚು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಉಪ್ಪು, ಖಾರದ ಅಂಶಗಳು ಹೆಚ್ಚಾಗಿರುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳಿಗೂ ಕಾರಣವಾಗುತ್ತದೆ.
* ಅತಿಯಾಗಿ ಖಾರ ಸೇವಿಸುವುದರಿಂದ ಕರುಳಿನಲ್ಲಿ ಹುಣ್ಣಾಗಿ ಹೊಟ್ಟೆ ಉರಿ ಕಾಣಿಸಿಕೊಳ್ಳುತ್ತದೆ.
* ಅಜೀರ್ಣ ಸಮಸ್ಯೆ ಉಲ್ಬಣವಾಗಿ ಮಲಬದ್ಧತೆಗೂ ಸಹ ಕಾರಣವಾಗಬಹುದು.