Side Effects of Cold water : ಎಪ್ರಿಲ್ ತಿಂಗಳು ಆರಂಭವಾಗುತ್ತಿದ್ದಂತೆ ವಾತಾವರಣದಲ್ಲಿ ಬದಲಾವಣೆ ಶುರುವಾಗಿದೆ.ಕೆಲವು ರಾಜ್ಯಗಳಲ್ಲಿ ಬಿಸಿಗಾಳಿಯೂ ಶುರುವಾಗಿದೆ.ಬಿಸಿಲಿನ ತಾಪ ಹೆಚ್ಚಾದಂತೆ ಜನರು ತಣ್ಣೀರಿನ ಬಳಕೆಯನ್ನು ಕೂಡಾ ಹೆಚ್ಚು ಮಾಡುತ್ತಾರೆ.ಬಿಸಿಲಿನಿಂದ ಬಂದ ತಕ್ಷಣ ಜನ ನೇರವಾಗಿ ಫ್ರಿಡ್ಜ್ ನಲ್ಲಿಟ್ಟಿರುವ ನೀರನ್ನು ಕುಡಿಯುತ್ತಾರೆ.ಆದರೆ, ಈ ತಣ್ಣೀರು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 


COMMERCIAL BREAK
SCROLL TO CONTINUE READING

ಬಿಸಿಲಲ್ಲಿ ತಣ್ಣೀರು ಕುಡಿಯುವಾಗ ತಕ್ಷಣಕ್ಕೆ ಆಹಾ ಎನಿಸುತ್ತದೆ.ಆದರೆ ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಫ್ರಿಜ್ ನೀರು ನಮ್ಮ ಆರೋಗ್ಯದ ಮೇಲೆ ಯಾವ ರೀತಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದನ್ನು ನೀವೂ ತಿಳಿದರೆ ಈ ನೀರಿನ ಸಹವಾಸಕ್ಕೂ ನೀವು ಹೋಗುವುದಿಲ್ಲ.ಹಾಗಾದರೆ ಫ್ರಿಜ್ ನೀರು ಅಥವಾ ಐಸ್ ನೀರು ನಮ್ಮ ಆರೋಗ್ಯದ ಮೇಲೆ ಬೀರುವ ಅಡ್ಡ ಪರಿಣಾಮಗಳು ಯಾವುವು ನೋಡೋಣ. 


ಇದನ್ನೂ ಓದಿ :  ಬೇಸಿಗೆಯಲ್ಲಿ ಈ ಜ್ಯೂಸ್ ಕುಡಿಯಿರಿ, ಅಪ್ಪಿ ತಪ್ಪಿಯೂ ಏರುವುದಿಲ್ಲ ಬ್ಲಡ್ ಶುಗರ್!


ತಣ್ಣೀರು ಕುಡಿಯುವುದರಿಂದ ಉಂಟಾಗುವ ತೊಂದರೆಗಳು :
ಆಹಾರ ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ : 

ನಾವು ಏನೇ ಆಹಾರ ತಿಂದರೂ ಹೊಟ್ಟೆಯು ಆಹಾರವನ್ನು ಜೀರ್ಣಗೊಳಿಸುವ ಆಸಿದ ಅನ್ನು ಉತ್ಪಾದಿಸುತ್ತದೆ.ತಣ್ಣೀರು ಕುಡಿಯುವುದರಿಂದ ಹೊಟ್ಟೆಯ ಉಷ್ಣತೆ ಕಡಿಮೆಯಾಗುತ್ತದೆ.ಇದರಿಂದಾಗಿ ಆ ಆಸಿಡ್ ಉತ್ಪಾದನೆ ಕೂಡಾ ಕಡಿಮೆಯಾಗುತ್ತದೆ.ಹೀಗಾದಾಗ ಆಹಾರ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.


ಹೃದಯದ ಮೇಲೆ ಒತ್ತಡ : 
ತಣ್ಣೀರು ದೇಹವನ್ನು ಪ್ರವೇಶಿಸಿದಾಗ, ದೇಹ ಅದನ್ನು ಬಿಸಿಮಾಡಲು ಹೆಚ್ಚಿನ ಶಕ್ತಿಯನ್ನು ಬಳಸಬೇಕಾಗುತ್ತದೆ.ಇದು ಹೃದಯದ ಮೇಲೆ ಒತ್ತಡವನ್ನುಂಟು ಮಾಡುತ್ತದೆ.ಇದು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. 


ದೇಹಕ್ಕೆ ಬೇಕಾದ ನೀರು ಸಿಗುವುದಿಲ್ಲ: 
ದೇಹಕ್ಕೆ ನೀರು ಬೇಕಾದಾಗ ಬಾಯಾರಿಕೆ ಉಂಟಾಗುತ್ತದೆ.ತಣ್ಣೀರು ಕುಡಿದರೆ ಬಾಯಾರಿಕೆಯಾಗುವುದಿಲ್ಲ ಮತ್ತು ದೇಹಕ್ಕೆ ಬೇಕಾದ ನೀರು ಸಿಗುವುದಿಲ್ಲ. ಇದು ನಿರ್ಜಲೀಕರಣಕ್ಕೂ ಕಾರಣವಾಗಬಹುದು. 


ಇದನ್ನೂ ಓದಿ :  Kidney Health: ಕಿಡ್ನಿ ವೈಫಲ್ಯದ ಮುನ್ಸೂಚನೆ ಪಾದಗಳಲ್ಲಿ ಕಾಣುವ ಈ ಬದಲಾವಣೆ !!


ತಲೆನೋವು :
ತಣ್ಣೀರಿನಿಂದ ಅನೇಕ ಜನರಲ್ಲಿ ತಲೆನೋವು ಕಾಣಿಸಿಕೊಳ್ಳಬಹುದು.ಏಕೆಂದರೆ ತಣ್ಣೀರು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದು ತಲೆನೋವಿಗೆ ಕಾರಣವಾಗಬಹುದು. 


ಗಂಟಲು ಕೆರತ : 
ಯಾವುದೇ ವ್ಯಕ್ತಿಯು ಹಠಾತ್ತನೆ ತಣ್ಣೀರು ಕುಡಿಯಲು ಪ್ರಾರಂಭಿಸಿದರೆ, ಗಂಟಲಿನ ಸಮಸ್ಯೆಗಳಿಂದ ಬಳಲುವ ಸಾಧ್ಯತೆಗಳು ಹಲವು ಪಟ್ಟು ಹೆಚ್ಚಾಗುತ್ತದೆ.ಇದು ಶೀತ-ಕೆಮ್ಮಿಗೂ ಕಾರಣವಾಗಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.